BPL Ration Card Karnataka 2026 : ಬೆಂಗಳೂರು: ಕರ್ನಾಟಕದಲ್ಲಿ ಹೊಸಾಗಿ ಪಡಿತರ ಚೀಟಿಯನ್ನು (Ration Card) ಪಡೆಯಲು ಕಾಯುತ್ತಿರುವ ಲಕ್ಷಾಂತರ ಜನರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಕಳೆದ ಹಲವು ತಿಂಗಳಿನಿಂದ ಸ್ಥಗಿತಗೊಂಡಿದ್ದ ಹೊಸ ಬಿಪಿಎಲ್ ಕಾರ್ಡ್‌ಗಳ ವಿತರಣೆ ಹಾಗೂ ತಿದ್ದುಪಡಿ ಮಾಡಿಸುವುದಕ್ಕೆ ಕರ್ನಾಟಕ ಸರಕಾರ ಮಹತ್ವದ ಹೆಜ್ಜೆಯನ್ನು ಇರಿಸಿದೆ.
BPL Ration Card Karnataka 2026 : ರೇಷನ್ ಕಾರ್ಡ್ ಹೊಸ ಅರ್ಜಿ ಸಲ್ಲಿಕೆಗೆ ಅವಕಾಶ ಇದೆಯೇ ?
ಈಗಾಗಲೇ ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಿದ್ದು, ಕಾರ್ಡ್ ಪಡೆಯದೇ ಬಾಕಿ ಉಳಿದಿರುವ ಅರ್ಜಿಗಳ ವಿಲೇವಾರಿ ಕರ್ನಾಟಕ ಸರಕಾರ ಮೊದಲ ಆಧ್ಯತೆಯನ್ನು ನೀಡಿದೆ.
ಈಗಾಗಲೇ ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಿಸುವ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ಹೀಗಾಗಿ ಹೊಸದಾಗಿ ಅರ್ಹ ಕುಟುಂಬಗಳಿಗೆ ಪಡಿತರ ಕಾರ್ಡ್ ನೀಡಲು ಇಲಾಖೆ ಸಿದ್ದತೆ ಮಾಡಿದೆ.
ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಅಗತ್ಯವಾಗಿದ್ದಲ್ಲಿ ಹೊಸ ಬಿಪಿಎಲ್ ಕಾರ್ಡ್ ಗಳನ್ನು ತುರ್ತಾಗಿ ಪಡೆಯಲು ಅವಕಾಶವಿದೆ.
ಒಂದೊಮ್ಮೆ ಈಗಾಗಲೇ ಪಡಿತರ ಕಾರ್ಡ್ ಹೊಂದಿದ್ದಲ್ಲಿ, ನಿಮ್ಮ ಹೆಸರು ಸೇರ್ಪಡೆ ಅಥವಾ ವಿಳಾಸ ಬದಲಾವಣೆಯನ್ನು ಮಾಡಲು ಸೇವಾ ಸಿಂಧು ಪೋರ್ಟಲ್ ಮೂಲಕ ಅವಕಾಶ ಕಲ್ಪಿಸಲಾಗುತ್ತಿದೆ.
Also Read : ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಳಿಕೆ ! ಗ್ರಾಹಕರಿಗೆ ಸಿಹಿ ಸುದ್ದಿ : ಇಂದು 22 ಕ್ಯಾರೆಟ್ ಬಂಗಾರದ ದರ ಎಷ್ಟು ?
ಅನರ್ಹ ಬಿಪಿಎಲ್ ಕಾರ್ಡ್ ರದ್ದು
ಕರ್ನಾಟಕ ಸರಕಾರ ಈಗಾಗಲೇ ಲಕ್ಷಾಂತರ ಅನರ್ಹ ಬಿಪಿಎಲ್ ಕಾರ್ಡುಗಳನ್ನು ರದ್ದುಪಡಿಸಿದೆ. ಆದಾಯ ತೆರಿಗೆ ಪಾವತಿದಾರರು ಹಾಗೂ ಐಷಾರಾಮಿ ಕಾರು ಹೊಂದಿರುವ ಬಿಪಿಎಲ್ ಕಾರ್ಡುದಾರರ ಪಡಿತರ ಕಾರ್ಡುಗಳನ್ನು ರದ್ದು ಪಡಿಸಿ ಎಪಿಎಲ್ ಗೆ ವರ್ಗಾಯಿಸುವ ಕಾರ್ಯ ಸದ್ಯ ಚಾಲ್ತಿಯಲ್ಲಿದೆ.
ಹೊಸ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ ?
ಕರ್ನಾಟಕ ಸರಕಾರ ಅಧಿಕೃತವಾಗಿ ಅರ್ಜಿ ಸಲ್ಲಿಕೆ ಆರಂಭವಾದ ನಂತರದಲ್ಲಿ ನಿಮ್ಮ ಹತ್ತಿರದಲ್ಲಿರುವ ಕರ್ನಾಟಕ ಒನ್, ಬೆಂಗಳೂರು ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿದೆ.
Also read : PM KISAN 22nd Instalment: 9 ಕೋಟಿ ರೈತರಿಗೆ ಬಿಗ್ ಅಪ್‌ಡೇಟ್; ಹಣ ಜಮಾ ಯಾವಾಗ?
ಹೊಸ ಪಡಿತರ ಕಾರ್ಡ್, ಯಾರಿಗೆ ಆದ್ಯತೆ ?
ಕರ್ನಾಟಕ ಸರಕಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಹೊಸ ಕಾರ್ಡ್ ಗೆ ಅರ್ಜಿ ಸಲ್ಲಿಕೆಯ ಪ್ರಕ್ರಿಯೆಗಳು ಈಗಾಗಲೇ ಚಾಲ್ತಿಯಲ್ಲಿದೆ. ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬಗಳಿಗೆ ಮೊದಲ ಆಧ್ಯತೆಯಲ್ಲಿ ಬಿಪಿಎಲ್ ಕಾರ್ಡ್‌ಗಳನ್ನು ವಿತರಣೆ ಮಾಡಲಾಗುತ್ತದೆ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ಹೊಸ ಬಿಪಿಎಲ್ ಕಾರ್ಡ್ ಪಡೆಯಲು ಮಾನದಂಡವೇನು ?
ಕರ್ನಾಟಕ ರಾಜ್ಯದಲ್ಲಿ ಸದ್ಯ ಹೊಸ ಬಿಪಿಎಲ್ ಕಾರ್ಡ್ ಪಡೆಯಲು ರಾಜ್ಯ ಸರಕಾರ ಹಲವು ಮಾನದಂಡಗಳನ್ನು ಫಿಕ್ಸ್ ಮಾಡಿದೆ. ಹೊಸ ಕಾರ್ಡ್ ಪಡೆಯುವ ಕುಟುಂಬಗಳ ವಾರ್ಷಿಕ ಆದಾಯ 1.20 ಲಕ್ಷಕ್ಕಿಂತಲೂ ಕಡಿಮೆ ಇರಬೇಕು. ಮಧ್ಯವರ್ತಿಗಳನ್ನು ಆಶ್ರಯಿಸದೇ ಸಾರ್ವಜನಿಕರು ನೇರವಾಗಿ ಅರ್ಜಿ ಸಲ್ಲಿಸಬಹುದು. ಸರ್ಕಾರದ ಅಧಿಕೃತ ವೆಬ್‌ಸೈಟ್ ಆದ ahara.kar.nic.inಗೆ ಲಾಗಿನ್ ಆಗಲು ಅವಕಾಶ ಕಲ್ಪಿಸಲಾಗಿದೆ.
Karnataka Ration Card Update How to Apply for New BPL Card in 2026 Check Eligibility and Last Date


