ಟ್ರೋಲ್ ಮಾಡುವವರ ಬಗ್ಗೆ ಬೇಸರ ವ್ಯಕ್ತಪಡಿಸಿದ ನಟಿ ರಶ್ಮಿಕಾ ಮಂದಣ್ಣ

ಸ್ಯಾಂಡಲ್‌ವುಡ್‌ನ ಕಿರಿಕ್‌ ಬೆಡಗಿ ರಶ್ಮಿಕಾ ಮಂದಣ್ಣ (Kirik Bedagi Rashmika Mandanna) ‘ವಾರಿಸು’ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ಧಾರೆ. ದಳಪತಿ ವಿಜಯ್ ಜೋಡಿಯಾಗಿ ನಟಿಸಿದ ಸಿನಿಮಾ ಬಾಕ್ಸಾಫೀಸ್ ಸದ್ದು ಮಾಡುತ್ತಿದೆ. ಇನ್ನು ರಶ್ಮಿಕಾ ಮಂದಣ್ಣ ಟ್ರೋಲ್‌ ಮಾಡುವವರ ಬಗ್ಗೆ ಮಾತನಾಡಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಿಂದು ಮುಂದು ನೋಡದೇ ಸುಖಾಸುಮ್ಮನೆ ಟ್ರೋಲ್ ಮಾಡುವವರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ನಾನಾ ಕಾರಣಗಳಿಗೆ ನಟಿ ರಶ್ಮಿಕಾ ಮಂದಣ್ಣ ಟ್ರೋಲ್ ಆಗುತ್ತಾ ಇರುತ್ತಾರೆ. ಆಕೆಯೇ ಹೇಳಿಕೆಗಳು ವಿವಾದಕ್ಕೂ ಕಾರಣವಾಗುತ್ತಿದೆ. ಕೆಲವರು ಅಸಭ್ಯ ಶಬ್ಧಗಳಿಂದಲೂ ಸೋಶಿಯಲ್ ಮೀಡಿಯಾದಲ್ಲಿ ನಿಂದಿಸುವ ಕೆಲಸ ಮಾಡುತ್ತಿದ್ದಾರೆ. ಆಕೆ ‘ಕಾಂತಾರ’ ಸಿನಿಮಾ ನೋಡಿಲ್ಲ ಎಂದಿದ್ದು, ಸೌತ್‌ ಸಿನಿಮಾ ಸಾಂಗ್ಸ್‌ ಬಗ್ಗೆ ಮಾತನಾಡಿದ್ದು ಹೀಗೆ ಪ್ರತಿಯೊಂದು ಟ್ರೋಲ್‌ಗೆ ಕಾರಣವಾಗಿತ್ತು. ಕೆಲ ದಿನಗಳಿಂದ ಕನ್ನಡ ಸಿನಿರಂಗದಿಂದಲೇ ಆಕೆಯನ್ನು ಬ್ಯಾನ್ ಮಾಡಬೇಕು. ಆಕೆಯ ಯಾವುದೇ ಸಿನಿಮಾ ರಾಜ್ಯದಲ್ಲಿ ಬಿಡುಗಡೆ ಆಗಬಾರದು ಎಂದು ಕೆಲವರು ಟ್ರೆಂಡ್ ಕ್ರಿಯೇಟ್ ಮಾಡಿದ್ದರು.

ತಮ್ಮ ವಿರುದ್ಧದ ಟ್ರೋಲ್‌ಗಳ ಬಗ್ಗೆ ರಶ್ಮಿಕಾ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಕೆಲ ದಿನಗಳ ಹಿಂದೆ ಬಹಿರಂಹವಾಗಿ ಪತ್ರ ಬರೆದು ಬೇಸರ ವ್ಯಕ್ತಪಡಿಸಿದ್ದರು. ಇತ್ತೀಚೆಗೆ ರಕ್ಷಿತ್‌ ಶೆಟ್ಟಿ, ರಿಷಬ್ ಶೆಟ್ಟಿ ಬಗ್ಗೆಯೂ ಮಾತನಾಡಿ ತಪ್ಪು ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಇಷ್ಟೆಲ್ಲಾ ಸಕ್ಸಸ್ ಸಿಗುತ್ತಿರುವಾಗ ಮತ್ತೊಂದು ಕಡೆ ಇಂಡಸ್ಟ್ರಿ ಸಹವಾಸವೇ ಸಾಕು ಎನಿಸಿದ್ದು ಇದ್ಯಾ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ರಶ್ಮಿಕಾ, ‘ಕೆಲವೊಮ್ಮೆ ಖಂಡಿತ ಅನಿಸಿದೆ. ಜನರಿಗೆ ನನ್ನ ಬಾಡಿ ಬಗ್ಗೆಯೂ ಪ್ರಾಬ್ಲಂ ಇದೆ. ನಾನು ಜಾಸ್ತಿ ವರ್ಕ್‌ಔಟ್ ಮಾಡಿದರೆ ಗಂಡಸಿನ ತರ ಕಾಣುತ್ತೀನಿ. ವರ್ಕ್‌ಔಟ್ ಮಾಡದೇ ಇದ್ದರೆ ದಪ್ಪ ಕಾಣಿಸುತ್ತೀನಿ. ನಾನು ಮಾತನಾಡಿದ್ರೂ ಕಷ್ಟ, ಮಾತನಾಡದಿದ್ದರೆ ಆಟಿಟ್ಯೂಡ್, ನಾನ್ ಉಸಿರಾಡಿದ್ರು ಕಷ್ಟ, ಉಸಿರಾಡದಿದ್ರೂ ಕಷ್ಟ, ನಾನು ಏನು ಮಾಡಬೇಕು ಹೇಳಿ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ನಾನು ಸಿನಿರಂಗದಲ್ಲಿ ಇರಬೇಕಾ? ಸಿನಿರಂಗವನ್ನು ಬಿಟ್ಟುಬಿಡಬೇಕಾ? ನಾನು ಇಂಥದ್ದು ಮಾಡಬೇಕು ಎಂದು ಸರಿಯಾಗಿ ಹೇಳಿದರೆ ನಾನು ಕೇಳಲು ಸಿದ್ಧ. ಅನುಸರಿಸಲು ಸಿದ್ಧಳಿದ್ದೇನೆ. ನೀವು ಕ್ಲಾರಿಟಿ ಕೊಡದೇ ಇದ್ದರೆ, ಮತ್ತೊಂದು ಕಡೆ ಇದನ್ನೆಲ್ಲಾ ಹೇಳುತ್ತಿದ್ದರೆ ಅದರ ಅರ್ಥ ಏನು? ಕ್ಲಾರಿಟಿ ಕೊಡಿ. ನಿಮಗೆ ನನ್ನಲ್ಲಿ ಏನಾದರೂ ಪ್ರಾಬ್ಲಂ ಅನ್ನಿಸಿದರೆ ಅದು ಏನು ಎಂದು ಹೇಳಿ. ಯಾಕೆ ಅಂತ ಹೇಳಿ. ಕೆಟ್ಟದಾಗಿ ಮಾತನಾಡಬೇಡಿ. ಅವರು ಬಳಸುವ ಪದಗಳು, ವಾಕ್ಯಗಳು ನಮಗೆ ಬಹಳ ನೋವು ಕೊಡುತ್ತದೆ ಇದು ಸರಿಯಲ್ಲ” ಎಂದಿದ್ದಾರೆ.

ವಾರಿಸು ನಂತರ ರಶ್ಮಿಕಾ ಮಂದಣ್ಣ ‘ಪುಷ್ಪ’- 2 ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ‘ಶೀಘ್ರದಲ್ಲೇ ನಾನು ಕೂಡ ಚಿತ್ರೀಕರಣದಲ್ಲಿ ಭಾಗಿ ಆಗುತ್ತೇನೆ. ಈ ಬಾರಿ ನನ್ನ ಪಾತ್ರಕ್ಕೆ ಮತ್ತಷ್ಟು ಮಹತ್ವ ಇರಲಿದೆ. ಮತ್ತೆ ಶ್ರೀವಲ್ಲಿ ಆಗಿ ಕಾಣಿಸಿಕೊಳ್ಳಲು ಉತ್ಸುಕಳಾಗಿದ್ದೇನೆ’ ಎಂದು ರಶ್ಮಿಕಾ ಹೇಳಿದ್ದಾರೆ. ಸಿನಿಮಾ ರಿಲೀಸ್ ಯಾವಾಗ ಎನ್ನುವ ಪ್ರಶ್ನೆಗೆ ಇದೇ ವರ್ಷ ಕ್ರಿಸ್‌ಮಸ್‌ ಸ್ಪೆಷಲ್ ಆಗಿ ಸಿನಿಮಾ ಬರಬಹುದು ಎಂದಿದ್ದಾರೆ.

ಇದನ್ನೂ ಓದಿ : ನಟ ದರ್ಶನ್‌ ಅಭಿನಯದ “ಕ್ರಾಂತಿ” ಸಿನಿಮಾಕ್ಕೆ ಶುಭ ಕೋರಿದ ಸೆಲೆಬ್ರೆಟಿಗಳು

ಇದನ್ನೂ ಓದಿ : ಕ್ರಾಂತಿ ಸಿನಿಮಾಕ್ಕೂ ತಪ್ಪದ ಪೈರಸಿ ಕಾಟ

ಇದನ್ನೂ ಓದಿ : ಟಾಲಿವುಡ್ ಪ್ರಭಾಸ್ ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಷನ್ ಕಾಂಬಿಷೇಷನ್ ನಲ್ಲಿ ಆನಂದ್‌ ಸಿನಿಮಾ

ಇತ್ತೀಚೆಗೆ ರಶ್ಮಿಕಾ ಮಂದಣ್ಣ ನಟನೆಯ ‘ಮಿಷನ್ ಮಜ್ನು’ ಸಿನಿಮಾ ನೇರವಾಗಿ ಓಟಿಟಿಗೆ ಬಂದಿತ್ತು. ವೀಕ್ಷಕರಿಂದ ಈ ಸಿನಿಮಾಕ್ಕೆ ಒಳ್ಳೆ ಪ್ರತಿಕ್ರಿಯೆ ಸಿಕ್ಕಿತ್ತು. ಇನ್ನು ಬಾಲಿವುಡ್‌ನಲ್ಲಿ ರಣ್‌ಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ‘ಪುಷ್ಪ’- 2 ಸಿನಿಮಾದಲ್ಲಿ ಶ್ರೀವಲ್ಲಿಯಾಗಿ ತಮ್ಮ ಪಾತ್ರ ಮುಂದುವರೆಸಬೇಕಿದೆ. ಇವೆರಡು ಬಿಟ್ಟರೆ ಹೊಸದಾಗಿ ಯಾವುದೇ ಸಿನಿಮಾವನ್ನು ಕೂಡ ರಶ್ಮಿಕಾ ಒಪ್ಪಿಕೊಂಡಿಲ್ಲ ಎಂದು ನಟಿ ರಶ್ಮಿಕಾ ಹೇಳಿದ್ದಾರೆ.

Kirik Bedagi Rashmika Mandanna : Actress Rashmika Mandanna expressed her displeasure with trolls

Comments are closed.