Gold and silver price: ಮತ್ತೆ ಇಳಿಕೆಯ ದಾರಿ ಹಿಡಿದ ಚಿನ್ನ – ಬೆಳ್ಳಿ : ಚಿನ್ನಾಭರಣ ಪ್ರಿಯರು ಫುಲ್​ ಖುಷ್​, ಹೂಡಿಕೆದಾರರಿಗೆ ಆತಂಕ

Gold and silver price: ಚಿನ್ನಾಭರಣ ಪ್ರಿಯರಿಗೆ ಶುಭಸುದ್ದಿಯೊಂದು ದೊರಕಿದೆ. ಕಳೆದ 2-3 ದಿನಗಳಿಂದ ಏರಿಕೆಯ ಹಾದಿಯಲ್ಲಿದ್ದ ಚಿನ್ನ ಹಾಗೂ ಬೆಳ್ಳಿ ಮತ್ತೊಮ್ಮೆ ಇಳಿಕೆಯ ಕಡೆ ಮುಖ ಮಾಡಿದೆ. ಜಾಗತಿಕ ವ್ಯಾಪಾರ ವ್ಯವಹಾರಗಳು ಹಾಗೂ ಡಾಲರ್​ ರೂಪಾಯಿ ಮೌಲ್ಯವರ್ದನೆಗಳಿಂದಾಗಿ ಚಿನ್ನ ಬೆಳ್ಳಿಯಲ್ಲಿ ಇಳಿಕೆ ಕಂಡುಬಂದಿದ್ದು ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ.

24 ಕ್ಯಾರೆಟ್​ 10 ಗ್ರಾಂ ಚಿನ್ನದ ಬೆಲೆ 1,57,920 ರೂಪಾಯಿ ಆಗಿದೆ. ಅಂತೆಯೇ 22 ಕ್ಯಾರೆಟ್​ 10 ಗ್ರಾಂ ಚಿನ್ನದ ದರ 1,44,760 ರೂಪಾಯಿ ಆಗಿದೆ. ಬೆಳ್ಳಿ ದರದಲ್ಲಂತೂ ಅಪಾರ ಪ್ರಮಾಣದಲ್ಲಿ ಕುಸಿತ ಕಂಡುಬಂದಿದ್ದು 1 ಕೆಜಿ ಬೆಳ್ಳಿಯ ದರದಲ್ಲಿ ಬರೋಬ್ಬರಿ 10 ಸಾವಿರ ರೂಪಾಯಿ ಕುಸಿತ ಕಂಡುಬಂದಿದೆ. ಸದ್ಯ 1 ಕೆಜಿ ಬೆಳ್ಳಿಯ ದರ 2.9 ಲಕ್ಷ ರೂಪಾಯಿ ಆಗಿದೆ.

Also Read: ಫೆಬ್ರವರಿಯಿಂದ ಜಾರಿಗೆ ಬಂದಿದೆ ಹೊಸ ನಿಯಮ; 10 ಸೆಕೆಂಡ್‌ನೊಳಗೆ ಈ ಕೆಲಸ ಆಗುತ್ತೆ!

ರಾಜಕೀಯ ಅಸ್ಥಿರತೆ, ಡಾಲರ್​ ಬಲವರ್ಧನೆಯಿಂದಾಗಿ ಷೇರು ಮಾರುಕಟ್ಟೆಯಲ್ಲಿ ಚೇತರಿಕೆ, ಪ್ರಾಫಿಟ್​ ಬುಕ್ಕಿಂಗ್​ ಹಾಗೂ ಮದ್ಯಪ್ರಾಚ್ಯದಲ್ಲಿ ಯುದ್ಧದದ ಭೀತಿ ಇವೆಲ್ಲವೂ ಚಿನ್ನದ ಮೇಲಿನ ಹೂಡಿಕೆಯ ಅವಲಂಬನೆಯನ್ನು ತಗ್ಗಿಸಿದ್ದು ಇದರಿಂದಾಗಿ ಚಿನ್ನದ ದರದಲ್ಲಿ ಇಳಿಕೆ ಕಂಡುಬರುತ್ತಿದೆ.

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories