Bank Holidays in December : ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕುಗಳ ರಜಾ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನವೆಂಬರ್ ತಿಂಗಳು ಕಳೆದು ಡಿಸೆಂಬರ್ ತಿಂಗಳು ಸಮೀಪಿಸುತ್ತಿದೆ. ಬ್ಯಾಂಕ್ ಗ್ರಾಹಕರು ಡಿಸೆಂಬರ್ ತಿಂಗಳಲ್ಲಿ ರಜಾ ದಿನಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳುವುದು ತೀರಾ ಮುಖ್ಯ. ಯಾಕೆಂದ್ರೆ ಡಿಸೆಂಬರ್ ತಿಂಗಳಲ್ಲಿ ಅರ್ಧ ತಿಂಗಳಿಗೂ ಅಧಿಕ ದಿನಗಳ ಕಾಲ ಬ್ಯಾಂಕುಗಳು ರಜೆ ಇರುತ್ತದೆ. ಡಿಸೆಂಬರ್ ತಿಂಗಳ ಬ್ಯಾಂಕುಗಳ ರಜಾ ದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ.
ಡಿಸೆಂಬರ್ 2023ರಲ್ಲಿ AIEBA ವತಿಯಿಂದ ಆರು ದಿನಗಳ ಮುಷ್ಕರ ನಡೆಯಲಿದೆ. ಈ ವೇಳೆಯಲ್ಲಿ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಗ್ರಾಹಕರು ಕೇವಲ ಆನ್‌ಲೈನ್ ಸೇವೆಗಳನ್ನು ಮಾತ್ರವೇ ಬಳಸಿಕೊಳ್ಳಬಹುದಾಗಿದೆ. ಮುಷ್ಕರ ಮಾತ್ರವಲ್ಲದೇ ಕ್ರಿಸ್‌ಮಸ್ ಸೇರಿದಂತೆ ಹಲವು ಹಬ್ಬಗಳು ಆಗಮಿಸುವ ಹಿನ್ನೆಲೆಯಲ್ಲಿ ಅತೀ ಹೆಚ್ಚು ದಿನಗಳ ಕಾಲ ಬ್ಯಾಂಕ್ ಗಳು ಬಾಗಿಲು ಮುಚ್ಚಲಿವೆ.

ಡಿಸೆಂಬರ್ ತಿಂಗಳಲ್ಲಿ ಒಟ್ಟು 18 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಿರುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಡಿಸೆಂಬರ್ ತಿಂಗಳಿನಲ್ಲಿ ಬ್ಯಾಂಕುಗಳಿಗೆ ಘೋಷಿಸಿರುವ ರಜೆಯ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎರಡನೇ ಹಾಗೂ ನಾಲ್ಕನೇ ಶನಿವಾರ ಮತ್ತು ಭಾನುವಾರದಂದು ಬ್ಯಾಂಕುಗಳು ರಜೆ ಇರಲಿದೆ.
ಮುಂದಿನ ತಿಂಗಳು ನೀವೇನಾದ್ರೂ ಬ್ಯಾಂಕಿಂಗ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಫ್ಲ್ಯಾನ್ ಮಾಡಿಕೊಂಡಿದ್ರೆ ಡಿಸೆಂಬರ್ ತಿಂಗಳ ಬ್ಯಾಂಕ್ ರಜೆಗಳ ಪಟ್ಟಿಯನ್ನು ಗಮನದಲ್ಲಿ ಇರಿಸಿಕೊಳ್ಳುವುದು ತೀರಾ ಮುಖ್ಯ. ಹಾಗಾದ್ರೆ ಡಿಸೆಂಬರ್ ತಿಂಗಳಲ್ಲಿ ಒಟ್ಟು ಎಷ್ಟು ದಿನಗಳ ಕಾಲ ಬ್ಯಾಂಕುಗಳು ಬಾಗಿಲು ಮುಚ್ಚಲಿವೆ ಅನ್ನೋ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ ಹಣ ಪಡೆಯುವುದು ಇನ್ನಷ್ಟು ಸುಲಭ : ಗೃಹಿಣಿಯರಿಗೆ ಗುಡ್‌ನ್ಯೂಸ್ ಜಾರಿಯಾಯ್ತು ಹೊಸ ರೂಲ್ಸ್
ಡಿಸೆಂಬರ್ 2023 ಬ್ಯಾಂಕ್ ರಜಾದಿನಗಳ ಪಟ್ಟಿ :
ಡಿಸೆಂಬರ್ 1 (ರಾಜ್ಯ ಉದ್ಘಾಟನಾ ದಿನ/ ಸ್ಥಳೀಯ ನಂಬಿಕೆ ದಿನ) ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್ ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ರಜೆ ಘೋಷಿಸಲಾಗುತ್ತದೆ.
ಡಿಸೆಂಬರ್ 3 (ಭಾನುವಾರ)
ಡಿಸೆಂಬರ್ 4 (ಸೋಮವಾರ) – ಸಂತ ಫ್ರಾನ್ಸಿಸ್ ಕ್ಸೇವಿಯರ್ ಹಬ್ಬ ( ಗೋವಾದಲ್ಲಿ ಬ್ಯಾಂಕುಗಳಿಗೆ ರಜೆ)
ಡಿಸೆಂಬರ್ 9 ( ಎರಡೇ ಶನಿವಾರ)
ಡಿಸೆಂಬರ್ 10 ( ಭಾನುವಾರ)
ಡಿಸೆಂಬರ್ 12 (ಮಂಗಳವಾರ)- ಪಾ-ತೋಗನ್ ನೆಂಗ್ಮಿಂಜ ಸಂಗ್ಮಾ (ಮೇಘಾಲಯದಲ್ಲಿ ಬ್ಯಾಂಕುಗಳಿಗೆ ರಜೆ)
ಡಿಸೆಂಬರ್ 13 (ಬುಧವಾರ )- ಲಾಸೂಂಗ್/ನಮ್ಸೂಂಗ್ ( ಸಿಕ್ಕಿಂ ರಾಜ್ಯದಲ್ಲಿ ಬ್ಯಾಂಕುಗಳಿಗೆ ರಜೆ)
ಡಿಸೆಂಬರ್ 14 ( ಗುರುವಾರ)- ಲಾಸೂಂಗ್/ನಮ್ಸೂಂಗ್ (ಸಿಕ್ಕಿಂ ರಾಜ್ಯದಲ್ಲಿ ಬ್ಯಾಂಕುಗಳಿಗೆ ರಜೆ)
ಡಿಸೆಂಬರ್ 17 (ಭಾನುವಾರ )

ಡಿಸೆಂಬರ್ 18 (ಸೋಮವಾರ )- ಯು ಸೋಸೋ ಥಾಮ್ ಅವರ ಮರಣ ವಾರ್ಷಿಕೋತ್ಸವ ( ಮೇಘಾಲಯದಲ್ಲಿ ಬ್ಯಾಂಕುಗಳಿಗೆ ರಜೆ)
ಡಿಸೆಂಬರ್ 19 ( ಮಂಗಳವಾರ ) – ಗೋವಾ ವಿಮೋಚನಾ ದಿನ ( ಗೋವಾ ಬ್ಯಾಂಕುಗಳಿಗೆ ರಜೆ)
ಡಿಸೆಂಬರ್ 23 ( ಶನಿವಾರ )
ಡಿಸೆಂಬರ್ 24 ( ಭಾನುವಾರ)
ಇದನ್ನೂ ಓದಿ : 10 ವರ್ಷಗಳಿಂದ ಆಧಾರ್ ಕಾರ್ಡ್ ಮಾಹಿತಿ ಅಪ್ಡೇಟ್ ಮಾಡಿಲ್ಲವೇ..? ಡಿ.14ರ ಒಳಗೆ ಉಚಿತವಾಗಿ ಮಾಡಿ
ಡಿಸೆಂಬರ್ 25 ( ಸೋಮವಾರ) – ಕ್ರಿಸ್ಮಸ್ ( ಭಾರತ ದೇಶದಾದ್ಯಂತ ಬ್ಯಾಂಕುಗಳಿಗೆ ರಜೆ)
ಡಿಸೆಂಬರ್ 26 ( ಮಂಗಳವಾರ )- ಕ್ರಿಸ್ಮಸ್
( ಮಿಜೋರಾಂ, ನಾಗಾಲ್ಯಾಂಡ್ ಮತ್ತು ಮೇಘಾಲಯಗಳಲ್ಲಿ ರಜೆ)
ಡಿಸೆಂಬರ್ 27 ( ಬುಧವಾರ )- ಕ್ರಿಸ್ಮಸ್ ( ನಾಗಾಲ್ಯಾಂಡ್‌ನಲ್ಲಿ ಬ್ಯಾಂಕುಗಳಿಗೆ ರಜೆ)
ಡಿಸೆಂಬರ್ 30 ( ಶನಿವಾರ )- ಯು ಕಿಯಾಂಗ್ ನಂಗ್ಬಾಹ್ (ಮೇಘಾಲಯದಲ್ಲಿ ರಜೆ)
ಡಿಸೆಂಬರ್ 31 (ಭಾನುವಾರ )
ಇದನ್ನೂ ಓದಿ : ಹೊಸ ಆಧಾರ್ ಕಾರ್ಡ್ ಮಾಡಿಸಲು ಈ ದಾಖಲೆಗಳು ಕಡ್ಡಾಯ : ಹೊಸ ಮಾರ್ಗಸೂಚಿಯಲ್ಲೇನಿದೆ ?
ಭಾರತದಲ್ಲಿ ಬ್ಯಾಂಕುಗಳ ರಜೆ ರಾಜ್ಯದಿಂದ ರಾಜ್ಯಕ್ಕೆ ಬದಲಾವಣೆ ಆಗಲಿದೆ. ಅಲ್ಲದೇ ಖಾಸಗಿ ಅಥವಾ ಸಾರ್ವಜನಿಕ ವಲಯದ ಬ್ಯಾಂಕುಗಳು ರಜೆ ಇದ್ದ ಸಂದರ್ಭದಲ್ಲಿ ಆನ್‌ಲೈನ್ ಸೇವೆಯನ್ನು ಗ್ರಾಹಕರು ಪಡೆದುಕೊಳ್ಳಬಹುದಾಗಿದೆ. ಹೀಗಾಗಿ ಅಗತ್ಯ ಕೆಲಸ ಇದ್ದವರು ಎಟಿಎಂ ಹಾಗೂ ಇಂಟರ್‌ನೆಟ್ ಬ್ಯಾಂಕಿಂಗ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಬಳಕೆ ಮಾಡಬಹುದಾಗಿದೆ.
Bank Holidays in December 18 days Bank Holidays in india Check state-wise list here