2 ವರ್ಷ ಕಟ್ಟಬೇಕಿಲ್ಲ ಸಾಲದ ಇಎಂಐ ! ಈ ಸೌಲಭ್ಯ ಪಡೆಯೋಕೆ ಏನ್ ಮಾಡ್ಬೇಕು ಗೊತ್ತಾ ?

0

ನವದೆಹಲಿ: ಕರೊನಾ ಬಿಕ್ಕಟ್ಟು ಹಾಗೂ ಅದರ ನಂತರ ಉಂಟಾದ ಲಾಕ್ಡೌನ್ ಹಿನ್ನೆಲೆಯಲ್ಲಿ ಅವೆಷ್ಟೋ ವ್ಯವಹಾರಗಳು ನಿಂತು ಹೋಗಿವೆ. ಇದೇ ಕಾರಣಕ್ಕೆ ಬ್ಯಾಂಕ್ ಗಳಿಂದ ತೆಗೆದುಕೊಂಡಿರುವ ವಿವಿಧ ಸಾಲಗಳ ಇಎಂಐ ಕಟ್ಟಲಾಗದೇ ತೊಂದರೆ ಅನುಭವಿಸು ತ್ತಿದ್ದಾರೆ. ಈ ಹಿನ್ನೆಲೆಯಲ್ಲೀಗ ಬ್ಯಾಂಕುಗಳು ಸಾಲಗಾರರಿಗೆ ರಿಲೀಫ್ ನೀಡುತ್ತಿದ್ದು, ಇನ್ಮುಂದೆ 2 ವರ್ಷಗಳ ವರೆಗೆ ಸಾಲದ ಇಎಂಐ ಪಾವತಿ ಮಾಡದೆ ಇರಬಹುದು !

ಹೌದು, ಕೇಂದ್ರ ಸರಕಾರ ಇತ್ತೀಚಿಗಷ್ಟೇ ಸಾಲದ ಇಎಂಐ ಪಾವತಿ ಅವಧಿಯನ್ನು 2 ವರ್ಷಗಳ ವರೆಗೆ ಮುಂದೂಡಿಕೆ ಮಾಡಬಹುದು ಎಂದು ಹೇಳಿದ ಬೆನ್ನಲ್ಲೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಸೌಲಭ್ಯವನ್ನು ತನ್ನ ಗ್ರಾಹಕರಿಗೆ ಘೋಷಣೆಯನ್ನು ಮಾಡಿದೆ. ಗೃಹ, ಶಿಕ್ಷಣ, ವಾಹನ ಅಥವಾ ವೈಯಕ್ತಿಕ ಸಾಲಗಳು ಮರು ಪಾವತಿಯನ್ನು ಎರಡು ವರ್ಷಗಳವರೆಗೂ ವಿನಾಯಿತಿಯನ್ನು ಪಡೆಯಬಹುದು. ಆದರೆ ಈ ಯೋಜನೆಯ ಅನುಕೂಲತೆಯನ್ನು ಪಡೆಯಬೇಕಾದ್ರೆ ಹಲವು ಮಾನದಂಡಗಳನ್ನು ಅನುರಿಸಲೇ ಬೇಕು.

ಇದಾಗಲೇ ಹೇಳಿರುವಂತೆ ಇಐಎಂ ಎರಡು ವರ್ಷ ಮುಂದೂಡಿದ ಮಾತ್ರಕ್ಕೆ ಗ್ರಾಹಕರು ತುಂಬಬೇಕಿರುವ ಸಾಲದ ಮೊತ್ತದಲ್ಲಿ ಕಡಿಮೆ ಯಾಗುವುದಿಲ್ಲ. ಒಂದೊಮ್ಮೆ ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳುವ ಗ್ರಾಹಕರು ಎರಡು ವರ್ಷಗಳವರೆಗೆ ಕಂತನ್ನು ತುಂಬಬೇಕಿಲ್ಲ ಎನ್ನುವುದು ನಿಜವಾದರೂ, ಈ ಅವಧಿ ಮುಗಿದ ಮೇಲೆ ಶೇ. 0.35 ರಷ್ಟು ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

ಯೋಜನೆಯ ಲಾಭ ಯಾರಿಗೆ ಸಿಗುತ್ತೆ ಗೊತ್ತಾ ?

ಈ ಯೋಜನೆಗೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಸಾಲಗಾರರದ್ದು ‘ಪ್ರಮಾಣಿತ ಖಾತೆ ( ‘standard account’) ಆಗಿರಬೇಕು. ಯೋಜನೆಯ ಅವಧಿಯುವ 24 ತಿಂಗಳ ಅವಧಿಯು ಗರಿಷ್ಠ ಅವಧಿಯಾಗಿದ್ದು, ಆದ್ದರಿಂದ ಆ ನಂತರ ಹೆಚ್ಚುವರಿ ಬಡ್ಡಿ ಕಟ್ಟಲು ಇಷ್ಟವಿಲ್ಲದ ಸಾಲಗಾರರು 1 ರಿಂದ 24 ತಿಂಗಳ ಮೊರಟೋರಿಯಂ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಕರೊನಾ, ಲಾಕ್ಡೌನ್ ಸಮಯದಲ್ಲಿ ವೇತನ ಅಥವಾ ಆದಾಯವು ಕರೊನಾ ಅವಧಿಯಲ್ಲಿ ಪಡೆಯುತ್ತಿರುವ ವೇತನಕ್ಕಿಂತ ಕಡಿಮೆಯಾಗಿ ರಬೇಕು. ಅಂದರೆ 2020ರ ಫೆಬ್ರವರಿಗೆ ಹೋಲಿಸಿದರೆ 2020ರ ಆಗಸ್ಟ್ನ ವೇತನ ಅಥವಾ ಆದಾಯ ಕಡಿಮೆಯಾಗಿರಬೇಕು. ಸ್ವಯಂ ಉದ್ಯೋಗಿಗಳು, ವೃತ್ತಿಪರರು/ಉದ್ಯಮಿಗಳು ಸಾಲ ಪಡೆದಿದ್ದರೆ, ಅವರ ಉದ್ಯಮ/ಘಟಕ/ ಅಂಗಡಿ/ ವ್ಯಾಪಾರ ಚಟುವಟಿಕೆ ಕರೊನಾ ಸಮಯದಲ್ಲಿ ಬಂದ್ ಆಗಿ ನಷ್ಟ ಅನುಭವಿಸಿರಬೇಕು ಇಲ್ಲವೇ ಶಾಶ್ವತವಾಗಿ ಅದನ್ನು ಬಂದ್ ಮಾಡಿರಬೇಕು.

ಲಾಕ್ ಡೌನ್ ಅವಧಿಯಲ್ಲಿ ಉದ್ಯೋಗ ಕಳೆದುಕೊಂಡಿರಬೇಕು ಇಲ್ಲವೇ ಉದ್ಯೋಗ/ವ್ಯಾಪಾರ ನಷ್ಟವಾಗಿ ಅದನ್ನು ಬಂದ್ ಮಾಡಿರಬೇಕು. 2020ರ ಮಾರ್ಚ್ 1ಕ್ಕಿಂತ ಮೊದಲು ಸಾಲ ಪಡೆದ ಹಾಗೂ ಕೋವಿಡ್-19 ಲಾಕ್ಡೌನ್ವರೆಗೆ ಸಾಲ ಮರುಪಾವತಿ ಕಂತನ್ನು ನಿಗದಿತ ಅವಧಿಯಲ್ಲಿ ಕಟ್ಟುತ್ತಾ ಬಂದಿರಬೇಕು. ಇಷ್ಟೆಲ್ಲಾ ಅರ್ಹತೆ ನಿಮ್ಮಲ್ಲಿದ್ದರೆ ಮಾತ್ರ ಈ ಯೋಜನೆಯ ಲಾಭ ಪಡೆಯಬಹುದಾಗಿದೆ.

ಅರ್ಜಿ ಸಲ್ಲಿಸುವ ಮೊದಲು ನಿಮ್ಮಲ್ಲಿ ಈ ದಾಖಲೆ ಇರಲೇಬೇಕು

2 ವರ್ಷಗಳ ಕಾಲ ಸಾಲದ ಇಎಂಐ ಪಾವತಿಗೆ ವಿನಾಯಿತಿಯನ್ನು ಪಡೆಯಬೇಕಾದ್ರೆ ನೀವು ಕೆಲವೊಂದು ದಾಖಲೆಗಳನ್ನು ಹೊಂದಿರಲೇ ಬೇಕು. 2020ರ ಫೆಬ್ರವರಿ ತಿಂಗಳ ಮತ್ತು ಕೊನೆಯ/ ಅರ್ಜಿ ಸಲ್ಲಿಸುವ ತಿಂಗಳ ವೇತನ ಸ್ಲಿಪ್. ಕೆಲಸದಿಂದ ವಜಾಗೊಂಡಿದ್ದರೆ, ಬಿಡುಗಡೆ ಪತ್ರ. ಫೆಬ್ರುವರಿ ತಿಂಗಳಿನಿಂದ ನೀವು ಈ ಅರ್ಜಿ ಸಲ್ಲಿಸುವ 15 ದಿನಗಳ ಮುಂಚೆ ಮಾಡಿರುವ ಅಕೌಂಟ್ ಸ್ಟೇಟ್ಮೆಂಟ್ಗಳು ಹಾಗೂ ತಮ್ಮ ವ್ಯಾಪಾರದ ಮೇಲೆ ಕರೊನಾ, ಲಾಕ್ಡೌನ್ ಪರಿಣಾಮ ಬೀರಿದೆ ಎಂದು ಹೇಳುವ ಡಿಕ್ಲರೇಷನ್ ಪತ್ರವನ್ನು ಹೊಂದಿರಬೇಕು.

ಯೋಜನೆಯ ಲಾಭ ಪಡೆಯೋಕೆ ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ ?

ಈ ಯೋಜನೆಯ ಲಾಭವನ್ನು ಪಡೆಯಲು ನೀವು ಅರ್ಹರಾಗಿದ್ದರೆ, ನೀವು ಎಸ್ ಬಿಐನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಸ ಬಹುದು. ಇಲ್ಲವಾದ್ರೆ ನೇರವಾಗಿನಿಮ್ಮ ಬ್ಯಾಂಕ್ ಖಾತೆಯನ್ನು ಹೊಂದಿರುವ ಬ್ಯಾಂಕ್ ಶಾಖೆಗೆ ಭೇಟಿಯನ್ನು ಕೊಟ್ಟು ಅರ್ಜಿ ಸಲ್ಲಿಸಬಹು ದಾಗಿದೆ. ಇನ್ನು ವೆಬ್ಸೈಟ್ ಓಪನ್ ಮಾಡಿದ ಸಂದರ್ಭದಲ್ಲಿ ನಿಮ್ಮ ವೈಯಕ್ತಿಕ ಕೆಲವೊಂದು ವಿವರಗಳನ್ನು ಕೇಳಲಾಗುತ್ತದೆ (ಖಾತೆ ಸಂಖ್ಯೆಗಳು ಮತ್ತು ಮೊಬೈಲ್ ಸಂಖ್ಯೆ ಇತ್ಯಾದಿ) ನಂತರ, ಒಟಿಪಿ ಮೂಲಕ ಅರ್ಜಿಯನ್ನು ಮಾನ್ಯ ಮಾಡಲಾಗುತ್ತದೆ.

ಅಲ್ಲಿ ಕೆಲವೊಂದು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಆಗ ನೀವು ಈ ಯೋಜನೆಗೆ ಅರ್ಹರೇ ಎಂಬುದನ್ನು ತಿಳಿಯಲು ಒಂದು ಉಲ್ಲೇಖ ಸಂಖ್ಯೆ (reference number) ನೀಡಲಾಗುತ್ತದೆ. ಈ ಸಂಖ್ಯೆ 30 ದಿನಗಳ ಕಾಲ ಮಾನ್ಯವಾಗಿರುತ್ತದೆ. ಉಳಿದ ವಿಷಯಗಳು ಅಲ್ಲಿಯೇ ಉಲ್ಲೇಖಗೊಂಡಿವೆ.

Leave A Reply

Your email address will not be published.