LPG Price Updates : ಎಲ್‌ಪಿಜಿ ಬಳಕೆದಾರರಿಗೆ ಸಿಹಿಸುದ್ದಿ : ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಭಾರೀ ಇಳಿಕೆ ಸಾಧ್ಯತೆ

ನವದೆಹಲಿ : ದೇಶದ ಎಲ್ಲೆಡೆ ಹೊಸವರ್ಷದ ಆಚರಣೆ ದಿನಗಣನೆ ಶುರುವಾಗಿದೆ. ಹಾಗಾಗಿ ದುಬಾರಿ ಬೆಲೆಯ ಎಲ್‌ಪಿಜಿ ಸಿಲಿಂಡರ್‌ಗಳಿಂದ ಸಂಕಷ್ಟ ಎದುರಿಸುತ್ತಿರುವ ಜನರಿಗೆ ಹೊಸ ವರ್ಷದಲ್ಲಿ ಸಿಹಿ ಸುದ್ದಿ (LPG Price Updates) ಸಿಗಲಿದೆ. ಈ ವರ್ಷದ ಜುಲೈನಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಶೇಕಡಾ 30 ರಷ್ಟು ಕಡಿಮೆಯಾಗಿದ್ದು, ಅಂದಿನಿಂದ ಭಾರತದಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ 1056 ರೂ. ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಎಲ್‌ಪಿಜಿ ಬೆಲೆಯಲ್ಲಿ ಸರಕಾರವು ದೊಡ್ಡ ರಿಯಾಯಿತಿಯನ್ನು ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ. ಹಾಗಾಗಿ ಹೊಸ ವರ್ಷದ ಆರಂಭದಲ್ಲಿ ಈ ಸುದ್ದಿ ಜನರಿಗೆ ತುಂಬಾ ನಿರಾಳವಾಗಲಿದೆ ಎನ್ನಬಹುದಾಗಿದೆ.

ಭಾರತದಲ್ಲಿ ಅದರ ಅಗತ್ಯಕ್ಕೆ ಅನುಗುಣವಾಗಿ ಬೇಕಾದಷ್ಟು ಕಚ್ಚಾತೈಲ, ತೈಲ ಹಾಗೂ ಅನಿಲ ಉತ್ಪಾದನೆ ಆಗುತ್ತಿಲ್ಲ. ಆದರಿಂದ ಇಂತಹ ಪರಿಸ್ಥಿತಿಯಲ್ಲಿ ಪೂರೈಕೆಗಾಗಿ ಹೊರ ದೇಶಗಳನ್ನು ಅವಲಂಬಿಸಬೇಕಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿನ ಏರಿಳಿತದಿಂದಾಗಿ, ಭಾರತದಲ್ಲಿ ತೈಲ ಮತ್ತು ಅನಿಲದ ಬೆಲೆಗಳಲ್ಲಿ ಏರಿಳಿತವಾಗುತ್ತಿದೆ.

ತೈಲ ಮತ್ತು ಅನಿಲದ ಬೆಲೆಯನ್ನು ನಿಗದಿಪಡಿಸುವ ಹಕ್ಕನ್ನು ಸರಕಾರವು ಸರಕಾರಿ ಕಂಪನಿಗಳಿಗೆ (ಆಯಿಲ್ ಮಾರ್ಕೆಟಿಂಗ್ ಕಂಪನಿಗಳು) ನೀಡಿದೆ. ಈ ಕಂಪನಿಗಳು ಜುಲೈ 6, 2022 ರಿಂದ ಎಲ್‌ಪಿಜಿ ಬೆಲೆಗಳಲ್ಲಿ ಯಾವುದೇ ಬದಲಾವಣೆಯನ್ನು ಮಾಡಿರುವುದಿಲ್ಲ. ಇದುವರೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಅನಿಲದ ಬೆಲೆಗಳು ಶೇಕಡಾ 30 ರಷ್ಟು ಕುಸಿದಿದೆ. ಅಂದರೆ ಕಂಪನಿಗಳು ತೈಲ ಮತ್ತು ಅನಿಲವನ್ನು ಅತ್ಯಂತ ಅಗ್ಗವಾಗಿ ಖರೀದಿಸಿ ಜನರಿಗೆ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದೆ.

ಅಕ್ಟೋಬರ್ 2022 ರಲ್ಲಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 85 ಡಾಲರ್‌ ಆಗಿತ್ತು. ಆ ಸಮಯದಲ್ಲಿ ಎಲ್‌ಪಿಜಿ ಸಿಲಿಂಡರ್ ರೂ.899 ಕ್ಕೆ ದೇಶದಲ್ಲಿ ಸಿಗುತ್ತಿತ್ತು. ಅಂದಿನಿಂದ ಇಲ್ಲಿಯವರೆಗೆ ಸರಕಾರ ಈ ಬೆಲೆಯನ್ನು ಸುಮಾರು 150 ರೂಪಾಯಿಗಳಷ್ಟು ಹೆಚ್ಚಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಈಗ ಪ್ರತಿ ಬ್ಯಾರೆಲ್‌ಗೆ 83 ಡಾಲರ್‌ಗೆ ಇಳಿದಿದೆ. ಅಂದರೆ, ಅಕ್ಟೋಬರ್ 2021 ರಿಂದಲೂ ತೈಲ ಬೆಲೆ ಕಡಿಮೆಯಾಗಿದೆ. ಹಾಗಾಗಿ ಹೊಸ ವರ್ಷದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಮೇಲೆ 150 ರೂ.ವರೆಗೆ ಕಡಿತವನ್ನು ಸರಕಾರ ಘೋಷಿಸುವ ಸಾಧ್ಯತೆಯಿದೆ.

ಮುಂದಿನ ವರ್ಷ ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಗೆಹ್ಲೋಟ್ ಸರಕಾರ ದೊಡ್ಡ ಪಣತೊಟ್ಟಿದೆ. ಏಪ್ರಿಲ್ 1, 2023 ರಿಂದ ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳು ರಾಜಸ್ಥಾನದ ಜನರಿಗೆ ರೂ.500 (ಎಲ್‌ಪಿಜಿ ಬೆಲೆ) ಗೆ ಲಭ್ಯವಾಗಲಿವೆ ಎಂದು ಸಿಎಂ ಅಶೋಕ್ ಗೆಹ್ಲೋಟ್ ಘೋಷಿಸಿದ್ದಾರೆ. ಜೈಪುರದಲ್ಲಿ ಪ್ರಸ್ತುತ ಎಲ್‌ಪಿಜಿ ಸಿಲಿಂಡರ್ ಬೆಲೆ 1056 ರೂ. ಹಾಗಾಗಿ ಗೆಹ್ಲೋಟ್ ಸರಕಾರವು ಮುಂದಿನ ವರ್ಷಎಲ್‌ಪಿಜಿ ಸಿಲೆಂಡರ್‌ಗಳನ್ನು ಅರ್ಧಕ್ಕಿಂತ ಕಡಿಮೆ ಬೆಲೆಗೆ ಜನರಿಗೆ ಲಭ್ಯವಾಗುವಂತೆ ಮಾಡಲು ಸಜ್ಜಾಗಿದೆ.

ಇದನ್ನೂ ಓದಿ : Metro AG – Reliance Retail Ventures : 2,850 ಕೋಟಿ ರೂ.ಗೆ ಮೆಟ್ರೋ ಎಜಿಯನ್ನು ಸ್ವಾಧೀನಪಡಿಸಿಕೊಂಡ ರಿಲಯನ್ಸ್ ರಿಟೇಲ್ ವೆಂಚರ್ಸ್

ಇದನ್ನೂ ಓದಿ : Bank Holidays January 2023 : ಬ್ಯಾಂಕ್‌ ಗ್ರಾಹಕರೇ ಗಮನಿಸಿ : ಜನವರಿ ತಿಂಗಳಲ್ಲಿ 14 ದಿನ ಬ್ಯಾಂಕ್‌ ರಜೆ

ಇದನ್ನೂ ಓದಿ : LPG Cylinders Just rs 500 : ಕೇವಲ 500 ರೂ. ಇಳಿಕೆಯಾಗಲಿದೆ ಎಲ್‌ಪಿಜಿ ಸಿಲಿಂಡರ್‌ !

ರಾಜಸ್ಥಾನ ಸರಕಾರದ ಈ ನಿರ್ಧಾರಕ್ಕೆ ಬಂದಿದ್ದರಿಂದ ಕೇಂದ್ರ ಸರಕಾರದ ಮೇಲೆ ಎಲ್‌ಪಿಜಿ ಬೆಲೆ ಇಳಿಸುವಂತೆ ಒತ್ತಡ ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಈ ಕುರಿತುಮಹತ್ವದ ಘೋಷಣೆ ಹೊರಬೀಳಬಹುದು ಎಂಬ ಸಾಧ್ಯತೆಯಿದೆ. ಪ್ರಸ್ತುತ ಗ್ಯಾಸ್ ಸಿಲಿಂಡರ್‌ಗಳು ಮುಂಬೈನಲ್ಲಿ 1052.50 ರೂ., ಕೋಲ್ಕತ್ತಾದಲ್ಲಿ 1079 ರೂ., ದೆಹಲಿಯಲ್ಲಿ 1053 ರೂ., ಪಾಟ್ನಾದಲ್ಲಿ 1151 ರೂ., ಲಕ್ನೋದಲ್ಲಿ 1090 ರೂ. ಮತ್ತು ಚೆನ್ನೈನಲ್ಲಿ 1068 ರೂ.ಗೆ ಲಭ್ಯ ಇರುತ್ತದೆ.

LPG Price Updates: Good news for LPG users: There is a possibility of a huge reduction in the price of LPG cylinders

Comments are closed.