ಶಿಯೋಮಿ ಪರಿಚಯಿಸುತ್ತಿದೆ ಕಡಿಮೆ ಬೆಲೆಯ 108 ಮೆಗಾಫಿಕ್ಸೆಲ್ ಕ್ಯಾಮೆರಾ ಸ್ಮಾರ್ಟ್​ಫೋನ್​

0

ಮಾರುಕಟ್ಟೆಗೆ ಹೊಸ ಹೊಸ ವಿನ್ಯಾಸದ ಸ್ಮಾರ್ಟ್ ಪೋನ್ ಗಳು ಲಗ್ಗೆ ಯಿಡುತ್ತಿವೆ. ಅದ್ರಲ್ಲೂ ಸ್ಮಾರ್ಟ್ ಪೋನ್ ಕಂಪೆನಿಗಳು ಹೆಚ್ಚಾಗಿ ಕ್ಯಾಮೆರಾ ಮೇಲೆ ಹೆಚ್ಚು ನಿಗಾ ಇಡುತ್ತಿವೆ. ಇಷ್ಟು ದಿನ 64 ಮೆಗಾ ಫಿಕ್ಸಲ್ ಹೊಂದಿರುವ ಸ್ಮಾರ್ಟ್ ಪೋನ್ ಸಿಗ್ತಾ ಇತ್ತು.

ಆದ್ರೀಗ ಶಿಯೋಮಿ ಕಂಪೆನಿ ಕಡಿಮೆ ದರದಲ್ಲಿ 108 ಮೆಗಾಫಿಕ್ಸಲ್ ಕ್ಯಾಮೆರಾ ಇರುವ ಸ್ಮಾರ್ಟ್ ಪೋನ್ ಪರಿಚಯಿಸಲು ಮುಂದಾಗಿದೆ.
ದೇಶದಲ್ಲಿ ಅತೀ ಹೆಚ್ಚು ಮಾರಾಟವಾಗುವ ಸ್ಮಾರ್ಟ್ ಪೋನ್ ಬ್ರ್ಯಾಂಡ್ ಗಳಲ್ಲಿ ಒಂದಾಗಿರುವ ಶಿಯೋಮಿ ಈಗಾಗಲೇ ಹಲವು ವಿನ್ಯಾಸ ಹಾಗೂ ವಿಶೇಷತೆಗಳನ್ನು ಒಳಗೊಂಡಿರುವ ಸ್ಮಾರ್ಟ್ ಪೋನ್ ಗಳನ್ನು ಈಗಾಗಲೇ ಮಾರುಕಟ್ಟೆಗೆ ಪರಿಚಯಿಸಿದೆ.

ಇದೀಗ ಗ್ರಾಹಕರನ್ನು ಸೆಳೆಯುವ ದೃಷ್ಠಿಯಲ್ಲಿ ಮತ್ತು ಮಾರುಕಟ್ಟೆಯನ್ನು ಅಭಿವೃದ್ಧಿಗೊಳಿಸುವ ದೃಷ್ಠಿಯಲ್ಲಿ ಶಿಯೋಮಿ 108 ಮೆಗಾಫಿಕ್ಸೆಲ್ ಕ್ಯಾಮೆರಾ ಹೊಂದಿರುವ ಸ್ಮಾರ್ಟ್​ಫೋನನ್ನು ಉತ್ಪಾದಿಸಿ ಅದನ್ನು ಕಡಿಮೆ ಬೆಲೆಗೆ ಗ್ರಾಹಕರ ಕೈ ಸೇರುವಂತೆ ಚಿಂತಿಸಿದೆ.

ಗೌಗಿನ್​ ಪ್ರೊ ಸ್ಮಾರ್ಟ್​ಫೋನ್​ನಲ್ಲಿ 108 ಮೆಗಾಫಿಕ್ಸ್ ಸೆನ್ಸಾರ್ ನೀಡುತ್ತಿದೆಯಂತೆ. ಗೌಗಿನ್​ನಲ್ಲಿ 64 ಮೆಗಾಫಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸುವುದರ ಮೂಲಕ ಹೊರತರಲಿದೆ ಎಂದಿದೆ.

ಗೌಗಿನ್​ ಪ್ರೊ ಸ್ಮಾರ್ಟ್​ಫೋನ್​ನಲ್ಲಿ 108 ಮೆಗಾಫಿಕ್ಸ್ ಸೆನ್ಸಾರ್ ನೀಡುತ್ತಿದೆಯಂತೆ. ಗೌಗಿನ್​ನಲ್ಲಿ 64 ಮೆಗಾಫಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸುವುದರ ಮೂಲಕ ಹೊರತರಲಿದೆ ಎಂದಿದೆ.

ಶಿಯೋಮಿ ಕಂಪೆನಿ ರೆಡ್ ಮಿ ಸಬ್ ಬ್ರ್ಯಾಂಡ್ ಅಡಿಯಲ್ಲಿ ಗೌಗಿನ್​ ಪ್ರೊ ಸ್ಮಾರ್ಟ್​ಫೋನ್​ನಲ್ಲಿ 108 ಮೆಗಾಫಿಕ್ಸ್ ಸೆನ್ಸಾರ್ ನೀಡುತ್ತಿದೆಯಂತೆ. ಗೌಗಿನ್​ನಲ್ಲಿ 64 ಮೆಗಾಫಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಿ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ.

ಈಗಾಗಲೇ ಎಂಐ 10 ಸ್ಮಾರ್ಟ್​ಫೋನ್​ 108 ಮೆಗಾಫಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸುವ ಮೂಲಕ ಮಾರುಕಟ್ಟೆಗೆ ಪರಿಚಯಿಸಿದ್ದು, 49,999 ರೂ. ಗೆ ಸ್ಮಾರ್ಟ್ ಪೋನ್ ಮಾರಾಟವಾಗುತ್ತಿದೆ.

ಇತ್ತೀಚಿನ ದಿನಗಳ ಸ್ಮಾರ್ಟ್ ಪೋನ್ ಗಳಲ್ಲಿ ಕ್ಯಾಮೆರಾ ಹೆಚ್ಚು ಟ್ರೆಂಡ್ ಆಗ್ತಾ ಇರೋದ್ರಿಂದಾಗಿ ಸ್ಯಾಮ್​ಸಂಗ್ ಕೂಡ ಎಸ್20 ಅಲ್ಟ್ರಾ ಮತ್ತು ನೋಟ್ 20 ಅಲ್ಟ್ರಾ ಸ್ಮಾರ್ಟ್​ಫೋನಿನಲ್ಲಿ 108 ಮೆಗಾಫಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಿಕೊಂಡಿದೆ.

ಅಷ್ಟೇ ಅಲ್ಲಾ ಮೊಟರೊಲಾ ಕಂಪೆನಿಗೂ ತನ್ನ ಎಡ್ಜ್+ ಸ್ಮಾರ್ಟ್​ಫೋನಿನಲ್ಲೂ 108 ಮೆಗಾಫಿಕ್ಸೆಲ್ ಸೆನ್ಸಾರ್ ನೀಡಲಾಗಿದೆ.

Leave A Reply

Your email address will not be published.