ವಾಹನ ಸವಾರರೇ ಎಚ್ಚರ ! ಏಪ್ರಿಲ್ 1ರಿಂದ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿ ಬಂದ್; ಹೊಸ ನಿಯಮ ಜಾರಿ

NHAI Alert : ನವದೆಹಲಿ : ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇರುವ ಟೋಲ್‌ ಪ್ಲಾಜಾ ( Toll Plaza) ಗಳನ್ನು ಸಂಪೂರ್ಣವಾಗಿ ಡಿಜಿಟಲ್‌ ಟೋಲಿಂಗ್‌ (Digital Toll) ವ್ಯವಸ್ಥೆಗೆ ಒಳಪಡಿಸಲಾಗುತ್ತಿದೆ. ಎಪ್ರಿಲ್‌ 1ರಿಂದ ಟೋಲ್‌ ಪ್ಲಾಜಾಗಳಲ್ಲಿ ನಗದು ಪಾವತಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಿದೆ. ಈ ಕುರಿತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಸ ಆದೇಶ ಹೊರಡಿಸಿದೆ.

ಹೊಸ ರೂಲ್ಸ್‌ನ ಪ್ರಕಾರ ವಾಹನ ಸವಾರರು ಫಾಸ್ಟ್‌ ಟ್ಯಾಗ್‌ (Fast tag) ಅಥವಾ ಯುಪಿಐ (UPI Payments) ಮೂಲಕ ಮಾತ್ರವೇ ಟೋಲ್‌ ಶುಲ್ಕ (Tool Pay) ಪಾವತಿ ಮಾಡಬೇಕಾಗಿದೆ. ದೇಶದಾದ್ಯಂತ ಶೇಕಡಾ 98ರಷ್ಟು ವಾಹನಗಳು ಫಾಸ್ಟ್‌ ಟ್ಯಾಗ್‌ ಬಳಕೆ ಮಾಡುತ್ತಿವೆ.

Also Read : ಗ್ಯಾರಂಟಿ ಯೋಜನೆಗಳಿಗೆ ಕೇಂದ್ರದ ಛೀಮಾರಿ: ಫ್ರೀಂ ಸ್ಕೀಂಗಳಿಂದ ಆರ್ಥಿಕತೆ ವಿನಾಶ ‘ಗ್ಯಾರಂಟಿ’

ನಗದು ರಹಿತ ಟೋಲ್‌ (Cashless) ವ್ಯವಸ್ಥೆ ಜಾರಿಗೆ ಬರುವುದರಿಂದ ಟ್ರಾಫಿಕ್‌ ದಟ್ಟಣೆಯನ್ನು ಸಂಪೂರ್ಣವಾಗಿ ತಪ್ಪಿಸಲು ಸಾಧ್ಯವಾಗಲಿದೆ ಅನ್ನೋದು ಎನ್‌ಎಚ್‌ಐಎ ಲೆಕ್ಕಾಚಾರ. ಸದ್ಯ ನಗದು ಪಾವತಿಸಿ ಟೋಲ್‌ಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

ಆದರೆ ದುಪ್ಪಟ್ಟು ಶುಲ್ಕ ಪಾವತಿ ಮಾಡಬೇಕಾಗಿದೆ. ಎಪ್ರಿಲ್‌ 1ರಿಂದ ಜಾರಿಯಾಗುವ ಹೊಸ ರೂಲ್ಸ್‌ ಪ್ರಕಾರ, ಫಾಸ್ಟ್‌ ಟ್ಯಾಗ್‌ ಹೊಂದಿಲ್ಲದ ವಾಹನಗಳು ಶೇಕಡಾ 125ರಷ್ಟು ದಂಡವನ್ನು ಪಾವತಿಸಬೇಕಾಗಿದೆ.

ದೇಶದಲ್ಲಿರುವ 1150 ಟೋಲ್‌ ಪ್ಲಾಜಾಗಳಲ್ಲಿಯೂ ಈ ಹೊಸ ರೂಲ್ಸ್‌ ಜಾರಿಗೆ ಬರಲಿದೆ. ಟೋಲ್‌ ಪ್ಲಾಜಾಗಳಲ್ಲಿ ಪಾದರ್ಶಕತೆಯ ಜೊತೆಗೆ ಸಮಯದ ಉಳಿತಾಯವೂ ಆಗಲಿದೆ.

Aslo Read : ದತ್ತು ಪುತ್ರನಿಗೂ ಅನುಕಂಪದ ಆಧಾರದಲ್ಲಿ ಉದ್ಯೋಗ: ಹೈಕೋರ್ಟ್‌ ಮಹತ್ವದ ತೀರ್ಪು

NHAI Alert: Non-Fastag Vehicles to Pay 125% Penalty as Tolls Go 100% Cashless from April 1.

Anil Gundmi | ಅನಿಲ್‌ ಗುಂಡ್ಮಿ

ಅನಿಲ್‌ ಗುಂಡ್ಮಿ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡದಲ್ಲಿ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಬಿಎಸ್ಸಿ ಪದವೀಧರರಾಗಿದ್ದು, ಪ್ರಚಲಿತ ವಿದ್ಯಾಮಾನ, ಕ್ರೀಡೆ, ಸಿನಿಮಾ, ದೇಶ, ವಿದೇಶಗಳ ಸುದ್ದಿಗಳ ಬರವಣೆಗೆಯಲ್ಲಿ ಹಿಡಿತಹೊಂದಿದ್ದಾರೆ. ಕಳೆದ ಐದು ವರ್ಷಗಳಿಂದಲೂ ನ್ಯೂಸ್‌ ನೆಕ್ಸ್ಟ್‌ ನಲ್ಲಿ ಕೆಲಸ ಮಾಡುತ್ತಿದ್ದಾರೆ.

Related Stories