Women Development Scheme: ಕಷ್ಟದಲ್ಲಿರುವ, ಹಣದ ಅಗತ್ಯವಿರುವ ಮಹಿಳೆಯರಿಂದ ಹಣ ಪಡೆಯಲು ಅರ್ಜಿ ಆಹ್ವಾನ

ಬೆಂಗಳೂರು: ಕರ್ನಾಟಕದ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು (KSWDC) ಮಹತ್ವದ ಯೋಜನೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. 2025-26ನೇ ಸಾಲಿನ ವಿವಿಧ ಆರ್ಥಿಕ ನೆರವು ಮತ್ತು ತರಬೇತಿ ಯೋಜನೆಗಳ ಲಾಭ ಪಡೆಯಲು ಅರ್ಹ ಫಲಾನುಭವಿಗಳು ಶೀಘ್ರವಾಗಿ ಅರ್ಜಿ ಸಲ್ಲಿಸುವಂತೆ ನಿಗಮವು ಕೋರಿದೆ.

​ಪ್ರಮುಖ ಯೋಜನೆಗಳು ಮತ್ತು ಸಹಾಯಧನ:

​ನಿಗಮವು ಮಹಿಳೆಯರಿಗೆ ಆರ್ಥಿಕ ಮತ್ತು ಶೈಕ್ಷಣಿಕ ನೆರವು ನೀಡಲು ಹಲವು ಯೋಜನೆಗಳನ್ನು ಜಾರಿಗೊಳಿಸಿದೆ:

  1. ಅರಿವು ಶೈಕ್ಷಣಿಕ ಸಾಲ ಯೋಜನೆ: ಎಸ್.ಎಸ್.ಎಲ್.ಸಿ ನಂತರದ ಕೋರ್ಸ್‌ಗಳಿಗೆ 18 ರಿಂದ 55 ವರ್ಷದೊಳಗಿನ ಮಹಿಳೆಯರಿಗೆ ರೂ. 50 ರಷ್ಟು ಸಹಾಯಧನ ಮತ್ತು ಗರಿಷ್ಠ ರೂ. 3.00 ಲಕ್ಷ ದವರೆಗೆ ಸಾಲ ಸೌಲಭ್ಯ.
  2. ಶ್ರಮಶಕ್ತಿ ಯೋಜನೆ: ವೈಯಕ್ತಿಕ/ಸಣ್ಣ ಉದ್ಯಮ ಪ್ರಾರಂಭಿಸಲು ರೂ. 150 ಲಕ್ಷ ವರೆಗೆ ಸಾಲ ಮತ್ತು ರೂ. 50,000 ವರೆಗೆ ಸಹಾಯಧನ.
  3. ಅಂಗವಿಕಲರ ಯೋಜನೆ: ಶೇ. 40 ಅಥವಾ ಅದಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವವರಿಗೆ ಜೀವನೋಪಾಯಕ್ಕಾಗಿ ರೂ. 30,000 ವರೆಗೆ ಧನಸಹಾಯ.
  4. ಸಂಜೀವಿನಿ ಯೋಜನೆ: ವಿಧವೆಯರು ಮತ್ತು ಸಂಕಷ್ಟದಲ್ಲಿರುವ ಮಹಿಳೆಯರಿಗೆ ರೂ. 30,000/- ವರೆಗೆ ಧನಸಹಾಯ.
  5. ದೇವದಾಸಿ ಮಹಿಳೆಯರ ಪುನರ್ವಸತಿ: 1993-94 & 2007-08ರ ಸರ್ಕಾರಿ ಆದೇಶದಡಿ ಗುರುತಿಸಲಾದ ದೇವದಾಸಿ ಮಹಿಳೆಯರ ಮಕ್ಕಳಿಗೆ ರೂ. 30,000 ವರೆಗೆ ಧನಸಹಾಯ.

ಇದನ್ನೂ ಓದಿ: ಸರ್ಕಾರದಿಂದ ಸಾಲದ ಬಡ್ಡಿ ಮರುಪಾವತಿ

​ಪ್ರಮುಖ ಸೂಚನೆ ಮತ್ತು ಗಡುವು

​ನಿಗಮದ ಯೋಜನೆಗಳು ವಿಶೇಷವಾಗಿ ಗ್ರಾಮೀಣ ಭಾಗದ ಮಹಿಳೆಯರು, ನಿಗರ್ತಿಕ ಮಹಿಳೆಯರು, ವಿಧವೆಯರು, ಸಂಕಷ್ಟದಲ್ಲಿರುವ ಮತ್ತು ಶೋಷಣೆಗೊಳಗಾದ ಮಹಿಳೆಯರಿಗೆ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಅವಕಾಶ ಒದಗಿಸುತ್ತವೆ. ನಿಗಮದ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುವ ಅರ್ಜಿದಾರರು ಅಗತ್ಯ ದಾಖಲೆಗಳಾದ ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಪುಸ್ತಕ ವಿವರಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 2025ರ ಡಿಸೆಂಬರ್ 15, ಸಂಜೆ 5:30.

​ಅರ್ಹ ಮಹಿಳೆಯರು ತಮ್ಮ ಅರ್ಜಿಗಳನ್ನು ನಿಗಮದ ಅಧಿಕೃತ ವೆಬ್‌ಸೈಟ್ https://kswdc.karnataka.gov.in ಮೂಲಕ ಮಾತ್ರ ಸಲ್ಲಿಸಬೇಕು. ಈ ಅವಕಾಶವನ್ನು ಸಕಾಲದಲ್ಲಿ ಬಳಸಿಕೊಳ್ಳುವಂತೆ ನಿಗಮವು ಕೋರಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories