BYJUs Layoffs : ಬೈಜೂಸ್‌ನಿಂದ ಮತ್ತೆ 1000 ಉದ್ಯೋಗಿಗಳ ವಜಾ

ಹೊಸದಿಲ್ಲಿ: BYJUs Layoffs : ತೀವ್ರ ಹಣಕಾಸಿನ ಕೊರತೆಯನ್ನು ಎದುರಿಸುತ್ತಿರುವ ಎಜುಕೆಟ್‌ (Edtech ) ದೈತ್ಯ ಬೈಜೂಸ್‌ ( BYJU ) ಸಂಸ್ಥೆಯ ಪುನರಚನೆಯ ಭಾಗವಾಗಿ 1000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ. ಉದ್ಯೋಗ ಕಡಿತವು ಕಂಪನಿಯ ಸುಮಾರು 2 ಪ್ರತಿಶತ ಉದ್ಯೋಗಿಗಳ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ವರದಿಯಾಗಿದೆ. ಕಂಪೆನಿ ಈಗಾಗಲೇ ಪ್ರತ್ಯೇಕ ಎರಡು ಸುತ್ತುಗಳಲ್ಲಿ ಕಳೆದ ವರ್ಷ ಸುಮಾರು 3,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿತ್ತು.

ಈ ವರ್ಷ ಬೈಜೂಸ್‌ ಸುಮಾರು ಸಾವಿರಕ್ಕೂ ಅಧಿಕ ಉದ್ಯೋಗಿಗಳ ಕಡಿತ ಮಾಡಿದ್ದರೂ ಕೂಡ ಹೊಸ ಉದ್ಯೋಗಿಗಳನ್ನು ಸಂಸ್ಥೆಗೆ ಸೇರ್ಪಡೆ ಮಾಡಿಕೊಂಡಿದೆ. ಇದರಿಂದಾಗಿ ಕಂಪನಿಯ ಅಂತಿಮ ಸಿಬ್ಬಂದಿ ಸಂಖ್ಯೆ 50,000 ರಷ್ಟಿದ್ದಾರೆ. ಈಗಾಗಲೇ ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿರುವ ಬೈಜೂಸ್‌ 1 ಶತಕೋಟಿ ದಾಲರ್ ಅವಧಿಯ ಸಾಲ B ಗಾಗಿ ಅಮೇರಿಕಾದಲ್ಲಿ ಸಾಲದಾತರೊಂದಿಗೆ ಕಂಪನಿಯು ಕಾನೂನು ಹೋರಾಟ ನಡೆಸುತ್ತಿರುವ ಹೊತ್ತಲ್ಲೇ ಉದ್ಯೋಗಿಗಳಿಗೆ ಶಾಕ್‌ ಕೊಟ್ಟಿದೆ.

ಕಂಪೆನಿಯನ್ನು ಲಾಭದತ್ತ ಕೊಂಡೊಯ್ಯುವ ಸಲುವಾಗಿ ಮಾರ್ಚ್ 2023 ರ ವೇಳೆಗೆ ಹಲವು ಕ್ರಮಗಳನ್ನು ಕೈಗೊಂಡಿತ್ತು. ಅಲ್ಲದೇ ಅಕ್ಟೋಬರ್ 2022 ರಿಂದ ಆರು ತಿಂಗಳವರೆಗೆ 2,500 ಉದ್ಯೋಗಿಗಳಲ್ಲಿ ಶೇಕಡಾ 5 ರಷ್ಟು ಕಡಿತಗೊಳಿಸುವುದಾಗಿ BYJU ಘೋಷಿಸಿತ್ತು. ಕಂಪೆನಿಯಲ್ಲಿನ ವೆಚ್ಚ ಕಡಿತಕ್ಕಾಗಿ ಹಲವು ನಿರ್ಧಾರಗಳನ್ನು ಕೈಗೊಳ್ಳುತ್ತಿದೆ ಎಂದು ಮಿಂಟ್‌ ವರದಿ ಮಾಡಿದೆ.ಜೂನ್ 16 ರಂದು ಉದ್ಯೋಗಿಗಳನ್ನು ವೈಯಕ್ತಿಕ ಸಭೆ ಹಾಗೂ ಪೋನ್‌ ಕರೆಗಳ ಮೂಲಕ ವಜಾಗೊಳಿಸಲಾಗಿದೆ. ಕಂಪೆನಿ ಉದ್ಯೋಗಿಗಳನ್ನು ವಜಾಗೊಳಿಸಿರುವುದು ಪ್ಲಾಟ್‌ಫಾರ್ಮ್, ಬ್ರ್ಯಾಂಡ್, ಮಾರ್ಕೆಟಿಂಗ್, ವ್ಯಾಪಾರ, ಉತ್ಪನ್ನ ಮತ್ತು ಟೆಕ್ ತಂಡಗಳ ಸದಸ್ಯರ ಮೇಲೆ ಪರಿಣಾಮ ಬೀರಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ : Aadhaar Card Toll Free Number : ನಿಮ್ಮ ಆಧಾರ್‌ ಕಾರ್ಡ್ ನಲ್ಲಿ ಸಮಸ್ಯೆ ಇದೆಯಾ ? ಚಿಂತೆ‌ ಬಿಡಿ ಈ ಟೋಲ್ ಫ್ರೀ ಸಂಖ್ಯೆಗೆ ಕರೆಮಾಡಿ

ಇದನ್ನೂ ಓದಿ : Jeevan Labh Policy Details : ಎಲ್ಐಸಿಯ ಈ ಪಾಲಿಸಿಯಲ್ಲಿ ಪಾಲಿಸಿದಾರರಿಗೆ ಸಿಗಲಿದೆ 54 ಲಕ್ಷ ರೂ.

Comments are closed.