LPG ಅಭಾವದ ವದಂತಿ: ಸಿಲಿಂಡರ್ ದಾಸ್ತಾನಿನ ಬಗ್ಗೆ ಕೇಂದ್ರ ಸರ್ಕಾರದಿಂದ ಮಹತ್ವದ ಮಾಹಿತಿ
LPG Supply | Central Government: ಸಿಲಿಂಡರ್‌ಗಳ ಅಕ್ರಮ ದಾಸ್ತಾನು ಮತ್ತು ಕಪ್ಪು ಮಾರುಕಟ್ಟೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ತಿಳಿಸಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಹಾರ್ಮುಜ್ ಜಲಸಂಧಿಯ (Strait of Hormuz) ಮೂಲಕ ಪೂರೈಕೆ ವ್ಯತ್ಯಯವಾಗಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಎಲ್‌ಪಿಜಿ (LPG) ಅಭಾವ ಉಂಟಾಗಲಿದೆ ಎಂಬ ವದಂತಿಗಳು ಹಬ್ಬಿವೆ. ಈ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, ಜನರು ಆತಂಕಕ್ಕೊಳಗಾಗಿ ಮುಗಿಬಿದ್ದು ಸಿಲಿಂಡರ್ ಖರೀದಿಸುವ (Cylinder Gas Panic Buying) ಅಗತ್ಯವಿಲ್ಲ ಎಂದು ತಿಳಿಸಿದೆ.
ಸರ್ಕಾರ ನೀಡಿದ ಪ್ರಮುಖ ಮಾಹಿತಿ:
-
ದಾಸ್ತಾನು ಹೆಚ್ಚಳ: ಕಳೆದ ಮಾರ್ಚ್ 5ಕ್ಕೆ ಹೋಲಿಸಿದರೆ ದೇಶೀಯ ಎಲ್‌ಪಿಜಿ ಉತ್ಪಾದನೆಯನ್ನು ಶೇ. 30ರಷ್ಟು ಹೆಚ್ಚಿಸಲಾಗಿದೆ. ಎಲ್ಲಾ ರಿಫೈನರಿಗಳು ಶೇ. 100ಕ್ಕಿಂತ ಹೆಚ್ಚು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ.
-
ಪೂರೈಕೆ ಸ್ಥಗಿತಗೊಂಡಿಲ್ಲ: ದೇಶದ ಯಾವುದೇ 25,000 ವಿತರಕರಲ್ಲಿ ಸಿಲಿಂಡರ್ ಖಾಲಿಯಾದ (Dry-out) ವರದಿ ಬಂದಿಲ್ಲ. ಮನೆಗಳಿಗೆ, ಆಸ್ಪತ್ರೆಗಳಿಗೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಪೂರೈಕೆ ನಿರಂತರವಾಗಿರಲಿದೆ.
-
ಆನ್‌ಲೈನ್ ಬುಕಿಂಗ್‌ಗೆ ಆದ್ಯತೆ: ಗ್ಯಾಸ್ ಏಜೆನ್ಸಿಗಳ ಮುಂದೆ ಸಾಲು ನಿಲ್ಲುವ ಬದಲು ಆನ್‌ಲೈನ್ ಮೂಲಕ ಬುಕ್ ಮಾಡಲು ಸೂಚಿಸಲಾಗಿದೆ. ಫೆಬ್ರವರಿಯಲ್ಲಿ ಶೇ. 71ರಷ್ಟಿದ್ದ ಆನ್‌ಲೈನ್ ಬುಕಿಂಗ್ ಮಾರ್ಚ್‌ನಲ್ಲಿ ಶೇ. 83ಕ್ಕೆ ಏರಿದೆ.
-
PNG ಬಳಕೆಗೆ ಮನವಿ: ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಸೌಲಭ್ಯವಿರುವ ಸುಮಾರು 60 ಲಕ್ಷ ಕುಟುಂಬಗಳು ತಕ್ಷಣವೇ ಅದಕ್ಕೆ ಬದಲಾಗುವಂತೆ ಮತ್ತು ವಾಣಿಜ್ಯ ಬಳಕೆದಾರರು ಕೂಡ ಸಿಜಿಡಿ (CGD) ಜಾಲವನ್ನು ಬಳಸಿಕೊಳ್ಳುವಂತೆ ಸರ್ಕಾರ ಕೋರಿದೆ.
ಚಿಕ್ಕಮಗಳೂರು : ವಾಣಿಜ್ಯ ಸಿಲಿಂಡರ್ ಸಿಗದ್ದಕ್ಕೆ ಕ್ಯಾಂಟೀನ್ನಲ್ಲಿ ಗೃಹೋಪಯೋಗಿ ಸಿಲಿಂಡರ್ ಬಳಕೆ : ಭಾರೀ ಸ್ಫೋಟ
ಕಪ್ಪು ಮಾರುಕಟ್ಟೆ ವಿರುದ್ಧ ಎಚ್ಚರಿಕೆ:
ಸಿಲಿಂಡರ್‌ಗಳ ಅಕ್ರಮ ದಾಸ್ತಾನು ಮತ್ತು ಕಪ್ಪು ಮಾರುಕಟ್ಟೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ತಿಳಿಸಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯಲ್ಲೂ ಯಾವುದೇ ಕೊರತೆಯಿಲ್ಲ ಎಂದು ಅವರು ಖಚಿತಪಡಿಸಿದ್ದಾರೆ.



