ಮತ್ತೆ ಇಳಿಕೆ ಹಾದಿಯಲ್ಲಿ ಚಿನ್ನ : ಬೆಳ್ಳಿ ದರದಲ್ಲಿ ಕೊಂಚ ಏರಿಕೆ

ದಾಖಲೆಯ ಏರಿಕೆ ಕಾಣುತ್ತಿದ್ದ ಚಿನ್ನದ ದರದಲ್ಲಿ ಇಳಿಕೆ ಕಂಡುಬರುತ್ತಲೇ ಇದ್ದು ಚಿನ್ನಾಭರಣ ಪ್ರಿಯರ ಸಂತಸಕ್ಕೆ ಪಾರವೇ ಇಲ್ಲ ಎಂಬಂತಾಗಿದೆ. ಸತತ ಎರಡನೇ ದಿನವೂ ಚಿನ್ನದ ದರದಲ್ಲಿ ಅಲ್ಪ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದ್ದು ಚಿನ್ನಾಭರಣ ಪ್ರಿಯರು ನಿರಾಳರಾಗಿದ್ದಾರೆ. ಇತ್ತ ಬೆಳ್ಳಿಯ ದರದಲ್ಲಿ ಕೊಂಚ ಏರಿಕೆ ಕಂಡುಬಂದಿದೆ.

24 ಕ್ಯಾರೆಟ್​ ಚಿನ್ನದ ದರ 1 ಗ್ರಾಂಗೆ 120 ರೂಪಾಯಿ ಇಳಿಕೆಯಾಗಿದ್ದು ಸದ್ಯ ಈ ದರ 15,840 ರೂಪಾಯಿ ಆಗಿದೆ. ಇನ್ನು ಅಂತೆಯೇ 10 ಗ್ರಾಂ 24 ಕ್ಯಾರಟ್​ ಚಿನ್ನದ ದರದಲ್ಲಿ 1200 ರೂಪಾಯಿ ಇಳಿಕೆ ಕಂಡಿದ್ದು 10 ಗ್ರಾಂ ಬೆಲೆ 1,58,400 ರೂಪಾಯಿ ಆಗಿದೆ.

ಅಂತೆಯೇ 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆಯಲ್ಲಿ 110 ರೂ ಕಡಿತವಾಗಿ 14,520 ರೂಪಾಯಿ ದಾಖಲಾಗಿದೆ. 10 ಗ್ರಾಂ ಬಂಗಾರದ ಬೆಲೆಯಲ್ಲಿ 1010 ರೂ ಇಳಿಕೆಯಾಗಿದ್ದು, 1,45,200 ರೂಪಾಯಿ ಆಗಿದೆ.

ಇದನ್ನೂ ಓದಿ: ಚಿನ್ನ ಅಸಲಿಯೇ ಅಥವಾ ನಕಲಿಯೇ? ಪತ್ತೆಹಚ್ಚಲು 10 ಸುಲಭ ದಾರಿಗಳು!

ಬೆಳ್ಳಿ ಬೆಲೆಯಲ್ಲಿ ಕೊಂಚ ಎಂದರೆ 1 ಗ್ರಾಂಗೆ ಕೇವಲ 5 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ 1 ಕೆಜಿ ಬೆಳ್ಳಿ ದರದಲ್ಲಿ 5 ಸಾವಿರ ರೂಪಾಯಿ ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ ಚಿನ್ನದ ದರ ಕೆಜಿಗೆ 2,95,000 ರೂಪಾಯಿ ಇದೆ,.

ಮುಂದಿನ ದಿನಗಳಲ್ಲಿ ಚಿನ್ನದ ದರದಲ್ಲಿಯೂ ಏರಿಕೆ ಕಾಣುವ ಲಕ್ಷಣಗಳಿವೆ. ಹೀಗಾಗಿ ಆಭರಣ ಪ್ರಿಯರು ಈಗಲೇ ಚಿನ್ನ ಖರೀದಿ ಮಾಡುವುದು ಉತ್ತಮ ಎಂದು ಚಿನ್ನದ ಅಂಗಡಿಗಳತ್ತ ಮುಖಮಾಡುತ್ತಿದ್ದಾರೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories