Gold Silver Price Today: ರಷ್ಯಾ ಉಕ್ರೇನ್ ಯುದ್ಧದಿಂದ ಬೆಂಗಳೂರು, ಮಂಗಳೂರು, ಮೈಸೂರಿನಲ್ಲೂ ಏರಿದ ಚಿನ್ನ-ಬೆಳ್ಳಿಯ ಬೆಲೆ; ಇಲ್ಲಿದೆ ಮಾಹಿತಿ

ರಷ್ಯಾ ತನ್ನ ದಾಯಾದಿ ದೇಶ ಉಕ್ರೇನ್ ಮೇಲೆ ಯುದ್ಧ ಘೋಷಣೆ (Russia vs Ukraine War) ಮಾಡಿದ ಪರಿಣಾಮ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಹಠಾತ್ ಏರಿಕೆ (Gold Silver Price Today) ಕಂಡಿದೆ. ಇಷ್ಟು ದಿನ ಕಡಿಮೆಯಿದ್ದ ಚಿನ್ನದ ದರ ಏರಿಕೆ ಕಂಡಿರುವುದು ಚಿನ್ನ ಖರೀದಿ ಮಾಡಬೇಕೆಂದು ಪ್ಲಾನ್ ಮಾಡಿಕೊಂಡಿದ್ದವರಿಗೆ ಕೊಂಚ ನಿರಾಸೆ ಮೂಡಿಸಿದೆ. ಭಾರತದಲ್ಲಿ (Gold Rate in India) 22 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 850 ರೂ.ಗಳಷ್ಟುಏರಿಕೆಯಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 930 ರೂ. ಏರಿಕೆಯಾಗಿದೆ. ಫೆಬ್ರವರಿ 25, ಶುಕ್ರವಾರ ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 46,000 ರೂ. ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 50,180 ರೂ. ಆಗಿದೆ.

ಬೆಂಗಳೂರು ನಗರದಲ್ಲಿ ಚಿನ್ನದ ದರ 46,850 ರೂ ಆಗಿದೆ. ಮಂಗಳೂರು ನಗರದಲ್ಲಿ 46,850 ರೂ, ಮೈಸೂರು ನಗರದಲ್ಲಿ 46,850 ರೂ. ಆಗಿದೆ. ಭಾರತದ ಇತರ ಪ್ರಮುಖ ನಗರಗಳಾದ ಚೆನ್ನೈ, ಹೈದರಾಬಾದ್ ಮತ್ತಿತರ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಇಂತಿದೆ: ಚೆನ್ನೈ- 48,270 ರೂ, ಮುಂಬೈ- 46,850 ರೂ, ದೆಹಲಿ- 46,850 ರೂ, ಕೊಲ್ಕತ್ತಾ- 46,850 ರೂ, ಹೈದರಾಬಾದ್- 46,850 ರೂ, ಕೇರಳ- 46,850 ರೂ, ಪುಣೆ- 46,900 ರೂ.ನಂತೆ ಮಾರಾಟ ಮಾಡಲಾಗುತ್ತಿದೆ.

ಅಷ್ಟೇ ಅಲ್ಲದೇ ಚಿನ್ನದ ದರದ ಜೊತೆಗೆ ನಾನೂ ಏನು ಕಡಿಮೆ ಇಲ್ಲ ಎಂಬಂತೆ ಬೆಳ್ಳಿ ದರದಲ್ಲಿಯೂ ಏರಿಕೆಯಾಗಿದೆ. ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಣಾಮಮ ಭಾರತದಲ್ಲಿನ ಬೆಳ್ಳಿ ದರದ ಮೆಲೂ ಪರಿಣಾಮ ಬೀರಿರುವುದು ಖಚಿತವಾದಂತಾಗಿದೆ. ಬೆಳ್ಳಿ ಬೆಲೆಯಲ್ಲಿ ಇತ್ತೀಚಿನ ದಿನಗಳಿಗಿಂತ ಇಂದು ಶುಕ್ರವಾರ ಒಮ್ಮೆಲೆ ಏರಿಕೆಯಾಗಿದೆ. ನಿನ್ನೆಗಿಂತ ಇಂದು 1 ಕೆಜಿ ಬೆಳ್ಳಿಗೆ 1,700 ರೂ. ಬೆಲೆ ಹೆಚ್ಚಳವಾಗಿದೆ. 1 ಕೆಜಿ ಬೆಳ್ಳಿ ದರ ನಿನ್ನೆ 64,300 ರೂ. ಆಗಿತ್ತು. ಅದು ಇಂದು 1,700 ರೂ. ಏರಿಕೆಯಾಗಿದೆ. ಹೀಗಾಗಿ ಇಂದು 1 ಕೆಜಿ ಬೆಳ್ಳಿ ದರ 66,000 ರೂ. ಆಗಿದ್ದು ಬೆಳ್ಳಿ ಕೊಂಡುಕೊಳ್ಳಲು ಯೋಜನೆ ಹಾಕಿದ್ದವರಿಗೆ ಕೊಂಚ ನಿರಾಸೆಯಾಗುವಂತೆ ಆಗಿದೆ. ಬೆಂಗಳೂರು- 72,700 ರೂ, ಮೈಸೂರು- 72,700 ರೂ., ಮಂಗಳೂರು- 72,700 ರೂ.ನಂತೆ 1 ಕೆಜಿ ಬೆಳ್ಳಿ ದರದ ವಹಿವಾಟು ನಡೆಸಲಾಗುತ್ತಿದೆ.

ಇದನ್ನೂ ಓದಿ: Jeevan Jyoti Bima Yojana: ಜಗತ್ತಿನಲ್ಲಿಯೇ ಅತ್ಯಂತ ಕಡಿಮೆ ದರದ ಟರ್ಮ್ ಇನ್ಶೂರೆನ್ಸ್ ಯೋಜನೆ ಹೊಂದಿದೆ ಭಾರತ

(Gold Silver Price Today highest rate in 2022 effect of Russia Ukraine war)

Comments are closed.