ನಿರ್ಮಾಪಕ ಒಂದು ರಾತ್ರಿ ಪಲ್ಲಂಗಕ್ಕೆ ಕರೆದಿದ್ದ : ಕಾಸ್ಟಿಂಗ್ ಕೌಚ್ ಬಿಚ್ಚಿಟ್ಟ ನಟಿ ಶ್ರುತಿ ಮರಾಠೆ

0

ಸಿನಿಮಾ ಜಗತ್ತೆ ಹಾಗೆ. ಬಣ್ಣ ಲೋಕದಲ್ಲಿ ನಾಯಕಿಯರಿಗೆ ಪಾತ್ರಕ್ಕಾಗಿ ನಿರ್ಮಾಪಕರು ಪಲ್ಲಂಗಕ್ಕೆ ಆಹ್ವಾನ ನೀಡುತ್ತಿರೋದು ಹೊಸದೇನಲ್ಲಾ. ಈ ಹಿಂದೆ ಸ್ಯಾಂಡಲ್ ವುಡ್, ಬಾಲಿವುಡ್ ನಟಿಯರು ಕೂಡ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಇದೀಗ ಮರಾಠಿ ನಟಿ ಶ್ರುತಿ ಮರಾಠೆ ಕೂಡ ಚಿತ್ರ ನಿರ್ಮಾಪಕರೋರ್ವರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಹೌದು, ಸಿನಿಮಾ ರಂಗದಲ್ಲಿ ಕಾಸ್ಟಿಂಗ್ ಕೌಚ್ ಆರೋಪ ಹಲವು ವರ್ಷಗಳಂದಲೂ ಕೇಳಿಬರುತ್ತಿದೆ. ಸಾಕಷ್ಟು ನಟಿಯರು ಕೂಡ ತಾವು ಸಿನಿಮಾ ರಂಗದಲ್ಲಿ ಅನುಭವಿಸಿದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಹಲವು ನಟಿ ಮಣಿಯರು ನಿರ್ಮಾಪಕರು, ನಟರು, ನಿರ್ದೇಶಕರ ವಿರುದ್ದ ಪಲ್ಲಂಗ ಪ್ರಸಂಗವನ್ನು ವಿವರಿಸಿ ಶಾಕ್ ಕೊಟ್ಟಿದ್ದಾರೆ. ಅಲ್ಲದೇ ಮೀಟೂ ಅಭಿಯಾನಗಳನ್ನೂ ಕೈಗೊಳ್ಳಲಾಗಿದೆ. ಇದೀಗ ಮಠಾಠಿ ನಟಿ ಶ್ರುತಿ ಮರಾಠೆ ಸರದಿ.

ಖಾಸಗಿ ವಾಹಿನಿಯೊಂದು ನಡೆಸಿದ ಸಂದರ್ಶನದಲ್ಲಿ ನಟಿ ಶ್ರುತಿ ಮರಾಠೆ ಚಿತ್ರರಂಗದಲ್ಲಿ ತನಗಾದ ಕಹಿ ಅನುಭವವೊಂದನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಆ ಕ್ಷಣದಲ್ಲಿ ತಾನು ವ್ಯವಹರಿಸಿದ ಬಗ್ಗೆಯೂ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.

ಸಿನಿಮಾದಕ್ಕೆ ಚಾನ್ಸ್ ಕೊಡಬೇಕು ಅಂದ್ರೆ ಕಾಂಪ್ರಮೈಸ್ ಆಗ್ಬೇಕು. ಒಂದು ರಾತ್ರಿ ಪಲ್ಲಂಗಕ್ಕೆ ಬಾ ಅಂತಾ ನಿರ್ಮಾಪಕರೊಬ್ಬರು ನಟಿ ಶ್ರುತಿ ಮರಾಠೆಯನ್ನು ಕೇಳಿದ್ದಾರೆ.

ನಿರ್ಮಾಪಕರ ಮಾತಿಗೆ ಶ್ರುತಿ ಮರಾಠೆ ಮುಟ್ಟಿಕೊಳ್ಳುವಂತಹ ಕೌಂಟರ್ ಕೊಟ್ಟಿದ್ದಾರೆ. “ನನ್ನ ಸಂಗತಿ ಬಿಡು. ಹೀರೋಗಳ ಹೊತೆಗೂ ಇದೇ ರೀತಿ ಕೇಳಿದ್ರಾ? ಅವರೂ ನಿನ್ನೊಂದಿಗೆ ಮಲಗಬೇಕೆ? ಆ ರೀತಿ ಮಾಡಿದರೆ ಮಾತ್ರ ನಿನ್ನ ಸಿನಿಮಾದಲ್ಲಿ ಅವಕಾಶ ನೀಡುತ್ತೀರಾ? ಎಂದು ಕೌಂಟರ್ ಕೊಟ್ಟಿದ್ದಾರೆ.

ಇದೇ ಕಾರಣಕ್ಕೆ ತನ್ನನ್ನು ಆ ಸಿನಿಮಾದಿಂದಲೇ ಕೈಬಿಡಲಾಯಿತು. ನನಗೆ ಖಂಡಿತಾ ಬೇಸರವಿಲ್ಲ. ಇಂತಹ ದೌರ್ಜನ್ಯಗಳನ್ನು ದೈರ್ಯವಾಗಿ ಹೇಳಿ ನಮ್ಮ ಮೌಲ್ಯಗಳನ್ನು ಕಾಪಾಡಿಕೊಳ್ಳಬೇಕು ಎಂದಿದ್ದಾರೆ ಶ್ರುತಿ ಮರಾಠೆ.

ಸಿನಿರಂಗದಲ್ಲಿ ಸ್ಟಾರ್ ಪಟ್ಟ ಗಿಟ್ಟಿಸಿಕೊಳ್ಳಬೇಕೆಂಬ ಆಸೆಯಿಂದ ಬಹಳಷ್ಟು ಮಂದಿ ಸಿನಿಮಾ ಇಂಡಸ್ಟ್ರೀ ಕಡೆಗೆ ಎದುರು ನೋಡುತ್ತಿರುವ ಯುವತಿಯರನ್ನು ಕೀಚಕರಂತೆ ಕಾಣುತ್ತಿದ್ದಾರೆ ಎಂದಿದ್ದಾರೆ ನಟಿ ಶ್ರುತಿ ಮರಾಠೆ.

ಸ್ಟಾರ್ ಹೀರೋಯಿನ್ ಆಗಬೇಕು ಎಂಬ ಆಸೆಯಿಂದ ಬಹಳಷ್ಟು ಮಂದಿ ಸಿನಿಮಾ ಇಂಡಸ್ಟ್ರಿ ಕಡೆಗೆ ಎದುರು ನೋಡುತ್ತಿರುವ ಯುವತಿಯರನು ಇಂತಹ ಕೀಚಕರು ಕಣ್ಣು ಹಾಕಿತ್ತಿದ್ದಾರೆಂದಿದ್ದಾರೆ ನಟಿ ಶ್ರುತಿ ಮರಾಠೆ.

Leave A Reply

Your email address will not be published.