ಗೃಹಲಕ್ಷ್ಮೀ ಯೋಜನೆಯ ಹಣ ಜಮೆ ಆಗದೇ ಇರುವವರಿಗೆ ಇಲ್ಲಿದೆ ಗುಡ್‌ನ್ಯೂಸ್‌

ಗೃಹಲಕ್ಷ್ಮೀ ಯೋಜನೆ (GruhaLakshmi Scheme)ಯ ಮೂಲಕ ರಾಜ್ಯದಲ್ಲಿನ ಗೃಹಿಣಿಯರ ಖಾತೆಗೆ ಪ್ರತೀ ತಿಂಗಳು 2000 ರೂಪಾಯಿ  ಯನ್ನು (DBT) ಜಮೆ ಮಾಡಲಾಗುತ್ತದೆ. ಆದ್ರೀಗ ಗೃಹಲಕ್ಷ್ಮೀ ಹಣ ಸಿಗದೇ ಇರುವವರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ.

ಬೆಂಗಳೂರು : ಗೃಹಲಕ್ಷ್ಮೀ ಯೋಜನೆ (Gruha Lakshmi Scheme)ಯ ಮೂಲಕ ಕರ್ನಾಟಕ ಸರಕಾರ ರಾಜ್ಯದಲ್ಲಿನ ಗೃಹಿಣಿಯರ ಖಾತೆಗೆ ಪ್ರತೀ ತಿಂಗಳು 2000 ರೂಪಾಯಿ  ಯನ್ನು (DBT) ಜಮೆ ಮಾಡಲಾಗುತ್ತದೆ. ಆದ್ರೆ ಬಹುತೇಕರಿಗೆ ಇಂದಿಗೂ ಈ ಯೋಜನೆಯ ಲಾಭ ಧಕ್ಕಿಲ್ಲ. ಆದ್ರೀಗ ಗೃಹಲಕ್ಷ್ಮೀ ಹಣ ಸಿಗದೇ ಇರುವವರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ.

ಕಾಂಗ್ರೆಸ್‌ ಸರಕಾರ (Congress Gurantee)ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನ ನೀಡಿದ ಭರವಸೆಗಳ ಪೈಕಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆ ಕೊನೆಗೂ ಜಾರಿಗೆ ಬಂದಿದೆ. ರಾಜ್ಯ ಸರಕಾರ ಈಗಾಗಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಮಹಿಳೆಯ ಖಾತೆಗಳಿಗೆ ಮೊದಲ ತಿಂಗಳ ಹಣವನ್ನು ಜಮೆ ಮಾಡಿದೆ.

Gruha Lakshmi Scheme Good news for Karnataka Governament
Image Credit to Original Source

ಇದೀಗ ಅಕ್ಟೋಬರ್‌ ಎರಡನೇ ವಾರದಲ್ಲಿ ಗೃಹಲಕ್ಷ್ಮೀ ಯೋಜನೆಯ ಎರಡನೇ ಕಂತಿನ ಹಣ ವರ್ಗಾವಣೆ ಮಾಡಲು ಸರಕಾರ ಸಿದ್ದವಾಗಿದೆ. ಆದರೆ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ ಶೇ.30 ರಷ್ಟು ಗೃಹಿಣಿಯರಿಗೆ ಇನ್ನೂ ಗೃಹಲಕ್ಷ್ಮೀ ಯೋಜನೆಯ ಹಣ ಬ್ಯಾಂಕ್‌ ಖಾತೆಗೆ ಜಮೆ ಆಗಿಲ್ಲ.

ಇದನ್ನೂ ಓದಿ : ಹೊಸ ರೇಷನ್‌ ಕಾರ್ಡ್‌ : ರೇಷನ್‌ ಕಾರ್ಡ್‌ ತಿದ್ದುಪಡಿಗೆ ಈ ದಾಖಲೆಗಳು ಕಡ್ಡಾಯ

ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ಖಾತೆಗೆ ಇನ್ನೂ ಹಣ ಜಮೆ ಆಗಿರದ ಗೃಹಿಣಿಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುಡ್‌ನ್ಯೂಸ್‌ ಕೊಟ್ಟಿದ್ದಾರೆ. ಬಹುತೇಕ ಗೃಹಲಕ್ಷ್ಮೀ ಖಾತೆದಾರರಿಗೆ ತಾಂತ್ರಿಕ ಕಾರಣದ (Technical Reason) ಹಿನ್ನೆಲೆಯಲ್ಲಿ ಬ್ಯಾಂಕ್‌ ಖಾತೆಗೆ ಮೊದಲ ಕಂತಿನ 2000 ರೂಪಾಯಿ ವರ್ಗಾವಣೆ ಆಗಿರಲಿಲ್ಲ.

Gruha Lakshmi Scheme Good news for Karnataka Governament
Image Credit to Original Source

ಕರ್ನಾಟಕ ರಾಜ್ಯದ 1.26 ಕೋಟಿ ಗೃಹಿಣಿಯರಿಗೆ ಈಗಾಗಲೇ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಈಗಾಗಲೇ 1.10 ಕೋಟಿ ಗೃಹಿಣಿಯರ ಖಾತೆಗೆ ಹಣ ವರ್ಗಾವಣೆ ಆಗಲಿದೆ. ಆದರೆ ಸುಮಾರು 16೧೬ ಲಕ್ಷ ಜನರ ಬ್ಯಾಂಕ್‌ ಖಾತೆಗಳಿಗೆ ಇನ್ನೂ ಹಣ ವರ್ಗಾವಣೆ ಆಗಿಲ್ಲ. ಇದೀಗ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ ಎಲ್ಲಾ ಗೃಹಿಣಿರ ಖಾತೆಯಲ್ಲಿನ ತಾಂತ್ರಿಕ ದೋಷವನ್ನು ಸರಿಪಡಿಸಿ ಮೊದಲ ಕಂತಿನ ಹಣವ್ನನೂ ವರ್ಗಾವಣೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ : ಹೊಸ ಕಾರ್ಮಿಕ ನೀತಿ : ವಾರಕ್ಕೆ ಮೂರೂವರೆ ದಿನ ಕೆಲಸ, ಮೂರೂವರೆ ದಿನ ರಜೆ

ಸುಮಾರು 6 ಲಕ್ಷ ಮಹಿಳೆಯರ ಖಾತೆಗಳಿಗೆ ಮೊದಲ ಕಂತಿನ ಹಣ ಜಮೆ ಆಗಿಲ್ಲ. ಈ ನಡುವಲ್ಲೇ ಸರಕಾರ ಮತ್ತೊಂದು ಹೊಸ ಅಪ್‌ಡೇಟ್ಸ್‌ ಕೊಟ್ಟಿದೆ. ಯಾರ ಖಾತೆಗೆ ಇದುವರೆಗೂ ಗೃಹಲಕ್ಷ್ಮೀ ಹಣ ವರ್ಗಾವಣೆ ಆಗಿಲ್ಲವೋ ಅಂತಹ ಖಾತೆದಾರರ ಬ್ಯಾಂಕ್‌ ಖಾತೆಗೆ ಶೀಘ್ರದಲ್ಲಿಯೇ ಹಣವನ್ನು ವರ್ಗಾವಣೆ ಮಾಡುವುದಾಗಿಯೂ ಘೋಷಣೆ ಮಾಡಿದೆ.

ರಾಜ್ಯ ಸರಕಾರ ಇದೀಗ ಎರಡನೇ ಬಾರಿಗೆ ಪಡಿತರ ಚೀಟಿಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಅವಕಾಶ ಕಲ್ಪಿಸಿದೆ. ಪ್ರಮುಖವಾಗಿ ರಾಜ್ಯದ ಪ್ರತೀ ಜಿಲ್ಲೆಗಳಲ್ಲಿನ ಎಪಿಎಲ್‌ (APL Card), ಬಿಪಿಎಲ್‌ (BPL Card) ಹಾಗೂ ಅಂತ್ಯೋದಯ ಕಾರ್ಡುದಾರರು (Anthyodhaya Card) ಮೂರು ದಿನಗಳ ಕಾಲಾವಧಿಯಲ್ಲಿ ತಮ್ಮ ಕಾರ್ಡುಗಳಲ್ಲಿನ ತಾಂತ್ರಿಕ ಸಮಸ್ಯೆಯನ್ನು (Ration Card Technical Problem) ಪರಿಹಾರ ಮಾಡಿಕೊಳ್ಳಬಹುದಾಗಿದೆ.

Gruha Lakshmi Scheme Good news for Karnataka Governament
Image Credit to Original Source

ಪಡಿತರ ಚೀಟಿ, ಆಧಾರ್‌ ಹಾಗೂ ಬ್ಯಾಂಕ್‌ ಅಕೌಂಟ್‌ ಲಿಂಕ್‌ (Bank Account Link), ಪಡಿತರ ಚೀಟಿಯ ಜೊತೆಗೆ ಆಧಾರ್‌ ಲಿಂಕ್‌ (Ration Card + Adhar Card Link) ಮಾಡಿಸಿದ್ರೆ ಅಂತಹ ಮನೆಯ ಯಜಮಾನಿಯ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಹಣ ವರ್ಗಾವಣೆ ( Bank Transfer) ಆಗಲಿದೆ. ಈ ನಿಟ್ಟಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದವರು ತಮ್ಮ ಅರ್ಜಿಯ ಸ್ಟೇಟಸ್‌ ಪರಿಶೀಲನೆ ಮಾಡಿಕೊಳ್ಳುವುದು ಒಳಿತು.

ಇದನ್ನೂ ಓದಿ : ಒಂದೇ ಹೆಣ್ಣು ಮಗಳಿರುವ ದಂಪತಿಗಳಿಗೆ ಸಿಗುತ್ತೆ 2 ಲಕ್ಷ ರೂ.: ಸರಕಾರದಿಂದ ಘೋಷಣೆಯಾಯ್ತು ಹೊಸ ಯೋಜನೆ

ಇನ್ನು ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಹಣವನ್ನು ಪಡೆದುಕೊಂಡವರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಸಂದಾಯವಾಗಲಿದೆ. ಅನ್ನಭಾಗ್ಯ ಯೋಜನೆಯಡಿ ಪಡಿತರ ಅಕ್ಕಿಯ ಬಾಪ್ತು ಹಣವನ್ನು ಪಡೆದುಕೊಂಡಿದ್ದು, ಗೃಹಲಕ್ಷ್ಮೀ ಯೋಜನೆಯ ಮೊದಲ ಕಂತಿನ ಹಣ ಜಮೆ ಆಗದೇ ಇಲ್ಲದವರಿಗೆ, ಅಕ್ಟೋಬರ್‌ 15ರ ಒಳಗೆ ಜಮೆ ಆಗಲಿದೆ.

ಈಗಾಗಲೇ ಗೃಹಲಕ್ಷ್ಮೀ ಯೋಜನೆಯ ಮೊದಲ ಕಂತಿನ ಹಣ ವರ್ಗಾವಣೆ ಆಗಿದ್ದು, ಎರಡನೇ ಕಂತಿನ ಹಣ ಯಾವಾಗ ವರ್ಗಾವಣೆ ಆಗಲಿದೆ ಅಂತಾ ಯೋಚಿಸುತ್ತಿರುವ ಗೃಹಿಣಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ನವರಾತ್ರಿಯ ಹೊತ್ತಲ್ಲೇ ರಾಜ್ಯ ಸರಕಾರ ಗೃಹಲಕ್ಷ್ಮೀ ಯೋಜನೆಯ ಎರಡನೇ ಕಂತಿನ ಹಣವನ್ನು ವರ್ಗಾವಣೆ ಮಾಡುವುದಾಗಿ ಘೋಷಣೆ ಮಾಡಿದೆ.

Gruha Lakshmi Scheme Good news for Karnataka Government

Comments are closed.