ಹೊಸ ಆಧಾರ್ ಕಾರ್ಡ್‌ ಮಾಡಿಸಲು ಈ ದಾಖಲೆಗಳು ಕಡ್ಡಾಯ : ಹೊಸ ಮಾರ್ಗಸೂಚಿಯಲ್ಲೇನಿದೆ ?

New Aadhaar Card Guidelines : ಆಧಾರ್‌ ಕಾರ್ಡ್‌ ಭಾರತದಲ್ಲಿ ಕಡ್ಡಾಯಗೊಳಿಸಲಾಗಿದೆ. ಪ್ರತೀ ಭಾರತೀಯರು ಆಧಾರ್‌ ಕಾರ್ಡ್‌ ಹೊಂದಿರಲೇ ಬೇಕು. ಅದ್ರಲ್ಲೂ ಹೊಸ ಆಧಾರ್‌ ಕಾರ್ಡ್‌ ಹೊಂದಲು ಮಾರ್ಗಸೂಚಿ ಪ್ರಕಟಿಸಲಾಗಿದೆ. ಅದ್ರಲ್ಲೂ ಹಲವು ದಾಖಲೆಗಳನ್ನು ಕಡ್ಡಾಯಗೊಳಿಸಲಾಗಿದೆ.

New Aadhaar Card Guidelines : ಆಧಾರ್‌ ಕಾರ್ಡ್‌ ಭಾರತದಲ್ಲಿ ಕಡ್ಡಾಯಗೊಳಿಸಲಾಗಿದೆ. ಪ್ರತೀ ಭಾರತೀಯರು ಆಧಾರ್‌ ಕಾರ್ಡ್‌ ಹೊಂದಿರಲೇ ಬೇಕು. ಅದ್ರಲ್ಲೂ ಹೊಸ ಆಧಾರ್‌ ಕಾರ್ಡ್‌ ಹೊಂದಲು ಮಾರ್ಗಸೂಚಿ ಪ್ರಕಟಿಸಲಾಗಿದೆ. ಅದ್ರಲ್ಲೂ ಹಲವು ದಾಖಲೆಗಳನ್ನು ಕಡ್ಡಾಯಗೊಳಿಸಲಾಗಿದೆ.

ನೀವೇನಾದ್ರೂ ಹೊಸದಾಗಿ ಆಧಾರ್‌ ಕಾರ್ಡ್‌ಗೆ ಅರ್ಜಿಯನ್ನು ಸಲ್ಲಿಸಲು ಬಯಸಿದ್ರೆ ಹೊಸ ಮಾರ್ಗಸೂಚಿಯ ನಿಯಮಗಳನ್ನು ಅರಿತುಕೊಳ್ಳುವುದು ಬಹಳ ಮುಖ್ಯ. ಆಧಾರ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಅರ್ಜಿ ನಮೂನೆ, ಅರ್ಜಿದಾರರ ವೈಯಕ್ತಿಕ ವಿವರ ಹಾಗೂ ಹಲವು ದಾಖಲೆಗಳನ್ನು ಕಡ್ಡಾಯಗೊಳಿಸಲಾಗಿದೆ.

New Aadhaar Card Guidelines these Documents are mandatory
Image Credit to Original Source

ಆಧಾರ್‌ ಕಾರ್ಡ್‌ ಪಡೆಯಲು ಗುರುತಿನ ಪುರಾವೆಯಾಗಿ ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ (ಎಸ್‌ಎಲ್‌ಸಿ) ಅಥವಾ ಸ್ಕೂಲ್ ಟ್ರಾನ್ಸ್‌ಫರ್ ಸರ್ಟಿಫಿಕೇಟ್ (ಟಿಸಿ) ಹೆಸರು ಮತ್ತು ಛಾಯಾಚಿತ್ರವನ್ನು ಬಳಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ : ಜನಧನ್‌ ಖಾತೆ ಹೊಂದಿದವರಿಗೆ ಗುಡ್‌ನ್ಯೂಸ್‌ : ನಿಮ್ಮ ಖಾತೆಗೆ ಜಮೆ ಆಗಲಿದೆ 2 ಲಕ್ಷ ರೂಪಾಯಿ

ಆಧಾರ್‌ ವಿಳಾಸದ ದಾಖಲೆಯಾಗಿ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು, ಪಾಸ್‌ಪೋರ್ಟ್, ವಿದ್ಯುತ್/ನೀರು/ಲ್ಯಾಂಡ್‌ಲೈನ್ ಬಿಲ್‌ಗಳು (ಕಳೆದ ಮೂರು ತಿಂಗಳುಗಳು), ಪಡಿತರ ಚೀಟಿ ಮುಂತಾದ ದಾಖಲೆ ಬಳಸಬಹುದು. ಜನ್ಮ ದಿನಾಂಕದ ಪುರಾವೆಯಾಗಿ ಜನ್ಮ ಪ್ರಮಾಣ ಪತ್ರ, ಪಾಸ್‌ಪೋರ್ಟ್‌, ಶಾಲೆಯ ವರ್ಗಾವಣೆ ಪ್ರಮಾಣಪತ್ರದಲ್ಲಿನ ಹೆಸರು ಹಾಗೂ ಜನ್ಮದಿನಾಂಕದ ದಾಖಲೆಯಾಗಿಯೂ ಬಳಸಿಕೊಳ್ಳಬಹುದು.

ಆಧಾರ್‌ ಕಾರ್ಡ್‌ ಪಡೆಯಲು ಯಾರು ಅರ್ಹರು ?
ಐದು ವರ್ಷದ ಒಳಗಿನ ಮಕ್ಕಳಿಗೂ ಕೂಡ ಬಾಲ ಆಧಾರ್‌ ಕಾರ್ಡ್‌ ಅನ್ನು ಮಾಡಿಸಲಾಗುತ್ತದೆ. ಶಾಲೆಯ ದಾಖಲಾತಿಗೆ ಆಧಾರ್‌ ಕಡ್ಡಾಯಗೊಳಿಸಲಾಗಿದೆ. ವಯಸ್ಕರಿಗೆ ಬ್ಯಾಂಕಿಂಗ್‌, ವ್ಯವಹಾರ, ಉದ್ಯೋಗ ಸೇರಿದಂತೆ ಎಲ್ಲವುಗಳಿಗೆ ಆಧಾರ್‌ ಕಾರ್ಡ್‌ ಕಡ್ಡಾಯಗೊಳಿಸಲಾಗಿದೆ.

New Aadhaar Card Guidelines these Documents are mandatory
Image Credit to Original Source

12 ತಿಂಗಳುಗಳಿಗಿಂತ ಹೆಚ್ಚು ಸಮಯಗಳ ಕಾಲ ಭಾರತದಲ್ಲಿ ವಾಸ ಇರುವವರು ಆಧಾರ್‌ ಕಾರ್ಡ್‌ ಹೊಂದುವುದು ಕಡ್ಡಾಯವಾಗಿದೆ. ಅನಿವಾಸಿ ಭಾರತೀಯರು ಕೂಡ ಆಧಾರ್‌ ಕಾರ್ಡ್‌ ಹೊಂದಬಹುದಾಗಿದೆ. ಹಲವು ಷರತ್ತುಗಳಿಗೆ ಒಳಪಟ್ಟು ಎನ್‌ಆರ್‌ಐಗಳು ಆಧಾರ್‌ ಪಡೆಯಬಹುದು ಎಂದು ಕೇಂದ್ರ ಸರಕಾರ ಹೇಳಿದೆ.

ಇದನ್ನೂ ಓದಿ : ಮಹಿಳೆಯರಿಗೆ ಉಚಿತವಾಗಿ ಸಿಗಲಿದೆ 30,000 ರೂ. : ಗೃಹಲಕ್ಷ್ಮೀ ಬೆನ್ನಲ್ಲೇ ಧನಶ್ರೀ ಯೋಜನೆಗೂ ಅರ್ಜಿ ಸಲ್ಲಿಸಿ

ಆಧಾರ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ ?

ಹೊಸದಾಗಿ ಆಧಾರ್‌ ಕಾರ್ಡ್‌ ಹೊಂದಲು UIDAI ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆಧಾರ್‌ ಕಾರ್ಡ್‌ಗೆ ನೋಂದಣಿಯನ್ನು ಮಾಡಿಸಿಕೊಳ್ಳ ಬಹುದಾಗಿದೆ. ಆಧಾರ್‌ ಕೇಂದ್ರಗಳಲ್ಲಿ ನಿಗದಿತ ಅರ್ಜಿ ನಮೂನೆಯಲ್ಲಿ ಮೇಲೆ ತಿಳಿಸಲಾಗಿರುವ ಅಗತ್ಯ ದಾಖಲೆಗಳನ್ನು ನೀಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಇದನ್ನೂ ಓದಿ : ಮೂರು ತಿಂಗಳು ಕಳೆದರೂ ಗೃಹಲಕ್ಷ್ಮೀ ಹಣ ಬರುತ್ತಿಲ್ಲವೇ..? ನೀವು ಮಾಡಬೇಕಾಗಿರೋದು ಇಷ್ಟು

ಆಧಾರ್‌ ಕಾರ್ಡ್‌ ನೋಂದಣಿಯ ಬೇಳೆಯಲ್ಲಿ ಬಯೋ ಮೆಟ್ರಿಕ್‌ ಅನ್ನು ಕಡ್ಡಾಯಗೊಳಿಸಲಾಗಿದೆ. ಅರ್ಜಿ ಸಲ್ಲಿಸಿದ ನಂತರದಲ್ಲಿ ಸ್ವೀಕೃತಿಯನ್ನು ಪಡೆಯುವುದನ್ನು ಮಾತ್ರ ಮರೆಯಬೇಡಿ. ನಿಮ್ಮ ಎಲ್ಲಾ ದಾಖಲೆಗಳು ಸಮಪರ್ಕವಾಗಿದೆಯೇ ಅನ್ನೋದನ್ನು ಆಧಾರ್‌ ಅರ್ಜಿ ಸಲ್ಲಿಕೆಗೂ ಮೊದಲೇ ಪರಿಶೀಲಿಸಿಕೊಳ್ಳುವುದು ಉತ್ತಮ. ನಂತರದಲ್ಲಿ ಆಧಾರ್‌ ಕಾರ್ಡ್‌ ನಿಮ್ಮ ವಿಳಾಸಕ್ಕೆ ಬರಲಿದೆ.

New Aadhaar Card Guidelines these Documents are mandatory

Comments are closed.