Oil Price Hike: ಮತ್ತೆ ತೈಲ ಬೆಲೆ ಏರಿಕೆ; ಈ ಸಲ ಜೇಬಿಗೆ 9 ರೂ. ಭಾರ ಎನ್ನುತ್ತಿದೆ ವರದಿ

Petrol Rate Hike in India: ಒಂದು ಯುದ್ಧ ಆದರೆ ಏನೆಲ್ಲ ಆಗಬಾರದು ಎಂದುಕೊಳ್ಳುತ್ತೇವೋ ಅದೆಲ್ಲವು ಆಗುತ್ತಿದೆ. ರಷ್ಯಾ ಉಕ್ರೇನ್ ಯುದ್ಧದ (Russia vs Ukraine War Effects) ದುಷ್ಪರಿಣಾಮ ಭಾರತದ ಮೇಲೂ ಆಗುತ್ತಿದೆ. ತೈಲ ಕಂಪನಿಗಳಿಗೆ ಆಗುತ್ತಿರುವ ನಷ್ಟವನ್ನು ಸರಿದೂಗಿಸಿಕೊಳ್ಳಲು ಲೀಟರ್‌ಗೆ ಕನಿಷ್ಠ 9 ರೂ. ಹೆಚ್ಚಳ (Oil Price Hike) ಆಗಲಿದೆ ಎನ್ನಲಾಗಿದೆ. ಆದರೆ, ಇದನ್ನು ಒಮ್ಮೆಗೆ ಮಾಡುವುದು ಅನುಮಾನ ನಿತ್ಯ ಕೊಂಚ ಕೊಂಚವೇ ಏರಿಕೆ ಮಾಡಿ ನಷ್ಟವನ್ನು ನಿಧಾನವಾಗಿ ಸರಿದೂಗಿಸಲಾಗುತ್ತದೆ ಎಂದು ವರದಿ ತಿಳಿಸಿದೆ.

ರಷ್ಯಾದಿಂದ ಪ್ರತಿ ದಿನ 43,400 ಬ್ಯಾರೆಲ್‌ ತೈಲವನ್ನು ಭಾರತ ಖರೀದಿಸುತ್ತದೆ. ಇದು ದೇಶದ ಒಟ್ಟಾರೆ ಪ್ರಮಾಣದಲ್ಲಿ ಶೇ. 1 ಮಾತ್ರ ಇರುವ ಕಾರಣ ರಷ್ಯಾದಿಂದ ಪೂರೈಕೆ ಆಗುವ ತೈಲ ತಡೆ ಆಗಿರುವುದು ಹೆಚ್ಚಿನ ಪರಿಣಾಮ ಉಂಟಾಗುವುದಿಲ್ಲ. ಆದರೆ, ಸೌದಿ ಅರೇಬಿಯಾ ಸೇರಿ ಕೊಲ್ಲಿ ರಾಷ್ಟ್ರಗಳಿಂದ ಪೂರೈಕೆಯಲ್ಲಿ ವ್ಯತ್ಯಯವಾದರೆ ಭಾರತ ಗಂಭೀರ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ಮಾರ್ಚ್‌ 1ರಂದು ಪ್ರತಿ ಬ್ಯಾರೆಲ್‌ಗೆ 102 ಡಾಲರ್‌ ಕೊಟ್ಟು ಖರೀದಿಸಲಾಗಿದೆ. ಸರ್ಕಾರಿ ಸ್ವಾಮ್ಯದ ಮೂರು ತೈಲ ಕಂಪನಿಗಳಿಗೆ ಪ್ರತಿ ಲೀಟರ್‌ಗೆ 5.70 ರೂ ನಷ್ಟ ಅನುಭವಿಸುತ್ತಿವೆ ಎಂದು ಪೆಟ್ರೋಲಿಯಂ ಸಚಿವಾಲಯದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಘಟಕ (ಪಿಪಿಎಸಿ) ಹೇಳಿದೆ.ಕಳೆದ ನವೆಂಬರ್‌ ಮೊದಲ ವಾರದಲ್ಲಿ ತೈಲ ದರದ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ತಗ್ಗಿಸಿದ್ದರಿಂದ ಡೀಸೆಲ್‌ ಬೆಲೆ 10 ರೂ. ಮತ್ತು ಪೆಟ್ರೋಲ್‌ ಬೆಲೆ 5 ರೂ ಕಡಿಮೆ ಆಗಿತ್ತು.

Oil Price Hike

ಇದನ್ನೂ ಓದಿ: Ultrasound Scan: ಇನ್ಮುಂದೆ ಅಲ್ಟ್ರಾ ಸೌಂಡ್ ಸ್ಕಾನಿಂಗ್ ಮೂಲಕವೂ ಪ್ರಾಸ್ಟೇಟ್ ಕ್ಯಾನ್ಸರ್ ಪತ್ತೆಹಚ್ಚಬಹುದು

Oil Price Hike: ಉಕ್ರೇನ್‌-ರಷ್ಯಾ ಯುದ್ಧದಿಂದಾಗಿ ಅಂತರಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಪ್ರತಿ ಬ್ಯಾರೆಲ್‌ ದರ 100 ಡಾಲರ್‌ ಮೀರಿರುವುದರಿಂದ ಭಾರತದಲ್ಲಿ ಇಂಧನ ತೈಲದ ಧಾರಣೆ ಮುಂದಿನ ವಾರದಿಂದ ಏರಿಕೆ ಆಗುವ ಲಕ್ಷಣ ಇದೆ. ಪಂಚರಾಜ್ಯಗಳ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಇನ್ನೂ ಎರಡು ಹಂತ ಮತ್ತು ಮಣಿಪುರದಲ್ಲಿ ಒಂದು ಹಂತದ ಚುನಾವಣೆ ಬಾಕಿ ಇರುವ ಕಾರಣ ತೈಲ ಕಂಪನಿಗಳು ದರ ಪರಿಷ್ಕರಣೆ ಮಾಡಿಲ್ಲ. ಮಾರ್ಚ್‌ 10ರಂದು ಫಲಿತಾಂಶ ಪ್ರಕಟವಾಗಲಿದ್ದರೂ ಮಾರ್ಚ್‌ 7ಕ್ಕೆ ಮತದಾನ ಪೂರ್ಣಗೊಳುವುದರಿಂದ ಮರುದಿನದಿಂದಲೇ ತೈಲ ಬೆಲೆ ಹೆಚ್ಚಳ ಆಗುವ ಸಾಧ್ಯತೆ ಇದೆ ಎಂದು ಜೆಪಿ. ಮಾರ್ಗನ್‌ ವರದಿ ಹೇಳಿದೆ.

ಮಾರ್ಚ್‌ 1ರಿಂದ ವಿಮಾನಕ್ಕೆ ಬಳಸುವ ಇಂಧನ (ಎಟಿಎಫ್) ದರ ಶೇ. 3.3 ಹೆಚ್ಚಳ ಮಾಡಲಾಗಿದ್ದು, ವಾಣಿಜ್ಯ ಬಳಕೆಯ ಅಡುಗೆ ಅನಿಲದ ಸಿಲಿಂಡರ್ (19 ಕೆ.ಜಿ.) ದರ 105 ರೂಪಾಯಿ ಹೆಚ್ಚಳ ಆಗಿದೆ.

ಇದನ್ನೂ ಓದಿ: Social Media Sensation: ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ಬಲೂನ್ ಮಾರುವ ಹುಡುಗಿ

(Oil Price Hike in India due Russia Ukraine War Effect)

Comments are closed.