Jio Free Internet Call : ಜಿಯೋ ಗ್ರಾಹಕರಿಗೆ ಬಂಪರ್; 2 ದಿನ ಉಚಿತ ಕರೆ, ಇಂಟರ್‌ನೆಟ್, ಯಾರಿಗೆಲ್ಲ ಅನ್ವಯ?

ರಿಲಯನ್ಸ್ ಜಿಯೋ (Reliance Jio) ತನ್ನ ಬಳಕೆದಾರರಿಗೆ ಎರಡು ದಿನಗಳ ಕಾಲ ಅನಿಯಮಿತ ಉಚಿತ ಸೇವೆಗಳನ್ನು ನೀಡುವುದಾಗಿ ಘೋಷಿಸಿದೆ. ಅರೇ! ಮತ್ತೆ ಜಿಯೋ ಸಿಮ್‌ನವರು ಫ್ರೀ ಸರ್ವೀಸ್ (Jio Free Internet, Call) ಕೊಡ್ತಿದ್ದಾರಾ ಎಂದು ಮೂಗಿನ ಮೆಲೆ ಬೆರಳಿಟ್ಟುಕೊಂಡ್ರಾ? ಹೌದು, ಜಿಯೋ ನಿಜವಾಗಿಯೂ ಎರಡು ದಿನಗಲ ಕಾಲ ಉಚಿತ ಕರೆ ಮತ್ತು ಇಂಟರ್‌ನೆಟ್ ಸೇವೆಗಳನ್ನು ನೀಡುವುದಾಗಿ ಘೋಷಿಸಿದೆ. ಅದರೆ ಕೆಲವು ಷರತ್ತುಗಳು ಈ ಉಚಿತ ಸೇವೆಗೆ (Free Internet Service) ಅನ್ವಯವಾಗುತ್ತಿದ್ದು, ಅದೇನೆಂದರೆ ತಿಳಿಯಲು ಈ ಸ್ಟೋರಿಯನ್ನು ಸಂಪೂರ್ಣ ಓದಿ.

ಇತ್ತೀಚಿಗಷ್ಟೇ ರಿಲಾಯನ್ಸ್ ಜಿಯೋ ಸಿಗ್ನಲ್‌ನಲ್ಲಿ ಕೆಲವು ಕಾಲ ಅಡಚಣೆ ಉಂಟಾಗಿತ್ತು. ಈ ಅಡಚಣೆಯ ಬಗ್ಗೆ ಹಲವು ಜಿಯೋ ಬಳಕೆದಾರರು ದೂರು ನೀಡಿದ್ದರು. ಹೀಗಾಗಿ ತಬನ್ನ ಬಳಕೆದಾರರಿಗೆ ಉಂಟಾದ ಅಡಚಣೆಗೆ ಪ್ರತಿಯಾಗಿ ಜಿಯೋ ಈ ಕೊಡುಗೆ ಘೋಷಿಸಿದೆ.

ಕೆಲವು ರಿಲಯನ್ಸ್ ಜಿಯೋ ಬಳಕೆದಾರರು ಕಳೆದ ವಾರ ಮುಂಬೈ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದ ವಲಯಗಳಲ್ಲಿನ ಸೇವೆಗಳಲ್ಲಿ ಡೌನ್‌ಟೈಮ್‌ನಿಂದ ಕರೆ ಮಾಡುವಲ್ಲಿ ತೊಂದರೆ ಎದುರಿಸಬೇಕಾಯಿತು. ಕರೆಗಳನ್ನು ಪ್ರಾರಂಭಿಸುವಾಗ “ನೆಟ್‌ವರ್ಕ್‌ನಲ್ಲಿ ನೋಂದಾಯಿಸಲಾಗಿಲ್ಲ” ಎಂಬ ಸಂದೇಶವನ್ನು ಪಡೆಯುತ್ತಿದ್ದಾರೆ ಎಂದು ಬಳಕೆದಾರರು ದೂರಿದ್ದಾರೆ. ಅನಾನುಕೂಲತೆಯನ್ನು ಸರಿದೂಗಿಸಲು, ರಿಲಯನ್ಸ್ ಜಿಯೋ ಈಗ ಪ್ರಭಾವಿತ ಬಳಕೆದಾರರಿಗೆ ಎರಡು ದಿನಗಳ ಉಚಿತ ಕರೆ ಮತ್ತು ಡೇಟಾ ಸೇವೆಗಳನ್ನು ನೀಡುತ್ತಿದೆ.

ಈ ಉಚಿತ ಸೇವೆಯ ಮೂಲಕ ರಿಲಯನ್ಸ್ ಜಿಯೋ ನಿಮ್ಮ ಪ್ರಿಪೇಯ್ಡ್ ಯೋಜನೆಯ ಮಾನ್ಯತೆಯನ್ನು ವಿಸ್ತರಿಸುತ್ತಿದೆ. ಕಳೆದ ವಾರ ನೆಟ್‌ವರ್ಕ್ ಅಡಚಣೆಯಿಂದ ಸಮಸ್ಯೆಗೀಡಾದ ಗ್ರಾಹಕರ ಪೋಸ್ಟ್‌ಪೇಯ್ಡ್ ಬಿಲ್‌ಗೆ ಎರಡು ದಿನಗಳ ಕ್ರೆಡಿಟ್ ಅನ್ನು ಸೇರಿಸುತ್ತದೆ. ದಿ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ ನೆಟ್‌ವರ್ಕ್ ಅಡಚಣೆ ಉಂಟಾದ ಗ್ರಾಹಕರಿಗೆ ಜಿಯೋ ಸಂದೇಶವನ್ನು ಕಳುಹಿಸುತ್ತಿದೆ “ಸದ್ಭಾವನೆಯ ಸೂಚಕವಾಗಿ, ನಾವು 2-ದಿನದ ರೆಂಟಲ್ ಕ್ರೆಡಿಟ್ ಅನ್ನು ವಿಸ್ತರಿಸುತ್ತಿದ್ದೇವೆ ಅದು ನಿಮ್ಮ ಸಂಖ್ಯೆಗೆ ಸ್ವಯಂಚಾಲಿತವಾಗಿ ಅನ್ವಯಿಸುತ್ತದೆ. ಕಾಂಪ್ಲಿಮೆಂಟರಿ ರೆಂಟಲ್ ಕ್ರೆಡಿಟ್ ನಿಮ್ಮ ಮುಂದಿನ ಬಿಲ್‌ನಲ್ಲಿ ಕಾಣಿಸುತ್ತದೆ” ಎಂದು ಜಿಯೊ ತನ್ನ ಬಳಕೆದಾರರಿಗೆ ಮೆಸೆಜ್‌ನ್ನು ಸಹ ಕಳಿಸುತ್ತದೆಯಂತೆ.

ಇದನ್ನೂ ಓದಿ: World Radio Day 2022: ನಮ್ಮ ಮೊಬೈಲಲ್ಲೇ ರೇಡಿಯೋ ಕೇಳಬಹುದು! ವಿಶ್ವ ರೇಡಿಯೋ ದಿನದಂದು ವಿಶೇಷ ಮಾಹಿತಿ ತಿಳಿಯಿರಿ

(Jio Free Internet Call check if you are eligible or not)

Comments are closed.