ಕೈ ಸಾಲ ಪಡೆಯುವವರೇ ಎಚ್ಚರ..! ನಗದು ವ್ಯವಹಾರಕ್ಕೆ ಹಲವು ಮಹತ್ವದ ಬದಲಾವಣೆ ತಂದ ಕೇಂದ್ರ ಸರ್ಕಾರ
0 ಸಾವಿರ ರೂಪಾಯಿಗಳಿಗಿಂತ ಅಧಿಕ ಮೊತ್ತವನ್ನು ನಗದು ರೂಪದಲ್ಲಿ ಕೈಸಾಲ ಪಡೆಯುವಂತಿಲ್ಲ. ಅಲ್ಲದೇ ಪಡೆದ ಸಾಲವನ್ನೂ ನಗದು ರೂಪದಲ್ಲಿ ಹಿಂದಿರುಗಿಸಲು ಅವಕಾಶವಿಲ್ಲ.
ಇಂದಿನಿಂದ ನೂತನ 2026-27ರ ನೂತನ ಆರ್ಥಿಕ ವರ್ಷ ಆರಂಭಗೊಂಡಿದೆ. ಇಂದಿನಿಂದ ದೇಶಾದ್ಯಂತ ನಗದು ವ್ಯವಹಾರಗಳಲ್ಲಿ (New cash Rules in India) ಮಹತ್ವದ ಬದಲಾವಣೆ ಮಾಡಲಾಗಿದೆ. ನಗದು ವ್ಯವಹಾರ ನಡೆಸುವವರಿಗೆ ಕಟ್ಟುನಿಟ್ಟಿನ ಬದಲಾವಣೆ ತರಲಾಗಿದ್ದು, ಇನ್ಮುಂದೆ ಮನಸೋ ಇಚ್ಛೆ ನಗದನ್ನು ಯಾರ್ಯಾರಿಗೋ ನೀಡುವಂತಿಲ್ಲ. ನಿಯಮ ಉಲ್ಲಂಘಿಸಿ ನಗದು ವ್ಯವಹಾರಕ್ಕೆ ಮುಂದಾದಲ್ಲಿ ಭಾರೀ ಮೊತ್ತದ ದಂಡ ತೆರುವ ಅಪಾಯ ಕೂಡ ಕಾದಿದೆ.
ಇನ್ನು ಈ ಹೊಸ ನಿಯಮಗಳು ಏನು ಅನ್ನುವುದನ್ನು ನೋಡುವುದಾದರೆ, ಯಾವುದೇ ವ್ಯಕ್ತಿಯಿಂದ ನೀವು 2 ಲಕ್ಷ ರೂಪಾಯಿಗೂ ಅಧಿಕ ಮೊತ್ತವನ್ನು ನಗದು ರೂಪದಲ್ಲಿ ಪಡೆಯುವಂತಿಲ್ಲ. 2 ಲಕ್ಷಕ್ಕೂ ಅಧಿಕ ಮೊತ್ತವನ್ನು ನಗದು ರೂಪದಲ್ಲಿ ಪಡೆದಲ್ಲಿ ಎಲ್ಲಾ ಹಣವನ್ನು ದಂಡದ ರೂಪದಲ್ಲಿ ಸರ್ಕಾರಕ್ಕೆ ಪಾವತಿಸಬೇಕಾಗಿ ಬರಲಿದೆ. ಪ್ರತಿಯೊಂದು ವ್ಯವಹಾರವು ಬ್ಯಾಂಕಿಂಗ್ ಮಾರ್ಗದಲ್ಲಿಯೇ ನಡೆಸುವುದು ಕಡ್ಡಾಯವಾಗಿದೆ.
ಇನ್ನು ಕೈಸಾಲದ ವಿಚಾರಕ್ಕೆ ಬಂದಲ್ಲಿ, 20 ಸಾವಿರ ರೂಪಾಯಿಗಳಿಗಿಂತ ಅಧಿಕ ಮೊತ್ತವನ್ನು ನಗದು ರೂಪದಲ್ಲಿ ಕೈಸಾಲ ಪಡೆಯುವಂತಿಲ್ಲ. ಅಲ್ಲದೇ ಪಡೆದ ಸಾಲವನ್ನೂ ನಗದು ರೂಪದಲ್ಲಿ ಹಿಂದಿರುಗಿಸಲು ಅವಕಾಶವಿಲ್ಲ. ಇನ್ನು ಮನೆ ಬಾಡಿಗೆ ಪಡೆಯುವ ಅಥವಾ ಲೀಸ್ಗೆ ಪಡೆಯುವ ಸಂದರ್ಭದಲ್ಲಿಯೂ 20 ಸಾವಿರಕ್ಕೂ ಮೀರಿದ ಹಣವನ್ನು ಬ್ಯಾಂಕಿಂಗ್ ಮೂಲಕವೇ ವರ್ಗಾಯಿಸಬೇಕು. ಆಸ್ತಿ ಹಾಗೂ ಜಮೀನು ಖರೀದಿಗೆ ಮುಂದಾಗುವವರಿಗೂ ಇದೇ ನಿಯಮ ಅನ್ವಯವಾಗಲಿದೆ.
ಹೋಟೆಲ್ಗಳ ಬಿಲ್ ಪಾವತಿಗೂ ಇದೇ ನಿಯಮ ಅನ್ವಯವಾಗುತ್ತಿದೆ. 1 ಲಕ್ಷಕ್ಕೂ ಅಧಿಕ ಬಿಲ್ ಪಾವತಿಯ ಸಂದರ್ಭದಲ್ಲಿ ಗ್ರಾಹಕರು ತಮ್ಮ ಪಾನ್ ಕಾರ್ಡ್ ವಿವರಗಳನ್ನು ನಮೂದಿಸುವುದು ಕಡ್ಡಾಯವಾಗಿದೆ. ಇನ್ನು ಬ್ಯಾಂಕ್ಗಳ ಖಾತೆಗಳಲ್ಲಿ ಹಣ ಇಡುವವರಿಗೂ ಈ ನಿಯಮ ಅನ್ವಯಿಸಲಿದೆ. ಪ್ಯಾನ್ ಕಾರ್ಡ್ ಹೊಂದಿರುವವರು ವರ್ಷಕ್ಕೆ 10 ಲಕ್ಷ ಹಾಗೂ ಪಾನ್ ಕಾರ್ಡ್ ಇಲ್ಲದವರು 5 ಲಕ್ಷ ರೂಪಾಯಿಗಳವರೆಗೆ ಡೆಪಾಸಿಟ್ ಮಾಡಬಹುದಾಗಿದೆ. ಚಾಲ್ತಿ ಖಾತೆ ಹೊಂದಿರುವವರಿಗೆ 50 ಲಕ್ಷ ರೂಪಾಯಿ ಗರಿಷ್ಠ ಮೊತ್ತ ಠೇವಣಿಗೆ ಅವಕಾಶ ನೀಡಲಾಗಿದೆ. ಇದಕ್ಕಿಂತ ಜಾಸ್ತಿ ಹಣ ಡೆಪಾಸಿಟ್ ಮಾಡಲು ಆದಾಯ ತೆರಿಗೆ ಇಲಾಖೆಗೆ ಸ್ಪಷ್ಟನೆ ನೀಡಬೇಕಾಗಿ ಬರಲಿದೆ.
ಇದನ್ನೂ ಓದಿ: ಇಂದಿನಿಂದ ಮೂಟೆ ಸಿಮೆಂಟ್ ದರವೂ ದುಬಾರಿ : ರಿಯಲ್ ಎಸ್ಟೇಟ್ ವಲಯಕ್ಕೆ ಭಾರೀ ಆಘಾತ..!
ಇನ್ನು ಪ್ರತಿಯೊಬ್ಬರೂ ಸಾಮಾನ್ಯವಾಗಿ ಬಳಸುವ ಯುಪಿಐ ನಿಯಮಾವಳಿಗಳಲ್ಲಿಯೂ ಬದಲಾವಣೆ ತರಲಾಗಿದೆ. ಇನ್ಮುಂದೆ ಯುಪಿಐ ಮೂಲಕ ಹಣ ವಿತ್ ಡ್ರಾ ಮಾಡಿದರೆ 23 ರೂಪಾಯಿ ಶುಲ್ಕ ಹಾಗೂ ಎಟಿಎಂನಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಬಾರಿ ಹಣ ತೆಗೆದರೆ ಪ್ರತಿ ಬಾರಿಗೆ 25 ರೂಪಾಯಿ ಶುಲ್ಕ ಪಾವತಿ ಕಡ್ಡಾಯವಾಗಿರಲಿದೆ. ಸಾರ್ವಜನಿಕರ ಹಣದ ವ್ಯವಹಾರ ಪಾರದರ್ಶಕವಾಗಿರಬೇಕು ಹಾಗೂ ಯಾವುದೇ ರೀತಿಯ ಅನಗತ್ಯ ವ್ಯವಹಾರ ನಡೆಯದಂತೆ ತಡೆಯಲು ಕೇಂದ್ರ ಸರ್ಕಾರ ಈ ಪ್ರಮುಖ ಬದಲಾವಣೆಗಳನ್ನು ಇಂದಿನಿಂದಲೇ ಜಾರಿಗೆ ತಂದಿದೆ.



