free ration extended (ಉಚಿತ ರೇಷನ್ ಯೋಜನೆ) : ದೇಶದಲ್ಲಿ ಲೋಕಸಭಾ ಚುನಾವಣಾ ಕಣಕ್ಕೆ ಈಗಾಗಲೇ ತಾಲೀಮು ಆರಂಭಗೊಂಡಿದೆ. ಪಂಚರಾಜ್ಯಗಳ ಚುನಾವಣೆ ಬೇರೆ ಹತ್ತಿರದಲ್ಲಿದ್ದು ಭಾರತವನ್ನು ಕೇಸರಿಮಯ ಮಾಡುವ ಎಲ್ಲಾ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಕರ್ನಾಟಕ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಬಿಜೆಪಿ ಆತ್ಮವಿಶ್ವಾಸಕ್ಕೆ ಪೆಟ್ಟು ಬಿದ್ದಿದ್ದು ಚುನಾವಣಾ ಪ್ರಚಾರವನ್ನು ಬಹಳ ಎಚ್ಚರಿಕೆಯಿಂದ ಮಾಡುತ್ತಿದೆ.
ಛತ್ತೀಸಗಢದಲ್ಲಿ ನಡೆಯುತ್ತಿರುವ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದಾರೆ. ದರ್ಗ್ನಲ್ಲಿ ಚುನಾವಣಾ ರ್ಯಾಲಿ ಮುಗಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಮುಂದಿನ ಐದು ವರ್ಷಗಳ ಅವಧಿಗೆ ಪ್ರಧಾನ್ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಮುಂದುವರಿಸಲಿದ್ದೇವೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರದ ಈ ಪ್ರಧಾನ್ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಲಾಭವನ್ನು ದೇಶದ 80 ಕೋಟಿಗೂ ಅಧಿಕ ಜನರು ಪಡೆಯುತ್ತಿದ್ದಾರೆ. ನಿಮ್ಮೆಲ್ಲರ ಆಶೀರ್ವಾದದಿಂದ ನಾನು ದೇಶದ ಜನತೆಯ ಕಲ್ಯಾಣದ ಕುರಿತಂತೆ ಒಳ್ಳೊಳ್ಳೆ ನಿರ್ಧಾರಗಳನ್ನು ಕೈಗೊಳ್ಳುತ್ತಾ ಬಂದಿದ್ದೇನೆ. ಅದೇ ರೀತಿ ಬಿಜೆಪಿ ಸರ್ಕಾರವು ಮುಂದಿನ ಐದು ವರ್ಷಗಳ ಕಾಲ ದೇಶದ ಬಡವರಿಗೆ ಉಚಿತ ಪಡಿತರ ಒದಗಿಸವ ಯೋಜನೆಯನ್ನು ಮುಂದುವರಿಸಲಿದೆ.
ಇದನ್ನೂ ಓದಿ : ಕೇಂದ್ರ ಸರ್ಕಾರದಿಂದ ಬಿಗ್ ಗಿಫ್ಟ್ : ಕೇವಲ 3 ಸಾವಿರ ವಿನಿಯೋಗಿಸಿ ಗಳಿಸಿ ಲಕ್ಷಾಂತರ ಹಣ !
ಇದು ದೇಶದ ಜನರಿಗೆ ತುಂಬಾನೇ ಸಹಾಯಕಾರಿ ಎಂಬುದು ನನಗೆ ತಿಳಿದಿದೆ ಎಂದು ಹೇಳಿದರು. ಅಲ್ಲದೇ ಛತ್ತೀಸಗಢ ಚುನಾವಣೆಯಲ್ಲಿ ನೀವೆಲ್ಲರೂ ಒಂದಾಗಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂದು ಮನವಿ ಮಾಡಿದರು. ಇದೇ ವೇಳೆ ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ ಕಾಂಗ್ರೆಸ್ ಎಂದಿಗೂ ದೇಶದ ಜನರ ಕಲ್ಯಾಣದ ಬಗ್ಗೆ ಯೋಚನೆಯನ್ನು ಮಾಡಿಯೇ ಇಲ್ಲ.

ತನ್ನ ಲಾಭದ ಬಗ್ಗೆ ಮಾತ್ರ ಕಾಳಜಿ ವಹಿಸುವ ಕಾಂಗ್ರೆಸ್ ನಾಯಕರು ಭ್ರಷ್ಟಾಚಾರ ಎಸಗುತ್ತಿದ್ದಾರೆ. ಈಗ ಜಾತಿವಾದದ ಹೆಸರಿಯಲ್ಲಿ ಕಾಂಗ್ರೆಸ್ ಇಡೀ ದೇಶವನ್ನೇ ಒಡೆಯುವ ಹುನ್ನಾರ ಮಾಡಿಕೊಂಡಿದೆ. ಜಾತಿವಾದದ ಮೂಲಕ ಬಡವರನ್ನು ಒಡೆದು ಹಾಕುವುದು ಕಾಂಗ್ರೆಸ್ ಸೇರಿದಂತೆ ಅವರ ಒಕ್ಕೂಟದ ಮುಖ್ಯ ಗುರಿಯಾಗಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ : LIC Aadhaar Shila : ದಿನಕ್ಕೆ ರೂ.29 ಹೂಡಿಕೆ, ಮಹಿಳೆಯರಿಗೆ ಸಿಗುತ್ತೆ 4 ಲಕ್ಷ ರೂ., ಇದು ಎಲ್‌ಐಸಿಯ ಆಧಾರ್ ಶಿಲಾ ಅದ್ಭುತ ಯೋಜನೆ
ಅಂದಹಾಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಕೇಂದ್ರ ಸರ್ಕಾರದ ಮಹತ್ವಪೂರ್ಣ ಯೋಜನೆಗಳ ಪೈಕಿ ಒಂದಾಗಿದ್ದು ಈ ಯೋಜನೆಯನ್ನು 2020ರಲ್ಲಿ ಮೋದಿ ಸರ್ಕಾರ ಪರಿಚಯಿಸಿದೆ. ಕೋವಿಡ್ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಕ್ಕೆ ನೆರವಾಗುವ ಸಲುವಾಗಿ ಉಚಿತ ಪಡಿತರಗಳನ್ನು ಸರ್ಕಾರದ ವತಿಯಿಂದಲೆ ನೀಡುವುದು ಈ ಯೋಜನೆಯ ಉದ್ದೇಶವಾಗಿತ್ತು.
ಈ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರ ಐದು ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಾ ಬಂದಿದೆ. ದೆಶದ ಎಂಬತ್ತು ಕೋಟಿಗೂ ಅಧಿಕ ಬಡವರು ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ. ಕೊರೊನಾ ಸಂಕಷ್ಟದ ಕಾಲದಲ್ಲಿ ಪಡಿತರ ನೀಡುವ ಮೂಲಕ ಬಡವರ ಪಾಲಿಗೆ ನೆರವಾಗಿದ್ದ ನರೇಂದ್ರ ಮೋದಿ ಇದೀಗ ಯೋಜನೆಯನ್ನು ಮತ್ತೆ ವಿಸ್ತರಣೆ ಮಾಡಿದ್ದಾರೆ.
ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯ ಹಣ ಇನ್ನೂ ಸಿಕ್ಕಿಲ್ವಾ ? ಇಂದೇ ಈ ಕೆಲಸ ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮೆ ಆಗೋದು ಗ್ಯಾರಂಟಿ
free ration extended for Next 5 years Prime Minister Modi Good News