Protection of Indians : ರಷ್ಯಾ ಉಕ್ರೇನ್ ಯುದ್ಧ ಹಿನ್ನೆಲೆ : ಭಾರತೀಯ ರಕ್ಷಣೆ ಕೋರಿ ಸುಪ್ರೀಂ ಗೆ ಅರ್ಜಿ

ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಣೆ ಮಾಡಿದ ಬೆನ್ನಲ್ಲೇ ಕರ್ನಾಟಕವೂ ಸೇರಿದಂತೆ ದೇಶದ ಸಾವಿರಾರು ಜನರು ಉಕ್ರೇನ್ ನಲ್ಲಿ ಸಿಲುಕಿದ್ದಾರೆ. ಕರ್ನಾಟಕದವರ ಪೈಕಿ ಬಹುಪಾಲು ಸಂಖ್ಯೆಯಲ್ಲಿದ್ದಾರೆ. ಈ ಮಧ್ಯೆ ನೂರಾರು ವಿದ್ಯಾರ್ಥಿಗಳು, ಉದ್ಯೋಗಿಗಳು ಉಕ್ರೇನ್ ನಲ್ಲಿ ಆಹಾರ ನೀರಿಲ್ಲದೇ ಪರದಾಡುತ್ತಿದ್ದು, ಮಕ್ಕಳು ಕಳಿಸುವ ಪರದಾಟದ ವಿಡಿಯೋ ನೋಡಿ ಪೋಷಕರು ಕಣ್ಣೀರಿಡುತ್ತಿದ್ದಾರೆ.ಈ ಮಧ್ಯೆ ಉಕ್ರೇನ್ ನಿಂದ ಭಾರತೀಯರನ್ನು (Protection of Indians) ಕರೆತರುವ ವಿಚಾರ ಈಗ ಸುಪ್ರೀಂ ಕೋರ್ಟ್ ಅಂಗಳ ತಲುಪಿದೆ.

ಸುಪ್ರೀಂ ಕೋರ್ಟ್ ನ ವಕೀಲರಾದ ಮನೀಶ್ ತಿವಾರಿ ಭಾರತೀಯರನ್ನು ಕರೆತರಲು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಕೇಂದ್ರಕ್ಕೆ ಸೂಚನೆ ನೀಡುವಂತೆ ಕೋರಿ ಪಿಐಎಲ್ ಸಲ್ಲಿಸಿದ್ದಾರೆ. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ಮಕ್ಕಳನ್ನು ಬೇಗ ವಾಪಸ್ ಕರೆತರಬೇಕು. ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೌಲಭ್ಯ, ವಸತಿ, ಆಹಾರದ ವ್ಯವಸ್ಥೆ ಮಾಡಬೇಕು. ವಿದ್ಯಾರ್ಥಿಗಳ ವೃತ್ತಿಜೀವನ ಹಾಳಾಗದಂತೆ ಆನ್‌ಲೈನ್‌ನಲ್ಲಿ ಶಿಕ್ಷಣ ನೀಡಲು ವ್ಯವಸ್ಥೆ ಮಾಡಬೇಕು.ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡುವಂತೆ ಅರ್ಜಿಯಲ್ಲಿ ಮನವಿ‌ಮಾಡಲಾಗಿದೆ.

ಈ ಪ್ರಕರಣವನ್ನು ತ್ವರಿತ ವಿಚಾರಣೆಗೂ ಒಳಪಡಿಸುವಂತೆ ಸುಪ್ರೀಂ ಕೋರ್ಟ್ ವಕೀಲ ವಿಶಾಲ್ ತಿವಾರಿ ಪಿಐಎಲ್ ನಲ್ಲಿ ಮನವಿ ಮಾಡಿದ್ದಾರೆ. ಕರ್ನಾಟಕವೂ ಸೇರಿದಂತೆ ಎಲ್ಲ ರಾಜ್ಯಗಳಿಂದ ಉಕ್ರೇನ್ ನಲ್ಲಿರುವ ರಾಯಭಾರಿ ಕಚೇರಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ವಿದ್ಯಾರ್ಥಿಗಳು ಹಾಗೂ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರಿಗೆ ಯಾವುದೇ ರೀತಿಯ ಸೂಕ್ತ ಮಾರ್ಗದರ್ಶನ ನೀಡುತ್ತಿಲ್ಲ. ಅನ್ನ ನೀರಿಲ್ಲದೇ, ಫ್ಲೈಟ್ ಟಿಕೇಟ್‌ಬಗ್ಗೆ‌ಮಾಹಿತಿ ಇಲ್ಲದೇ ಕಂಗಲಾಗಿದ್ದಾರೆ ಎಂದು ಪೋಷಕರು ಆಳಲು ತೋಡಿಕೊಳ್ಳುತ್ತಿದ್ದಾರೆ.

ಈ ಮಧ್ಯ ಕರ್ನಾಟಕದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಡ ಹೇರಲಾಗುತ್ತಿದೆ. ಕೊಪ್ಪಳ ಸಂಸದ ಸಂಗಣ್ಣ ಕರಡಿ ವಿದೇಶಾಂಗ ಸಚಿವ ಜೈಶಂಕರ್ ಗೆ ಮನವಿ ಮಾಡಿದ್ದು, ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವಂತೆ ಮನವಿ‌ಮಾಡಿದ್ದಾರೆ. ಇನ್ನೊಂದೆಡೆ ಕರ್ನಾಟಕ ಮಹಿಳಾ ಆಯೋಗ ಸಿಎಂಗೆ ಪತ್ರ ಬರೆದು ತಮ್ಮಿಂದ ಸಹಾಯ ಕೋರಿದ ಉಕ್ರೇನ್ ನಲ್ಲಿರುವ ಎಂಟು ಮಹಿಳಾ ವಿದ್ಯಾರ್ಥಿಗಳ ರಕ್ಷಣೆಗೆ ಕ್ರಮಕೈಗೊಳ್ಳುವಂತೆ ಸೂಚಿಸಿದೆ. ಈ ಮಧ್ಯ ಉಕ್ರೇನ್ ನಲ್ಲಿ ರಷ್ಯಾ ದಾಳಿ ಮುಂದುವರಿಯುವುದರಿಂದ ಭಾರತೀಯರ ರಕ್ಷಣೆ ಸರ್ಕಾರಕ್ಕೆ ಸವಾಲಾಗಿದೆ‌. ವಿಮಾನಯಾನ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿದೆ.

ಇದನ್ನೂ ಓದಿ : ಕುದುರೆ ಗಳು ರೋಡಿಗಿಳಿಯೋಕು ಬೇಕು ವಿಮೆ – ಇನ್ಶುರೆನ್ಸ್‌ ಕಡ್ಡಾಯ ಎಂದ ದೆಹಲಿ ನಗರ ಪಾಲಿಕೆ

ಇದನ್ನೂ ಓದಿ : ನೀರಿಲ್ಲ, ಆಹಾರವಿಲ್ಲ, ಎಟಿಎಂನಲ್ಲಿ ಹಣವಿಲ್ಲ: ಉಕ್ರೇನ್ ನಲ್ಲಿ ಭಾರತೀಯರ ಗೋಳು ಕೇಳೋರಿಲ್ಲ

(Ukraine crisis, applied to the Supreme Court for the protection of Indians)

Comments are closed.