ರೈಲು ಪ್ರಯಾಣದ ಸಮಯದಲ್ಲಿ ನಿಮ್ಮ ಆಹಾರವನ್ನು ವಾಟ್ಸಪ್ ಮೂಲಕ ಆರ್ಡರ್ ಮಾಡಿ. ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ನವದೆಹಲಿ : ಇತ್ತೀಚಿಗೆ ರೈಲು ಪ್ರಯಾಣಿಕರಿಗೆ ತಮ್ಮ ಪ್ರಯಾಣದ ಸಮಯದಲ್ಲಿ ತಮಗೆ ಬೇಕಾದ ರುಚಿಯಾದ ಆಹಾರವನ್ನು ವಾಟ್ಸಪ್‌ ಆಪ್‌ ಮೂಲಕ ಆರ್ಡರ್‌ ಮಾಡಲು ಆವಕಾಶ ಒದಗಿಸಿದೆ. ನೀವು ರೈಲಿನಲ್ಲಿ ಪ್ರಯಾಣಿಸುತ್ತಿದ್ದೀರಾ. ಹಾಗಾದರೆ ನಿಮಗೆ ಬೇಕಾದ ಆಹಾರವನ್ನು ನಿಮ್ಮ ರುಚಿಗೆ ಅನುಗುಣವಾಗಿ ಆಹಾರವನ್ನು ಆರ್ಡರ್ ಮಾಡಲು ನೀವು ಬಯಸುತ್ತೀರಾ? ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC), ಭಾರತೀಯ ಸಾರ್ವಜನಿಕ ವಲಯದ ಸಂಸ್ಥೆಯು (E-Catering Services) ವಿಶೇಷವಾಗಿ ಅಭಿವೃದ್ಧಿಪಡಿಸಿದ ವೆಬ್‌ಸೈಟ್ ಆದ www.catering.irctc.co.in ಮತ್ತು ಅದರ ಇ-ಕ್ಯಾಟರಿಂಗ್ ಅಪ್ಲಿಕೇಶನ್ ಫುಡ್ ಆನ್ ಟ್ರ್ಯಾಕ್ ಮೂಲಕ ಪ್ರಯಾಣಿಕರಿಗೆ ಇ-ಕ್ಯಾಟರಿಂಗ್ ಸೇವೆಗಳನ್ನು ಪರಿಚಯಿಸಿದೆ. ಇದ್ದರಿಂದ ಭಾರತೀಯ ರೈಲ್ವೇ ಇದೀಗ ವಾಟ್ಸಾಪ್ ಮೂಲಕ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಮ್ಮ ಆಹಾರವನ್ನು ಬುಕ್ ಮಾಡಲು ಅವಕಾಶ ನೀಡುತ್ತದೆ. ಹೀಗಾಗಿ ರೈಲು ಪ್ರಯಾಣಿಕರು ತಮ್ಮ ಆಹಾರವನ್ನು ವಾಟ್ಸಪ್‌ ಮೂಲಕ ಹೇಗೆ ಪಡೆಯಬಹುದು ಎನ್ನುವುದನ್ನು ತಿಳಿದುಕೊಳ್ಳೋಣ.

ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು +91 8750001323 ಅನ್ನು ಡಯಲ್ ಮಾಡುವ ಮೂಲಕ ತಮ್ಮ ಆಹಾರವನ್ನು ಪಡೆದುಕೊಳ್ಳಬಹುದು. ಪ್ರಸ್ತುತ, ಈ ಸೌಲಭ್ಯವು ಆಯ್ದ ಕೆಲವು ರೈಲುಗಳಲ್ಲಿ ಮಾತ್ರ ಲಭ್ಯವಿರುತ್ತದೆ. ಯಾಕೆಂದರೆ ರೈಲು ಪ್ರಯಾಣಿಕರ ಪ್ರತಿಕ್ರಿಯೆಯ ಆಧಾರದ ಮೇಲೆ ಇತರರಿಗೆ ವಿಸ್ತರಿಸಲಾಗುವುದು. ಅಷ್ಟೇ ಅಲ್ಲದೇ ಪ್ರಯಾಣದ ಸಮಯದಲ್ಲಿ ನೆಟ್‌ವರ್ಕ್ ಸಂಪರ್ಕ ಸಮಸ್ಯೆಗಳಿಂದಾಗಿ ಕೆಲವೊಮ್ಮೆ ವೆಬ್‌ಸೈಟ್ ಪ್ರವೇಶಿಸಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು. ರೈಲು ಪ್ರಯಾಣಿಕರು ತಮ್ಮ ಪ್ರಯಾಣದ ಸಮಯದಲ್ಲಿ ಇ-ಕೇಟರಿಂಗ್ ಸೇವೆಗಳನ್ನು ಈ ವ್ಯಾಪಾರ ವಾಟ್ಸಪ್ +91-8750001323 ಸಂಖ್ಯೆಯ ವಿವರ ಮೂಲಕ ಆಹಾರವನ್ನು ಪಡೆದುಕೊಳ್ಳಬಹುದಾಗಿದೆ. ಇದು ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ಈ ಕೆಳಗೆ ತಿಳಿಸಲಾಗಿದೆ.

ರೈಲು ಪ್ರಯಾಣದ ಸಮಯದಲ್ಲಿ ಇ-ಕೇಟರಿಂಗ್ ಸೇವೆಗಳು ಹೇಗೆ ಕೆಲಸ ಮಾಡುತ್ತದೆ?

  • ಆರಂಭದಲ್ಲಿ, ಇ-ಕೇಟರಿಂಗ್ ಸೇವೆಗಳ ಎರಡು ಹಂತಗಳ ಅನುಷ್ಠಾನವನ್ನು ವಾಟ್ಸಪ್ ಸಂವಹನದ ಮೂಲಕ ಯೋಜಿಸಲಾಗಿತ್ತು. ಮೊದಲ ಹಂತದಲ್ಲಿ, www.ecatering.irctc.co.in ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಇ-ಕ್ಯಾಟರಿಂಗ್ ಸೇವೆಗಳನ್ನು ಆಯ್ಕೆ ಮಾಡಲು ವ್ಯಾಪಾರ ವಾಟ್ಸಾಪ್ ಸಂಖ್ಯೆಯು ಗ್ರಾಹಕ ಬುಕಿಂಗ್ ಇ-ಟಿಕೆಟ್‌ಗೆ ಸಂದೇಶವನ್ನು ಕಳುಹಿಸುತ್ತದೆ.
  • ಈ ಆಯ್ಕೆಯೊಂದಿಗೆ, ಗ್ರಾಹಕರು ಆ್ಯಪ್ ಡೌನ್‌ಲೋಡ್ ಮಾಡುವ ಅಗತ್ಯವಿಲ್ಲದೇ ನೇರವಾಗಿ IRCTC ಯ ಇ-ಕೇಟರಿಂಗ್ ವೆಬ್‌ಸೈಟ್ ಮೂಲಕ ನಿಲ್ದಾಣಗಳಲ್ಲಿ ಲಭ್ಯವಿರುವ ತಮ್ಮ ಆಯ್ಕೆಯ ರೆಸ್ಟೋರೆಂಟ್‌ಗಳಿಂದ ಅವರ ಆಯ್ಕೆಯ ಊಟವನ್ನು ಕಾಯ್ದಿರಿಸಲು ಸಾಧ್ಯವಾಗುತ್ತದೆ.
  • ಮುಂದಿನ ಹಂತದ ಸೇವೆಗಳಲ್ಲಿ, WhatsApp ಸಂಖ್ಯೆಯನ್ನು ಗ್ರಾಹಕರಿಗೆ ಸಂವಾದಾತ್ಮಕ ದ್ವಿಮುಖ ಸಂವಹನ ವೇದಿಕೆಯಾಗಲು ಸಕ್ರಿಯಗೊಳಿಸಲಾಗುತ್ತದೆ. ಇದರಲ್ಲಿ AI ಪವರ್ ಚಾಟ್‌ಬಾಟ್ ಪ್ರಯಾಣಿಕರಿಗೆ ಇ-ಕೇಟರಿಂಗ್ ಸೇವೆಗಳ ಎಲ್ಲಾ ಪ್ರಶ್ನೆಗಳನ್ನು ನಿರ್ವಹಿಸುತ್ತದೆ ಮತ್ತು ಅವರಿಗೆ ಊಟವನ್ನು ಸಹ ಕಾಯ್ದಿರಿಸುತ್ತದೆ.

“ಐಆರ್‌ಸಿಟಿಸಿಯ ಇ-ಕೇಟರಿಂಗ್ ಸೇವೆಗಳ ಮೂಲಕ ತನ್ನ ವೆಬ್‌ಸೈಟ್ ಮತ್ತು ಅಪ್ಲಿಕೇಶನ್ ಮೂಲಕ ಸಕ್ರಿಯಗೊಳಿಸಲಾದ ಗ್ರಾಹಕರಿಗೆ ದಿನಕ್ಕೆ ಸರಿ ಸುಮಾರು 50000 ಊಟಗಳನ್ನು ನೀಡಲಾಗುತ್ತಿದೆ” ಎಂದು ರೈಲ್ವೇ ಸಚಿವಾಲಯವು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ : Provident Fund Alert : ನೀವು ಹಳೆಯ ಇಪಿಎಫ್‌ ಖಾತೆಯಿಂದ ಹೊಸ ಕಂಪನಿಗೆ ಹೇಗೆ ವರ್ಗಾಯಿಸುವುದು ಎಂದು ಯೋಚಿಸುದ್ದೀರಾ ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

ಇದನ್ನೂ ಓದಿ : Lic Whatsapp Services : ಪಾಲಿಸಿದಾರರ ಗಮನಕ್ಕೆ : ಎಲ್‌ಐಸಿಯಿಂದ ವಾಟ್ಸಪ್‌ ಸೇವೆ ಕುಳಿತಲ್ಲೇ ಎಷ್ಟೆಲ್ಲಾ ಸೌಲಭ್ಯ!

ಇದನ್ನೂ ಓದಿ : Milk price hike : ನಂದಿನಿ ಜಂಬೋ ಹಾಲಿನ ದರದಲ್ಲಿ 3 ರೂಪಾಯಿ ಏರಿಕೆ

ವಾಟ್ಸಪ್‌ಗಾಗಿ ಇ-ಕೇಟರಿಂಗ್ ಸೇವೆಗಳಿಗೆ ಪ್ರವೇಶವನ್ನು ಸಕ್ರಿಯಗೊಳಿಸಲು ಹಂತ ಹಂತದ ಮಾರ್ಗದರ್ಶಿ?
ಹಂತ 1 : ಟಿಕೆಟ್ ಬುಕ್ ಮಾಡುವಾಗ, ವ್ಯಾಪಾರ ವಾಟ್ಸಾಪ್ ಸಂಖ್ಯೆಯಿಂದ ಗ್ರಾಹಕರಿಗೆ ಸಂದೇಶವನ್ನು ಕಳುಹಿಸಲಾಗುತ್ತದೆ. ಇದರ ಅಧಿಕೃತ ವೆಬ್‌ಸೈಟ್‌ ಆದ www.ecatering.irctc.co.in ಗೆ ಭೇಟಿ ನೀಡುವ ಮೂಲಕ ಇ-ಕ್ಯಾಟರಿಂಗ್ ಸೇವೆಗಳನ್ನು ಆಯ್ಕೆ ಮಾಡಲು ಅವರಿಗೆ ಅನುಮತಿ ನೀಡುತ್ತದೆ.
ಹಂತ 2: ಈಗ, ಗ್ರಾಹಕರು IRCTC ಯ ಇ-ಕೇಟರಿಂಗ್ ವೆಬ್‌ಸೈಟ್ ಮೂಲಕ ನೇರವಾಗಿ ನಿಲ್ದಾಣಗಳಲ್ಲಿ ಲಭ್ಯವಿರುವ ಅವರ ಆಯ್ಕೆಯ ರೆಸ್ಟೋರೆಂಟ್‌ಗಳಿಂದ ಅವರ ಆಯ್ಕೆಯ ಊಟವನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ.
ಹಂತ 3: ದ್ವಿಮುಖ ಸಂವಹನಕ್ಕಾಗಿ WhatsApp ಸಂಖ್ಯೆಯನ್ನು ಸಕ್ರಿಯಗೊಳಿಸಲಾಗುತ್ತದೆ, ಅಲ್ಲಿ AI ಪವರ್ ಚಾಟ್‌ಬಾಟ್ ಪ್ರಯಾಣಿಕರಿಗೆ ಎಲ್ಲಾ ಸೇವೆಗಳ ಪ್ರಶ್ನೆಗಳನ್ನು ನಿರ್ವಹಿಸುತ್ತದೆ.

E-Catering Services : Order your food through WhatsApp during train journey. Here are complete details

Comments are closed.