Smartphone ಖರೀದಿದಾರರಿಗೆ ಅಮೆಜಾನ್‌ ಫ್ಯಾಬ್‌ ಫೋನ್‌ ಫೆಸ್ಟ್‌ 2022 ಮತ್ತು ಪ್ಲಿಪ್‌ಕಾರ್ಟ್‌ ಬಿಗ್‌ ಸೇವಿಂಗ್‌ ಡೇ 2022 ದಲ್ಲಿ ಸುವರ್ಣಾವಕಾಶ!

ಇ–ಕಾಮರ್ಸ್‌(e-commerce)ನ ದೈತ್ಯ ಕಂಪನಿಗಳಾದ Amazon ಮತ್ತು Flipkart ಸ್ಮಾರ್ಟ್‌ಫೋನ್‌ ಖರೀದಿದಾರರಿಗೆ ಸುವರ್ಣಾವಕಾಶ ಒದಗಿಸುತ್ತಿದೆ. ಅಮೆಜಾನ್‌ ಕಂಪನಿ ಅಮೇಜಾನ್‌ ಫ್ಯಾಬ್‌ ಫೋನ್‌ ಫೆಸ್ಟ್‌ 2022 ಅನ್ನು ಮಾರ್ಚ್‌ 11 ರಂದು ಪ್ರಾರಂಭಿಸಿದರೆ, ಫ್ಲಿಪ್‌ಕಾರ್ಟ್‌ ತನ್ನ ಬಿಗ್‌ ಸೇವಿಂಗ್‌ ಡೇ 2022 ಅನ್ನು ಮಾರ್ಚ್‌ 12 ರಿಂದ ಪ್ರಾರಂಭಿಸಿದೆ. ಇವೆರಡೂ ತಮ್ಮ ಗ್ರಾಹಕರಿಗೆ ಸ್ಮಾರ್ಟ್‌ಫೋನ್‌ಗಳ ಮೇಲೆ ಅತ್ಯಾಕರ್ಷಕ ಬೆಲೆಗಳನ್ನು ಘೋಷಿಸಿದೆ.

ನೀವು ಸ್ಮಾರ್ಟ್‌ಫೋನ್‌ ಖರೀದಿಸಲು ಮುಂದಾಗಿದ್ದಿರೆ ಈ ಉತ್ತಮ ಅವಕಾಶವನ್ನು ಬಳಸಿಕೊಳ್ಳಬಹುದು. ಇವೆರಡೂ ಕಂಪನಿಗಳು ರಿಯಾಯಿತಿಗಳನ್ನು ಕೊಡುಗೆಗಳನ್ನು ನೀಡುವುದರ ಜೊತೆಗೆ ಎಕ್ಸ್‌ಚೇಂಜ್‌ ಕೊಡುಗೆ ಸಹ ನೀಡುತ್ತಿದೆ. ಹಾಗಾದರೆ, ಯಾವ ಸ್ಮಾರ್ಟ್‌ಫೋನ್‌ಗಳು ಉತ್ತಮ ಬೆಲೆ ಮತ್ತು ರಿಯಾಯಿತಿ ಪಡೆದುಕೊಂಡಿದೆ ಎಂದು ತಿಳಿಯಬೇಕೆ? ಇಲ್ಲಿದೆ ಅದರ ಲಿಸ್ಟ್‌.

ಅಮೆಜಾನ್‌ನಲ್ಲಿನ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು:

ಒನ್‌ಪ್ಲಸ್‌ 9 ಪ್ರೊ 5ಜಿ (OnePlus 9 Pro 5G) ಮುಖಬೆಲೆ 64,999 ರೂ :
ಒನ್‌ಪ್ಲಸ್‌ 9ಪ್ರೊ 5ಜಿ ಸ್ಮಾರ್ಟ್‌ಫೋನ್‌ ಪ್ರತ್ಯೇಕವಾಗಿ ಅಮೆಜಾನ್‌ನಲ್ಲಿ ಲಭ್ಯವಿದೆ. ಅಮೆಜಾನ್‌ನ ಫ್ಯಾಬ್‌ ಫೋನ್ಸ್‌ ಫೆಸ್ಟ್‌ 2022 ದಲ್ಲಿ ಅದನ್ನು ಖರೀದಿಸಬಹುದು. 8ಜಿಬಿ RAM ಮತ್ತು 128 ಜಿಬಿ ಸ್ಟೋರೇಜ್‌ ಹೊಂದಿರುವ ಈ ಸ್ಮಾರ್ಟ್‌ಫೋನ್‌ 59,999 ರೂಪಾಯಿಗಳಿಗೆ ಸಿಗುತ್ತಿದೆ. ಅಷ್ಟೇ ಅಲ್ಲದೇ 17,850 ರೂಪಾಯಿಗಳವರೆಗೆ ಎಕ್ಸಚೇಂಜ್‌ ಆಫರ್‌ನ್ನು ಸಹ ನೀಡುತ್ತಿದೆ.

ಐಫೋನ್‌ ಎಸ್‌ಇ(iPhone SE) ಮುಖಬೆಲೆ 43,900 ರೂ :
‌43,900 ರೂಪಾಯಿಗಳ ಐಫೋನ್‌ ಎಸ್‌ಇ(iPhone SE) ಅನ್ನು ಅಮೆಜಾನ್‌ ತನ್ನ ಗ್ರಾಹಕರಿಗಾಗಿ 41,900 ರೂಪಾಯಿಗಳಿಗೆ ಲಭಿಸುವಂತೆ ಮಾಡಿದೆ. ಇ– ಕಾಮರ್ಸ್‌ನ ದೈತ್ಯ ಸಂಸ್ಥೆಯಾದ ಅಮೆಜಾನ್‌ ಐಫೋನ್‌ ಎಸ್‌ಇ(iPhone SE) ಮೇಲೆ 13,500 ರೂಪಾಯಿಗಳ ವರೆಗೆ ರಿಯಾಯಿತಿ ಆಫರ್‌ ನೀಡಿದೆ.

ಸ್ಯಾಮ್‌ಸಂಗ್‌ ಗ್ಯಾಲೆಕ್ಸಿ ಎಮ್‌52 5ಜಿ (Samsung Galaxy M52 5G) ಮುಖಬೆಲೆ 25,999ರೂ :
ಸ್ಯಾಮ್‌ಸಂಗ್‌ ಗ್ಯಾಲೆಕ್ಸಿ ಎಮ್‌52 5ಜಿ (Samsung Galaxy M52 5G) ಅನ್ನು 24,999 ರೂಪಾಯಿಗಳಿಗೆ ಅಮೆಜಾನ್‌ ಫ್ಯಾಬ್‌ ಫೋನ್‌ ಫೆಸ್ಟ್‌ 2022 ನಲ್ಲಿ ಖರೀದಿಸಬಹುದಾಗಿದೆ. ಈ ಸ್ಮಾರ್ಟ್‌ಫೋನ್‌ಗೆ 14,850 ರೂಪಾಯಿಗಳವರೆಗೆ ಎಕ್ಸಚೇಂಜ್‌ ಆಫರ್‌ ಸಹ ನೀಡಲಾಗಿದೆ.

ಇದನ್ನೂ ಓದಿ: WhatsApp web ನ ಸುರಕ್ಷತೆಗಾಗಿ ಟ್ರಾಫಿಕ್‌ ಲೈಟ್‌! ಈ ಬ್ರೌಸರ್‌ ಎಕ್ಸಟೆಂನ್ಷನ್‌ ನ ಉಪಯೋಗ ನಿಮಗೆ ತಿಳಿದಿದೆಯೇ!

ಫ್ಲಿಪ್‌ಕಾರ್ಟ್‌ನ ಬಿಗ್‌ ಸೇವಿಂಗ್‌ ಡೇ ಯ ಅತ್ಯಾಕರ್ಷಕ ಸ್ಮಾರ್ಟ್‌ಫೋನ್‌ಗಳು:

ಐಫೋನ್‌ ಎಸ್‌ಇ(2020)(iPhone SE (2020)) ಮುಖಬೆಲೆ 39,900ರೂ. :

ಫ್ಲಿಪ್‌ಕಾರ್ಟ್‌ ತನ್ನ ಬಿಗ್‌ ಸೇವಿಂಗ್‌ ಡೇಯಲ್ಲಿ ಐಫೋನ್‌ ಎಸ್‌ಇ(2020)(iPhone SE (2020)) ಸ್ಮಾರ್ಟ್‌ಫೋನ್‌ ಅನ್ನು 29,999 ರೂಪಾಯಿಗಳ ರಿಯಾಯಿತಿ ನೀಡುತ್ತಿದೆ. ಮತ್ತು ಹಳೆಯ ಸ್ಮಾರ್ಟ್‌ಫೋನ್‌ ಮೇಲೆ 13,000 ರೂಪಾಯಿಗಳವರೆಗೆ ಎಕ್ಸಚೇಂಜ್‌ ಆಪರ್‌ ನೀಡುತ್ತಿದೆ.

ಮೋಟೋರೋಲಾ ಎಡ್ಜ್‌ 20 ಫ್ಯೂಸನ್‌( Motorola Edge 20 Fusion) ಮುಖಬೆಲೆ 21,999 ರೂ

ಹೊಸದಾಗಿ ಬಿಡುಗಡೆಯಾಗಿರುವ ಮೋಟೋರೋಲಾ ಎಡ್ಜ್‌ 20 ಫ್ಯೂಸನ್‌ 6ಜಿಬಿ RAM ಮತ್ತು 128 ಜಿಬಿ ಸ್ಟೋರೇಜ್‌ನ ಈ ಸ್ಮಾರ್ಟ್‌ಫೋನ್‌ 20,499 ರೂಪಾಯಿಗಳಿಗೆ ಸಿಗುತ್ತಿದೆ. ಫ್ಲಿಪ್‌ಕಾರ್ಟ್‌ ತನ್ನ ಗ್ರಾಹಕರಿಗಾಗಿ 13,000 ರೂಪಾಯಿಗಳ ವರೆಗೆ ಎಕ್ಸಚೇಂಜ್‌ನ ಆಫರ್‌ ಅನ್ನು ಹೆಚ್ಚುವರಿಯಾಗಿ ನೀಡುತ್ತಿದೆ.

ರಿಯಲ್‌ಮೀ C35(Realme C35) ಮುಖಬೆಲೆ 14,999 ರೂ.
ಇದೇ ತಿಂಗಳ ಮಾರ್ಚ್‌ 7ರಂದು ಬಿಡುಗಡೆಯಾದ ರಿಯಲ್‌ಮೀ C35 (Realme C35) ಅತ್ಯಾಕರ್ಷಕ ಬೆಲೆಯೊಂದಿಗೆ ನಿಗದಿಯಾಗಿದೆ. 4GB + 64GB ಮಾಡೆಲ್‌ನ ಈ ಸ್ಮಾರ್ಟ್‌ಫೋನ್‌ಗೆ 12,999 ರೂಪಾಯಿಗಳ ಆಕರ್ಷಕ ಬೆಲೆಯಲ್ಲಿ ಗ್ರಾಹಕರ ಕೈಗೆ ಸಿಗುತ್ತಿದೆ. ಇದರ ಮೇಲೆ ಫ್ಲಿಪ್‌ಕಾರ್ಟ್‌ 11,500 ರವರೆಗ ಎಕ್ಸಚೇಂಜ್‌ ಆಫರ್‌ ನೀಡುತ್ತಿದೆ.

ಇದನ್ನೂ ಓದಿ: Fast Charging Smartphones: ಭಾರತದ ಟಾಪ್ 5 ಫಾಸ್ಟ್ ಚಾರ್ಜಿಂಗ್ ಫೋನುಗಳಿವು;

(Flipkart Big Saving Days2022 AND Amazon Fab Phone Fest 2022 deals on smartphones begins)

Comments are closed.