LPG Cylinder price hike : ಸಿಲಿಂಡರ್ ಬೆಲೆ 50 ರೂ ಹೆಚ್ಚಳ: ಪರಿಷ್ಕೃತ ದರ ಪರಿಶೀಲಿಸಿ

ನವದೆಹಲಿ : (LPG Cylinder price hike) ಎಲ್‌ಪಿಜಿ ಸಿಲಿಂಡ್‌ ಬಳಕೆದಾರರಿಗೆ ಶಾಕಿಂಗ್‌ ಸುದ್ದಿ ಹೊರಬಿದ್ದಿದೆ. ಇಂದಿನಿಂದ ಜಾರಿಗೆ ಬರುವಂತೆ ಸಿಲಿಂಡರ್‌ ಬೆಲೆಯಲ್ಲಿ ಹೆಚ್ಚಳ ಮಾಡಲಾಗಿದೆ. 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ರೂ.50 ಹೆಚ್ಚಳ ಮಾಡಿದ್ದು, ಇಂದಿನಿಂದ ಜಾರಿಗೆ ಬರಲಿದೆ. ಇತ್ತೀಚಿನ ಪರಿಷ್ಕರಣೆಯೊಂದಿಗೆ, ದೆಹಲಿಯಲ್ಲಿ ಇಂದಿನಿಂದ ದೇಶೀಯ ಸಿಲಿಂಡರ್ ಪ್ರತಿ ಸಿಲಿಂಡರ್‌ಗೆ ರೂ.1103 ಆಗಲಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

ಜೊತೆಗೆ 19 ಕೆಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ರೂ. 350.50 ಇದರೊಂದಿಗೆ 19 ಕೆಜಿ ವಾಣಿಜ್ಯ ಸಿಲಿಂಡರ್ ಗೆ ರೂ. 2119.50. ಆಗಿದ್ದು, ದೆಹಲಿಯಲ್ಲಿ ಈ ಹೊಸ ದರಗಳು ಇಂದಿನಿಂದ ಜಾರಿಗೆ ಬರಲಿವೆ. ಸ್ಥಳೀಯ ತೆರಿಗೆಗಳಿಂದಾಗಿ ದೇಶೀಯ ಅಡುಗೆ ಅನಿಲದ ಬೆಲೆಗಳು ಒಂದು ರಾಜ್ಯದಿಂದ ಇನ್ನೊಂದಕ್ಕೆ ಬದಲಾಗುತ್ತವೆ. ಇಂಧನ ಚಿಲ್ಲರೆ ವ್ಯಾಪಾರಿಗಳು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ತಿಂಗಳ ಆರಂಭದಲ್ಲಿ ಪರಿಷ್ಕರಿಸುತ್ತಾರೆ. ಆದರೆ ಫೆಬ್ರವರಿಯಲ್ಲಿ ಸಿಲಿಂಡರ್‌ ಬೆಲೆಯಲ್ಲಿ ಏರಿಕೆ ಆಗಿರಲಿಲ್ಲ. ಈ ಬಾರಿ ಬೆಲೆ ಏರಿಕೆಯಾಗಿದ್ದು, ಸಿಲಿಂಡರ್‌ ಬಳಕೆದಾರರಿಗೆ ಇದು ಶಾಕಿಂಗ್‌ ಸುದ್ದಿಯಾಗಿದೆ.

ನಿಮ್ಮ ನಗರದಲ್ಲಿ ಇತ್ತೀಚಿನ LPG ಸಿಲಿಂಡರ್ ದರ(LPG Cylinder price hike)ಗಳನ್ನು ಇಲ್ಲಿ ಪರಿಶೀಲಿಸಿ :
ನವದೆಹಲಿಯಲ್ಲಿ ರೂ. 1,103.00, ಕೋಲ್ಕತ್ತಾದಲ್ಲಿ ರೂ. 1,079.00, ಮುಂಬೈಯಲ್ಲಿ ರೂ. 1,052.50, ಚೆನ್ನೈ ನಲ್ಲಿ ರೂ. 1,068.50, ಗುರಗಾಂವ್ ನಲ್ಲಿ ರೂ. 1,061.50, ನೋಯ್ಡಾದಲ್ಲಿ ರೂ. 1,050.50, ಬೆಂಗಳೂರಿನಲ್ಲಿ ರೂ. 1,055.50, ಭುವನೇಶ್ವರದಲ್ಲಿ ರೂ. 1,079.00, ಚಂಡೀಗಢದಲ್ಲಿ ರೂ. 1,112.50, ಹೈದರಾಬಾದ್ನಲ್ಲಿ ರೂ. 1,105.00, ಜೈಪುರದಲ್ಲಿ ರೂ. 1,056.50, ಲಕ್ನೋದಲ್ಲಿ ರೂ. 1,090.50, ಪಾಟ್ನಾದಲ್ಲಿ ರೂ. 1,201.00, ತಿರುವನಂತಪುರದಲ್ಲಿ ರೂ. 1,062.00

ಈ ವರ್ಷದಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಇದು ಎರಡನೇ ಏರಿಕೆ(LPG Cylinder price hike)ಯಾಗಿದೆ. ಇದಕ್ಕೂ ಮುನ್ನ ಜನವರಿ 1 ರಂದು ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಪ್ರತಿ ಯೂನಿಟ್‌ಗೆ 25 ರೂ ಏರಿಕೆ ಮಾಡಲಾಗಿತ್ತು. ಈ ಬಾರಿ ಪ್ರತಿ ಯುನಿಟ್‌ ಗೆ 50 ರೂ ಹೆಚ್ಚಳ ಮಾಡಲಾಗಿದೆ. ಈ ಪರಿಷ್ಕೃತ ದರಗಳು ದೇಶದಲ್ಲಿ ಇಂದಿನಿಂದಲೇ ಜಾರಿಯಾಗಲಿವೆ.

ಇದನ್ನೂ ಓದಿ : ಎಚ್‌ಡಿಎಫ್‌ಸಿ ಬ್ಯಾಂಕ್‌ ಗ್ರಾಹಕರ ಗಮನಕ್ಕೆ : ಮೊಬೈಲ್‌ ಅಪ್ಲಿಕೇಶನ್‌, ನೆಟ್‌ ಬ್ಯಾಂಕಿಂಗ್‌ ಮಧ್ಯಂತರ ಸ್ಥಗಿತ

ಇದನ್ನೂ ಓದಿ : ಮಧ್ಯಂತರ ವರದಿ ಬಂದ ಕೂಡಲೇ ಸರಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿ : ಸಿಎಂ ಬಸವರಾಜ ಬೊಮ್ಮಾಯಿ

ಇದನ್ನೂ ಓದಿ : LPG ಸಿಲಿಂಡರ್ ಬೆಲೆ, ಬ್ಯಾಂಕ್ ಸಾಲ, ರೈಲು ವೇಳಾಪಟ್ಟಿ : ಮಾರ್ಚ್ 1 ರಿಂದ ಪ್ರಮುಖ ನಿಯಮಗಳಲ್ಲಿ ಬದಲಾವಣೆ

LPG Cylinder price hike: Cylinder price hike by Rs 50: Check the revised price

Comments are closed.