ವಿಶ್ವಕಪ್‌ನಲ್ಲಿ ವೇಗವಾಗಿ 1000 ರನ್ : ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿದ ಡೇವಿಡ್‌ ವಾರ್ನರ್‌

India Vs Austraila ಪಂದ್ಯದಲ್ಲಿ ಡೇವಿಡ್‌ ವಾರ್ನರ್‌ (David Warner World Record) ವಿಶ್ವದಾಖಲೆ ಬರೆದಿದ್ದಾರೆ. ವಿಶ್ವಕಪ್‌ ನಲ್ಲಿ ವೇಗವಾಗಿ 1000 ರನ್(fastest 1000 runs in ODI WC)  ಬಾರಿಸುವ ಮೂಲಕ ಭಾರತದ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ (Sachin Tendulkar) ಅವರ ದಾಖಲೆಯನ್ನು ಡೇವಿಡ್‌ ವಾರ್ನರ್‌ ಅಳಿಸಿ ಹಾಕಿದ್ದಾರೆ.

ವಿಶ್ವಕಪ್‌ ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ (India Vs Austraila) ನಡುವಿನ ಪಂದ್ಯದಲ್ಲಿ ಡೇವಿಡ್‌ ವಾರ್ನರ್‌ (David Warner World Record) ವಿಶ್ವದಾಖಲೆ ಬರೆದಿದ್ದಾರೆ. ವಿಶ್ವಕಪ್‌ ನಲ್ಲಿ ವೇಗವಾಗಿ 1000 ರನ್(fastest 1000 runs in ODI WC)  ಬಾರಿಸುವ ಮೂಲಕ ಭಾರತದ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ (Sachin Tendulkar) ಅವರ ದಾಖಲೆಯನ್ನು ಡೇವಿಡ್‌ ವಾರ್ನರ್‌ ಅಳಿಸಿ ಹಾಕಿದ್ದಾರೆ.

ಆಸ್ಟ್ರೇಲಿಯಾ ತಂಡದ ಸ್ಟಾರ್‌ ಆಟಗಾರ ಡೇವಿಡ್‌ ವಾರ್ನರ್‌ ಏಕದಿನ ವಿಶ್ವಕಪ್‌ನಲ್ಲಿ (ODI Cricket World Cup)  ಕೇವಲ 19 ಇನ್ನಿಂಗ್ಸ್‌ಗಳಲ್ಲಿ 1000 ರನ್ ಗಳಿಸುವ ಮೂಲಕ ವೇಗದ ಸಾವಿರ ರನ್‌ ಸರದಾರ ಎನಿಸಿಕೊಂಡಿದ್ದಾರೆ. ಈ ಹಿಂದೆ ಭಾರತ ತಂಡ ಮಾಜಿ ನಾಯಕ ಸಚಿನ್‌ ತೆಂಡೂಲ್ಕರ್‌ ಹಾಗೂ ದಕ್ಷಿಣ ಆಫ್ರಿಕಾ ತಂಡದ ಎಬಿ ಡಿವಿಲಿಯರ್ಸ್ 20 ಇನ್ನಿಂಗ್ಸ್‌ಗಳಲ್ಲಿ 1000 ರನ್ ಗಳಿಸಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

IND Vs AUS David Warner breaks Sachin Tendulkar record for fastest 1000 runs in ODI World Cup 2023 new
Image Credit : cric tracker

ಇನ್ನು ಏಕದಿನ ವಿಶ್ವಕಪ್‌ನಲ್ಲಿ 1000 ರನ್ ಗಳಿಸಿದ ಆಸ್ಟ್ರೇಲಿಯಾದ 4 ನೇ ಆಟಗಾರ ಎನಿಸಿಕೊಂಡಿದ್ದಾರೆ. ಡೇವಿಡ್‌ ವಾರ್ನರ್‌ ಈ ದಾಖಲೆ ಸರಿಗಟ್ಟಲು ಕೇವಲ  8 ರನ್‌ ಅವಶ್ಯಕತೆಯಿತ್ತು. ಇಂದು ಭಾರತ ವಿರುದ್ದ ಪಂದ್ಯದಲ್ಲಿ ಡೇವಿಡ್‌ ವಾರ್ನರ್‌ ಈ ದಾಖಲೆಯನ್ನು ಮಾಡಿದ್ದಾರೆ.

ಇದನ್ನೂ ಓದಿ : ವಿಶ್ವಕಪ್‌ 2023 : ಶುಭಮನ್‌ ಗಿಲ್‌ ಔಟ್‌, ರೋಹಿತ್‌ ಶರ್ಮಾ- ಇಶಾನ್‌ ಕಿಶಾನ್‌ ಓಪನರ್‌

ಇನ್ನು ಪ್ರಸ್ತುತ ಸಾಲಿನ ಏಕದಿನ ವಿಶ್ವಕಪ್‌ನ ಮೊದಲ ಪಂದ್ಯವನ್ನು ಅಸ್ಟ್ರೇಲಿಯಾ ಭಾರತದ ವಿರುದ್ದ ಕಣಕ್ಕೆ ಇಳಿದಿದ್ದು, ಇದೀಗ ಡೇವಿಡ್‌ ವಾರ್ನರ್‌ ಭಾರತ ವಿರುದ್ದ 52ಎಸೆತಗಳಲ್ಲಿ 41 ರನ್‌ ಬಾರಿಸಿದ್ದಾರೆ ಇದರಲ್ಲಿ 6 ಬೌಂಡರಿ ಒಳಗೊಂಡಿವೆ. ಇನ್ನು ಅಂತಿಮವಾಗಿ ಡೇವಿಡ್‌ ವಾರ್ನರ್‌ ಕುಲದೀಪ್‌ ಯಾದವ್‌ ಗೆ ವಿಕೆಟ್‌ ಒಪ್ಪಿಸಿದ್ದಾರೆ.

ಇದಕ್ಕೂ ಮೊದಲು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್‌, ಆಡಮ್‌ ಗಿಲ್‌ ಕ್ರಿಸ್ಟ್‌, ಮಾರ್ಕ್‌ವಾ ವೇಗವಾಗಿ ಸಾವಿರ ರನ್‌ ಬಾರಿಸಿದ ಸಾಧನೆಯನ್ನು ಮಾಡಿದ್ದಾರೆ. ಇನ್ನು ಏಕದಿನ ವಿಶ್ವಕಪ್‌ನಲ್ಲಿ ಅತೀ ಹೆಚ್ಚು ರನ್‌ ಗಳಿಸಿದ ದಾಖಲೆ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರ ಹೆಸರಲ್ಲಿದೆ. ಸಚಿನ್‌ ತೆಂಡೂಲ್ಕರ್‌ ವಿಶ್ವಕಪ್‌ನಲ್ಲಿ 2278 ರನ್‌ ಬಾರಿಸುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ.

IND Vs AUS David Warner breaks Sachin Tendulkar record for fastest 1000 runs in ODI World Cup 2023
Image Credit : ICC World Cup 2023

ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರ ಡೇವಿಡ್‌ ವಾರ್ನರ್‌ ಸದ್ಯ ಮೂರನೇ ಬಾರಿಗೆ ವಿಶ್ವಕಪ್‌ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಮೂರು ವಿಶ್ವಕಪ್‌ನಲ್ಲಿ ಒಟ್ಟು 19 ಇನ್ನಿಂಗ್ಸ್‌ಗಳಲ್ಲಿ 1000 ODI ರನ್‌ ಗಳಿಸಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ 60 ಕ್ಕಿಂತ ಹೆಚ್ಚಿದೆ. ಒಟ್ಟು 19 ಇನ್ನಿಂಗ್ಸ್‌ಗಳಲ್ಲಿ ನಾಲ್ಕು ಶತಕಗಳು ಮತ್ತು ಮೂರು ಅರ್ಧ ಶತಕ ಒಳಗೊಂಡಿದೆ.

ಇದನ್ನೂ ಓದಿ : ಏಷ್ಯನ್‌ ಗೇಮ್ಸ್‌ ಕ್ರಿಕೆಟ್‌ ಫೈನಲ್‌ ಮಳೆಯಿಂದ ರದ್ದು : ಅಫ್ಘಾನಿಸ್ತಾನದ ವಿರುದ್ದ ಐತಿಹಾಸಿಕ ಚಿನ್ನ ಗೆದ್ದ ಭಾರತ

ಡೇವಿಡ್‌ ವಾರ್ನರ್‌ ನಂತರದ ಸ್ಥಾನದಲ್ಲಿ ಭಾರತದ ಸಚಿನ್‌ ತೆಂಡೂಲ್ಕರ್‌ ಹಾಗೂ ಎಬಿ ಡಿವಿಲಿಯರ್ಸ್‌ ಇದ್ದಾರೆ. ಇಬ್ಬರೂ ಸದ್ಯ 20 ಇನ್ನಿಂಗ್ಸ್‌ಗಳಲ್ಲಿ 1000 ರನ್ ಗಳಿಸಿದ್ದಾರೆ. ಈನ್ನು ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಅವರಿಗೂ ಕೂಡ ಡೇವಿಡ್‌ ವಾರ್ನರ್‌ ಸಾಧನೆಯನ್ನು ಸರಿಗಟ್ಟುವ ಅವಕಾಶವಿದೆ. ಇಂದಿನ ಪಂದ್ಯದಲ್ಲಿಯೇ ರೋಹಿತ್‌ ಶರ್ಮಾ ಈ ಸಾಧನೆಯನ್ನು ಮಾಡಬಹುದಾಗಿದೆ.

ರೋಹಿತ್‌ ಶರ್ಮಾ ಒಟ್ಟು ವಿಶ್ವಕಪ್‌ನಲ್ಲಿ 18 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈ ಪೈಕಿ ಅವರು ಒಟ್ಟು 978 ರನ್ ಗಳಿಸಿದ್ದಾರೆ. ಒಂದೊಮ್ಮೆ ಆಸ್ಟ್ರೇಲಿಯಾ ವಿರುದ್ದದ ಇಂದಿನ ಪಂದ್ಯದಲ್ಲಿ ಕೇವಲ 22 ರನ್ ಗಳಿಸಿದ್ರೆ, ರೋಹಿತ್‌ ಶರ್ಮಾ ಡೇವಿಡ್‌ ವಾರ್ನರ್‌ ಅವರ ಸಾಧನೆಯನ್ನು ಸರಿಗಟ್ಟಲಿದ್ದಾರೆ.

ಏಕದಿನ ವಿಶ್ವಕಪ್‌ನಲ್ಲಿ ಅತಿ ವೇಗದ 1000 ರನ್

19 ಪಂದ್ಯ : ಡೇವಿಡ್ ವಾರ್ನರ್*
20 ಪಂದ್ಯ : ಸಚಿನ್ ತೆಂಡೂಲ್ಕರ್ * /ಎಬಿ ಡಿವಿಲಿಯರ್ಸ್
21 ಪಂದ್ಯ : ವಿವ್ ರಿಚರ್ಡ್ಸ್/ ಸೌರವ್ ಗಂಗೂಲಿ
22 ಪಂದ್ಯ : ಮಾರ್ಕ್ ವಾ
22 ಪಂದ್ಯ : ಹರ್ಷಲ್ ಗಿಬ್ಸ್

ಇದನ್ನೂ ಓದಿ : ವಿಶ್ವಕಪ್‌ನಲ್ಲಿ ಗರಿಷ್ಠ ಸ್ಕೋರ್‌ ದಾಖಲಿಸಿದ ದಕ್ಷಿಣ ಆಫ್ರಿಕಾ : ವೇಗದ ಶತಕ ಸಿಡಿಸಿದ ಮಕ್ರಮ್‌

ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರು :

 1. ಸಚಿನ್ ತೆಂಡೂಲ್ಕರ್ :  ಭಾರತ : 44 ಪಂದ್ಯ 2278 ರನ್‌
 2.  ರಿಕಿ ಪಾಂಟಿಂಗ್ : ಆಸ್ಟ್ರೇಲಿಯಾ :  42 ಪಂದ್ಯ 1743 ರನ್‌
 3. ಕುಮಾರ್ ಸಂಗಕ್ಕಾರ : ಶ್ರೀಲಂಕಾ :  35 ಪಂದ್ಯ 1532 ರನ್‌
 4.  ಬ್ರಿಯಾನ್ ಲಾರಾ ವೆಸ್ಟ್ ಇಂಡೀಸ್ : 33 ಪಂದ್ಯ  1225 ರನ್‌
 5. ಎಬಿ ಡಿವಿಲಿಯರ್ಸ್ : ದಕ್ಷಿಣ ಆಫ್ರಿಕಾ : 22 ಪಂದ್ಯ  1207 ರನ್‌
 6. ಕ್ರಿಸ್ ಗೇಲ್ : ವೆಸ್ಟ್ ಇಂಡೀಸ್ : 34 ಪಂದ್ಯ  1186 ರನ್‌
 7. ಸನತ್ ಜಯಸೂರ್ಯ : ಶ್ರೀಲಂಕಾ  :  37 ಪಂದ್ಯ 1165 ರನ್
 8. ಶಾಕಿಬ್ ಅಲ್ ಹಸನ್ :  ಬಾಂಗ್ಲಾದೇಶ :  30 ಪಂದ್ಯ 1160 ರನ್‌
 9. ಜಾಕ್ವೆಸ್ ಕಾಲಿಸ್ : ದಕ್ಷಿಣ ಆಫ್ರಿಕಾ :  32 ಪಂದ್ಯ  1148 ರನ್
 10.  ತಿಲಕರತ್ನೆ ದಿಲ್ಶನ್‌ :  ಶ್ರೀಲಂಕಾ : 25 ಪಂದ್ಯ 1112 ರನ್‌
 11. ಮಹೇಲಾ ಜಯವರ್ಧನೆ : ಶ್ರೀಲಂಕಾ :  34 ಪಂದ್ಯ  1100 ರನ್‌
 12. ಆಡಮ್ ಗಿಲ್‌ಕ್ರಿಸ್ಟ್ : ಆಸ್ಟ್ರೇಲಿಯಾ  : 31 ಪಂದ್ಯ  1085 ರನ್‌
 13. ಜಾವೇದ್ ಮಿಯಾಂದಾದ್ :  ಪಾಕಿಸ್ತಾನ :  30 ಪಂದ್ಯ 1083 ರನ್
 14. ಸ್ಟೀಫನ್ ಫ್ಲೆಮಿಂಗ್ : ನ್ಯೂಜಿಲೆಂಡ್ :‌ 33 ಪಂದ್ಯ 1075 ರನ್‌
 15. ಹರ್ಷಲ್ ಗಿಬ್ಸ್ ದಕ್ಷಿಣ ಆಫ್ರಿಕಾ :  23 ಪಂದ್ಯ 1067 ರನ್‌
 16. ಅರವಿಂದ ಡಿ ಸಿಲ್ವಾ : ಶ್ರೀಲಂಕಾ :  32 ಪಂದ್ಯ  1064 ರನ್‌
 17. ವಿರಾಟ್ ಕೊಹ್ಲಿ:  ಭಾರತ :  26 ಪಂದ್ಯ 1030 ರನ್‌
 18.  ಡೇವಿಡ್ ವಾರ್ನರ್ : ಆಸ್ಟ್ರೇಲಿಯಾ : 19 ಪಂದ್ಯ 1016 ರನ್‌
 19.  ವಿವ್ ರಿಚರ್ಡ್ಸ್ : ವೆಸ್ಟ್ ಇಂಡೀಸ್ : 21 ಪಂದ್ಯ 1013 ರನ್‌
 20. ಸೌರವ್ ಗಂಗೂಲಿ : ಭಾರತ : 21 ಪಂದ್ಯ  1006 ರನ್‌
 21. ಮಾರ್ಕ್ ವಾ ಆಸ್ಟ್ರೇಲಿಯಾ : 22 ಪಂದ್ಯ 1004 ರನ್‌
 22.  ರಾಸ್ ಟೇಲರ್ ನ್ಯೂಜಿಲೆಂಡ್ : 30 ಪಂದ್ಯ 1002 ರನ್‌
 23. ರೋಹಿತ್ ಶರ್ಮಾ: ಭಾರತ : 17 ಪಂದ್ಯ  978 ರನ್‌ 

  IND VS AUS David Warner breaks Sachin Tendulkar record for fastest 1000 runs in ODI World Cup 2023

Comments are closed.