Atta Price Increase : ಗೋಧಿ ಹಿಟ್ಟಿನ ದರ ಏರಿಕೆ : ಏಲ್ಲೆಲ್ಲಿ ಎಷ್ಟೆಷ್ಟು ಗೊತ್ತಾ ?

ನವದೆಹಲಿ : ದೇಶದ ಜನರು ಪ್ರತಿ ತಿಂಗಳ ಆರಂಭದಲ್ಲಿ ಮನೆಗೆ ಬೇಕಾದ ರೇಶನ್ ಖರೀದಿಸಲು ನಿರ್ದಿಷ್ಟ ಮೊತ್ತವನ್ನು ಲೆಕ್ಕಹಾಕಿ ನಿಗದಿಪಡಿಸುವ ದಿನಗಳು ಕಳೆದುಹೋಗಿದೆ. ವಿಭಕ್ತ ಕುಟುಂಬದಲ್ಲಿ ಪ್ರತಿ ತಿಂಗಳಿಗೆ ಬೇಕಾಗುವ (Atta Price Increase) ಗೋಧಿ ಹಿಟ್ಟು, ಅಕ್ಕಿ, ಎಣ್ಣೆ, ಅಕ್ಕಿ, ಹಾಲು ಇತ್ಯಾದಿ ಅಗತ್ಯ ವಸ್ತುಗಳ ಮೇಲೆ ಖರ್ಚು ಮಾಡುವಾಗ ದುಡಿಮೆ ಮಾಡುವ ಸದಸ್ಯರು ಖರ್ಚುಗಳನ್ನು ನಿಯಂತ್ರಿಸಲು ಕಷ್ಟವಾಗುತ್ತಿರುವ ಇಂದಿನ ಸನ್ನಿವೇಶವು ವಿಭಿನ್ನವಾಗಿದೆ. ಭಾರತೀಯ ಅಡುಗೆಮನೆಗಳಲ್ಲಿ ಸಾಮಾನ್ಯವಾಗಿ ಬಳಸುವ ಆಹಾರ ಪದಾರ್ಥವು ಇತ್ತೀಚಿನ ದಿನಗಳಲ್ಲಿ ಬೆಲೆಗಳಲ್ಲಿ ಭಾರಿ ಏರಿಕೆಗೆ ಕಂಡಿರುತ್ತದೆ.

ಸರಕಾರದ ಅಂಕಿಅಂಶಗಳ ಪ್ರಕಾರ, ಗೋಧಿ ಹಿಟ್ಟು ಸರಾಸರಿ ಬೆಲೆ ಪ್ರತಿ ಕೆಜಿಗೆ ರೂ 37.95 ರಷ್ಟಿತ್ತು. ಒಂದು ವರ್ಷದ ಹಿಂದೆ ಕೆಜಿಗೆ ರೂ 31.41 ಇತ್ತು. ದರಗಳು ದಶಕದ ಗರಿಷ್ಠ ಮಟ್ಟಕ್ಕೆ ತಲುಪಿದ್ದು, ಏರುತ್ತಿರುವ ಬೆಲೆಗಳನ್ನು ತಗ್ಗಿಸಲು ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ 30 ಲಕ್ಷ ಮೆಟ್ರಿಕ್ ಟನ್ ಗೋಧಿ ಮಾರಾಟದ ಪ್ರಸ್ತಾವನೆಯನ್ನು ಸರಕಾರ ಅನುಮೋದಿಸಿದೆ. ಹೀಗಾಗಿ ಈ ಕೆಳಗೆ ತಿಳಿಸಲಾದ ನಗರಗಳಲ್ಲಿ ಗೋಧಿ ಹಿಟ್ಟಿನ ಬೆಲೆ ಹೀಗಿದೆ.

ವಿವಿಧ ನಗರದಲ್ಲಿನ ಗೋಧಿಹಿಟ್ಟಿನ ಬೆಲೆಗಳ ವಿವರ :

  • ದೆಹಲಿ : ರೂ 26/ಕೆಜಿ (ಲೂಸ್ ಚಕ್ಕಿ ತಾಜಾ ಗೋಧಿ ಹಿಟ್ಟು)
  • ಮುಂಬೈ : ರೂ 38/ಕೆಜಿ (ಪ್ರೀಮಿಯಂ ಲೂಸ್ ಚಕ್ಕಿ ತಾಜಾ)
  • ಕೋಲ್ಕತ್ತಾ : ರೂ 28-29/ಕೆಜಿ (ಲೂಸ್ ಅಟ್ಟಾ)
  • ಚೆನ್ನೈ : ರೂ 65/ಪ್ಯಾಕೆಟ್
  • ಕಾನ್ಪುರ : ರೂ 28/ಕೆಜಿ
  • ಹೈದರಾಬಾದ್ : ರೂ 60/ಕೆಜಿ
  • ಗುರುಗ್ರಾಮ್ : ರೂ 32/ಕೆಜಿ
  • ನೋಯ್ಡಾ : ರೂ 30/ಕೆಜಿ
  • ಗಾಜಿಯಾಬಾದ್ : ರೂ 30/ಕೆಜಿ

ಗ್ರಾಹಕರ ಗಮನಕ್ಕೆ : ಇವು ಅಂತಿಮ ದರಗಳಲ್ಲ. ಚಿಲ್ಲರೆ ಅಂಗಡಿಗಳಲ್ಲಿ ಅಟ್ಟಾ ಬೆಲೆಗಳು ಮೇಲೆ ತಿಳಿಸಿದ ದರಗಳಿಂದ ಭಿನ್ನವಾಗಿರಬಹುದು.

ಇದನ್ನೂ ಓದಿ : ಸರಕಾರಿ ನೌಕರರಿಗೆ ಗುಡ್‌ ನ್ಯೂಸ್‌ : ಹಳೆಯ ಪಿಂಚಣಿ ವ್ಯವಸ್ಥೆ ಮರು ಜಾರಿಗೆ ಸುಪ್ರೀಂ ಅಸ್ತು

ಇದನ್ನೂ ಓದಿ : RBI ಹೊಸ ರೂಲ್ಸ್ : ಬ್ಯಾಂಕ್ ಲಾಕರ್ ಸೌಲಭ್ಯ ಬಳಸುತ್ತಿದ್ರೆ ತಪ್ಪದೇ ಈ ಸುದ್ದಿಯನ್ನು ಓದಿ

ಇದನ್ನೂ ಓದಿ : Exemption in Income Tax: ಹಿರಿಯ ನಾಯಕರಿಗೆ ಗುಡ್ ನ್ಯೂಸ್ : SBI ನಲ್ಲಿ ಆದಾಯ ತೆರಿಗೆಯಲ್ಲಿ ಭರ್ಜರಿ ವಿನಾಯಿತಿ

2021-22ರ ಬೆಳೆ ಋತುವಿನಲ್ಲಿ (ಜುಲೈ-ಜೂನ್) ಭಾರತದ ಗೋಧಿ ಉತ್ಪಾದನೆಯು 109.59 ಮಿಲಿಯನ್ ಟನ್‌ ಆಗಿದ್ದು. ಇದೇ ಅವಧಿಯಲ್ಲಿ ಅದರ ಹಿಂದಿನ ವರ್ಷ 106.84 ಮಿಲಿಯನ್ ಟನ್‌ ಇತ್ತು. ಕಳೆದ ವರ್ಷ ಸುಮಾರು 43 ಮಿಲಿಯನ್ ಟನ್‌ ನಷ್ಟು ಗೋಧಿ ಸಂಗ್ರಹಣೆ ಆಗಿತ್ತು. ಪ್ರಸಕ್ತ ರಾಬಿ ಹಂಗಾಮಿನಲ್ಲಿ ಗೋಧಿಯನ್ನು ರೈತರು ವ್ಯಾಪಕವಾಗಿ ಬಿತ್ತನೆ ಮಾಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಹೊಸ ಬೆಳೆ ಕೊಯ್ಲು ಮಾಡಿದ ನಂತರ ಗೋಧಿ ರಫ್ತಿನ ಮೇಲಿನ ನಿಷೇಧವನ್ನು ತೆಗೆದುಹಾಕಲು ಕೇಂದ್ರವು ಪರಿಗಣಿಸಬಹುದು.

Atta Price Increase: Wheat flour price increase: Do you know how much?

Comments are closed.