Madhya pradesh crime: ಮದುವೆಯಾಗುವಂತೆ ಕೇಳಿದ್ದಕ್ಕೆ ಗೆಳತಿ ಥಳಿತ : ಆರೋಪಿ ಅರೆಸ್ಟ್‌

ಮಧ್ಯಪ್ರದೇಶ: (Madhya pradesh crime) 24 ವರ್ಷದ ಯುವಕನೊಬ್ಬ ತನ್ನ 19 ವರ್ಷದ ಗೆಳತಿಯನ್ನು ಮದುವೆಯಾಗುವಂತೆ ಕೇಳಿದ್ದಕ್ಕೆ ಥಳಿಸಿದ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ. ಇದೀಗ ಆರೋಪಿ ಯುವಕನನ್ನು ಬಂಧಿಸಲಾಗಿದೆ. ಪಂಕಜ್‌ ತ್ರಿಪಾಠಿ ಎನ್ನುವಾತ ಬಂಧಿತ ಆರೋಪಿ.

ಬುಧವಾರ ಘಟನೆ (Madhya pradesh crime) ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್‌ ವೈರಲ್‌ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡೀಯೋದಲ್ಲಿ 19 ವರ್ಷದ ಯುವತಿ ಆರೋಪಿ ಯುವಕನ ಹತ್ತಿರ ಮದುವೆಯಾಗುವಂತೆ ಕೇಳುತ್ತಿರುವುದನ್ನು ಕಾಣಬಹುದು. ಮೊದಲಿಗೆ ಕಿರಿಕಿರಿಗೊಂಡ ಆರೋಪಿ ಯುವಕ ನಂತರದಲ್ಲಿ ಯುವತಿಯ ಮುಖಕ್ಕೆ ಪದೇ ಪದೇ ಹೊಡೆಯುವ ದೃಶ್ಯ ಸೆರೆಯಾಗಿದೆ.

ಪೊಲೀಸ್ ಉಪವಿಭಾಗಾಧಿಕಾರಿ (SDOP) ನವೀನ್ ದುಬೆ ಪ್ರಕಾರ, ವೀಡಿಯೊದಲ್ಲಿರುವ ವ್ಯಕ್ತಿ ಮೌಗಂಜ್ ಪ್ರದೇಶದ ಧೇರಾ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಆರೋಪಿ ಯುವಕ ಮತ್ತು ಹುಡುಗಿ ಇಬ್ಬರು ಸಂಬಂಧದಲ್ಲಿದ್ದರು ಮತ್ತು ಅವರ ನಡುವೆ ಜಗಳ ನಡೆದಿದ್ದು, ಆಕೆ ಮದುವೆಯಾಗುವಂತೆ ಕೆಳಿದ ನಂತರ ಆರೋಪಿ ಯುವಕ ಅವಳನ್ನು ಥಳಿಸಿದನು ಎಂದು ದುಬೆ ಹೇಳಿದರು.

ಆರಂಭದಲ್ಲಿ ಆರೋಪಿಯನ್ನು ಐಪಿಸಿಯ ಸೆಕ್ಷನ್ 151 (ಸಾರ್ವಜನಿಕ ಶಾಂತಿ ಕದಡುವ) ಅಡಿಯಲ್ಲಿ ಬಂಧಿಸಲಾಯಿತು ಮತ್ತು ನಂತರ ಹುಡುಗಿ ದೂರು ನೀಡಲು ನಿರಾಕರಿಸಿದ್ದರಿಂದ ಬಿಡುಗಡೆ ಮಾಡಲಾಯಿತು. ಅದಾದ ನಂತರ ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದಂತೆ ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಮತ್ತು ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಯಿತು.

ಇದನ್ನೂ ಓದಿ : Smuggling of red sandalwood : ಕೆಂಪು ರಕ್ತಚಂದನ ಕಳ್ಳಸಾಗಣಿ : 73 ಸ್ಮಗ್ಲರ್‌ ಅರೆಸ್ಟ್‌, 50 ಕೋಟಿ ಮೌಲ್ಯದ ಸೊತ್ತು ವಶ

19 ವರ್ಷದ ಸಂತ್ರಸ್ತೆ ವಿಡಿಯೋ ಚಿತ್ರೀಕರಿಸಿ ಪ್ರಸಾರ ಮಾಡಿದ ವ್ಯಕ್ತಿಯ ವಿರುದ್ಧ ಕೂಡ ದೂರು ದಾಖಲಿಸಿದ್ದು, ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

(Madhya pradesh crime) A 24-year-old man was beaten up for asking his 19-year-old girlfriend to marry him in Rewa district of Madhya Pradesh.

Comments are closed.