Surya Namaskar Yoga : ಪಿಯು ಕಾಲೇಜಿನಲ್ಲಿ‌ ಸೂರ್ಯನಮಸ್ಕಾರ ಯೋಗಾಭ್ಯಾಸ: ಕೇಂದ್ರ ಶಿಕ್ಷಣ ಸಚಿವಾಲಯದ ಆದೇಶ

ಬೆಂಗಳೂರು : ಯೋಗಕ್ಕೆ ಇನ್ನಿಲ್ಲದ ಪ್ರಾಮುಖ್ಯತೆ ಕೊಡುತ್ತಿರುವ ಕೇಂದ್ರ ಸರ್ಕಾರ ಕಾಲೇಜು ವಿದ್ಯಾರ್ಥಿಗಳಿಗೂ ಯೋಗಭ್ಯಾಸದ ಮಹತ್ವ ತಿಳಿಸಿಕೊಡಲು ಮುಂದಾದಂತಿದ್ದು 75 ನೇ ಸ್ವಾಂತತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಪಿಯು ಕಾಲೇಜುಗಳಲ್ಲಿ ಸೂರ್ಯ ನಮಸ್ಕಾರ (Surya Namaskar Yoga) ಮಾಡಲು ಕೇಂದ್ರ ಶಿಕ್ಷಣ ಸಚಿವಾಲಯ ಆದೇಶ ಹೊರಡಿಸಿದೆ.

ಕರ್ನಾಟಕ ಸೇರಿದಂತೆ ದೇಶದ ಎಲ್ಲ ಪಿಯುಸಿ ಮಟ್ಟದ ಕಾಲೇಜುಗಳಿಗೆ ಈ ಸಂದೇಶ ರವಾನಿಸಲಾಗಿದೆ.ಪಿಯು ಕಾಲೇಜುಗಳಲ್ಲಿ ಜನವರಿ 1 ರಿಂದ ಫೆಬ್ರವರಿ 7 ರ ಒಳಗೆ ಸೂರ್ಯ ನಮಸ್ಕಾರ ಯೋಗಾಭ್ಯಾಸ ನಡೆಸಲು ಆದೇಶದಲ್ಲಿ ಸೂಚಿಸಲಾಗಿದೆ. 75ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿಜ.26ರಂದು ಸೂರ್ಯ ನಮಸ್ಕಾರ ಆಯೋಜನೆ ಮಾಡಲು ಸೂಚಿಸಲಾಗಿದ್ದು ಸಂಗೀತದೊಂದಿಗೆ ಸೂರ್ಯ ನಮಸ್ಕಾರ ಮಾಡಲು ಸೂಚಿಸಲಾಗಿದೆ.

ಯೋಗಾಸನದ ಹತ್ತು ಭಂಗಿಯಲ್ಲಿ ಸೂರ್ಯ ನಮಸ್ಕಾರ ಪ್ರಮುಖ ಭಂಗಿಯಾಗಿದ್ದು 38 ದಿನಗಳಲ್ಲಿ 21 ದಿನ ಬೆಳಗಿನ ಅವಧಿಯಲ್ಲಿ ವಿದ್ಯಾರ್ಥಿಗಳು ಸೂರ್ಯ ನಮಸ್ಕಾರ ಮಾಡಬೇಕು. ಮನೋಭಯ, ಆರೋಗ್ಯಕ್ಕೆ ಸೂರ್ಯ ನಮಸ್ಕಾರ ಉಪಯೋಗಕಾರಿ ಎಂದು ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆ ಆದೇಶದಲ್ಲಿ ಉಲ್ಲೇಖಿಸಿದೆ. ಕೇಂದ್ರ ಶಿಕ್ಷಣ ಸಚಿವಾಲಯ ಎಲ್ಲ ರಾಜ್ಯ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದ್ದು ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳಲ್ಲಿ ಕಾರ್ಯಕ್ರಮ ಆಯೋಜಿಸಲು ಸೂಚಿಸಲಾಗಿದೆ.

ಪದವಿಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು, ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿಗಳು ಕೂಡಾ ಈ ಸೂರ್ಯನಮಸ್ಕಾರ ಯೋಗಾಭ್ಯಾಸ ದಲ್ಲಿ ಭಾಗಿಯಾಗಬೇಕು ಎನ್ನಲಾಗಿದೆ. ಸೂರ್ಯ ನಮಸ್ಕಾರ ಕಾರ್ಯಕ್ರಮ ಮಾಡಿದ ನಂತರ ಕಾರ್ಯಕ್ರಮ ಆಯೋಜನೆ ಮಾಡಿದ ಮಾಹಿತಿಯನ್ನು ಕಾರ್ಯಕ್ರಮದ ಸಂಪೂರ್ಣ ವಿವರವನ್ನು ಶಿಕ್ಷಣ ಇಲಾಖೆಗೆ ನೀಡಲು ಆದೇಶಿಸಲಾಗಿದೆ.

ಅಲ್ಲದೇ 75 ಸ್ವಾಂತತ್ರ್ಯೋತ್ಸವದ ಅಮೃತ‌ಮಹೋತ್ಸವದ ಅಂಗವಾಗಿ ನಡೆಯುವ ಈ ಸೂರ್ಯ ನಮಸ್ಕಾರ ಯೋಗಾಭ್ಯಾಸದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲ ವಿದ್ಯಾರ್ಥಿ ಗಳಿಗೆ ಇ ಪ್ರಮಾಣಪತ್ರ ನೀಡಲಾಗುತ್ತದೆ ಎಂದು ಕೇಂದ್ರ ಶಿಕ್ಷಣ ಇಲಾಖೆ ಹೇಳಿದೆ. ಹೀಗಾಗಿ ಪಿಯು ಕಾಲೇಜುಗಳಲ್ಲಿ ಹೊಸ ವರ್ಷದಲ್ಲಿ ಯೋಗಾಭ್ಯಾಸ ಸೂರ್ಯನಮಸ್ಕಾರ ಕಾರ್ಯಕ್ರಮಗಳು ಆಯೋಜನೆಯಾಗಲಿದ್ದು, ಯೋಗ ಶಿಕ್ಷಕರ ಅಥವಾ ತರಬೇತುದಾರರ ಸಮ್ಮುಖದಲ್ಲೇ ಸೂರ್ಯನಮಸ್ಕಾರ ಮಾಡಿಸುವಂತೆಯೂ ಇಲಾಖೆ ಸೂಚಿಸಿದೆ.

ಇದನ್ನೂ ಓದಿ :School Close Karnataka : ಶಾಲೆಗಳ ಮೇಲೆ‌ ಮತ್ತೆ ಕೊರೊನಾ ಕರಿನೆರಳು: ಮತ್ತೆ ಬಾಗಿಲು‌ಮುಚ್ಚಲಿದೆ ಶಿಕ್ಷಣ ಸಂಸ್ಥೆಗಳು ?!

ಇದನ್ನೂ ಓದಿ : Exam for teacher promotion : ಶಿಕ್ಷಕರ ಬಡ್ತಿಗೆ ಸ್ಪರ್ಧಾತ್ಮಕ ಪರೀಕ್ಷೆ ಜಾರಿಗೆ ತಂದ ಶಿಕ್ಷಣ ಇಲಾಖೆ

(Surya Namaskar Yoga at PU College: Order of the Ministry of Education)

Comments are closed.