ಗ್ರಾಹಕರಿಗೆ ಮತ್ತೆ ಶಾಕ್‌ ಕೊಟ್ಟ ಗ್ಯಾಸ್‌ ದರ : 15 ದಿನದಲ್ಲಿ 50 ರೂಪಾಯಿ ಹೆಚ್ಚಳ

ನವದೆಹಲಿ : ದೇಶದಲ್ಲಿ ಗ್ಯಾಸ್‌ ಸಿಲಿಂಡರ್‌ ಬೆಲೆ ಏರಿಕೆ ಸತತ ಮೂರನೇ ತಿಂಗಳು ಮುಂದುವರಿದಿದೆ. ಇದೀಗ ಗ್ಯಾಸ್‌ ಸಿಲಿಂಡರ್‌ ಬೆಲೆಯಲ್ಲಿ 25ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ ಕಳೆದ ಹದಿನೈದು ದಿನಗಳಲ್ಲಿ ಎರಡನೇ ಬಾರಿಗೆ ಬೆಲೆ 50 ರೂಪಾಯಿ ಹೆಚ್ಚಳವಾದಂತಾಗಿದೆ.

ಭಾರತೀಯ ತೈಲ ಕಂಪನಿಗಳು ಅಗಸ್ಟ್ 17 ರಂದು ಅಡುಗೆ ಅನಿಲದ ಬೆಲೆಯನ್ನು ಹೆಚ್ಚಿಸಿತ್ತು. ಇದಿಗ 14.2 ಕೆ.ಜಿ. ಗೃಹ ಬಳಕೆಯ ಸಿಲಿಂಡರ್‌ ಬೆಲೆ ಈಗ ರಾಷ್ಟ್ರ ರಾಜಧಾನಿಯಲ್ಲಿ ದೆಹಲಿಯಲ್ಲಿ 884.50 ರೂ. . ಮುಂಬೈನಲ್ಲಿ (ಸಬ್ಸಿಡಿ ರಹಿತ LPG) ಸಿಲಿಂಡರ್ ಈಗ 884.50 ರೂ.ಕ್ಕೆ ಏರಿಕೆ ಕಂಡಿದೆ.

ದೇಶದಲ್ಲಿ ಸತತ ಮೂರು ತಿಂಗಳಿನಿಂದಲೂ ಗ್ಯಾಸ್‌ ಬೆಲೆಯಲ್ಲಿ ಏರಿಕೆಯನ್ನು ಕಾಣುತ್ತಲೇ ಇದೆ. ಜುಲೈನಲ್ಲಿ ದೇಶೀಯ ಸಿಲಿಂಡರ್ ಬೆಲೆ 834 ರೂ. ಇತ್ತು. ಆಗಸ್ಟ್ 1 ರಂದು, 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಲಾಯಿತು. ಆದರೆ ಗೃಹ ಬಳಕೆಯ ಸಿಲಿಂಡರ್‌ ಬೆಲೆಯಲ್ಲಿ ಹೆಚ್ಚಳವಾಗಿರಲಿಲ್ಲ. ಆದ್ರೀಗ ಹದಿನೈದು ದಿನಗಳ ಅಂತರದಲ್ಲಿ ಎರಡು ಬಾರಿ ಬೆಲೆ ಏರಿಕೆ ಕಂಡಿದೆ.

ಸ್ಥಳೀಯ ತೆರಿಗೆಗಳಿಂದಾಗಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗುತ್ತದೆ. ಆದರೆ ಕೇಂದ್ರ ಸರಕಾರ ವಾರ್ಷಿಕವಾಗಿ ಬಡ ಹಾಗೂ ಮಧ್ಯಮ ವರ್ಗ ದವರ ಅನುಕೂಲಕ್ಕಾಗಿ ಸಬ್ಸಿಡಿ ದರದಲ್ಲಿ 12 ಸಿಲಿಂಡರ್‌ಗಳನ್ನು ನೀಡುತ್ತಿದೆ. ಅಲ್ಲದೇ ಸಬ್ಸಿಡಿ ದರ ಕಾಲ ಕಾಲಕ್ಕೆ ಬದಲಾಗುತ್ತಿದ್ದು, ಹಲವು ಗ್ರಾಹಕರಿಗೆ ಸಬ್ಸಿಡಿ ಹಣ ಬರುವುದೇ ನಿಂತು ಹೋಗಿದೆ.

2018-19ರ ಸಾಲಿನಲ್ಲಿ ದೇಶದಲ್ಲಿ ಒಟ್ಟು 26.54 ಕೋಟಿ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಗ್ರಾಹಕರನ್ನು ಹೊಂದಿತ್ತು. ಆದ್ರೇ ಜುಲೈ 1, 2021 ರ ಹೊತ್ತಿಗೆ, PMUY ಗ್ರಾಹಕರು ಸಂಖ್ಯೆ 29.11 ಕೋಟಿ ಏರಿಕೆ ಕಂಡಿದೆ. ಇದು ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ ಎನ್ನುತ್ತಿದೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ. ಎಲ್‌ಪಿಜಿ ಮತ್ತು ಎಟಿಎಫ್ ಬೆಲೆಗಳನ್ನು ಪ್ರತಿ ತಿಂಗಳ ಆರಂಭದಲ್ಲಿ ಬೆಂಚ್‌ಮಾರ್ಕ್ ಇಂಧನಕ್ಕಾಗಿ ಸರಾಸರಿ ಅಂತರರಾಷ್ಟ್ರೀಯ ದರ ಮತ್ತು ಹಿಂದಿನ ತಿಂಗಳಲ್ಲಿ ವಿದೇಶಿ ವಿನಿಮಯ ದರವನ್ನು ಆಧರಿಸಿ ಪರಿಷ್ಕರಿಸಲಾಗುತ್ತದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರದಲ್ಲಿ ಬಾರೀ ಇಳಿಕೆಯನ್ನು ಕಂಡಿದೆ. ಆದಾಗ್ಯೂ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್‌, ಡಿಸೇಲ್‌ ಹಾಗೂ ಗ್ಯಾಸ್‌ ದರಲ್ಲಿ ಮಾತ್ರ ಇಳಿಕೆಯನ್ನು ಕಾಣುತ್ತಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ದರ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಈ ನಂಬರ್‌ಗೆ ಮಿಸ್‌ಕಾಲ್‌ ಕೊಟ್ರೆ ಮನೆ ಬಾಗಿಲಿಗೆ ಬರುತ್ತೆ ಗ್ಯಾಸ್‌

ಇದನ್ನೂ ಓದಿ : ಬ್ಯಾಂಕ್‌ ಗ್ರಾಹಕರಿಗೆ ಸೂಚನೆ : ಸಪ್ಟೆಂಬರ್‌ನಲ್ಲಿ 12 ದಿನ ಬ್ಯಾಂಕ್‌ಗಳಿಗೆ ರಜೆ

(LPG Cylinder Price Hiked Again : Cooking Gas Becomes Costlier By 50 in 2 weeks)

Comments are closed.