Online Gas Booking : ಆನ್‌ಲೈನ್‌ನಲ್ಲಿ ಸಿಲಿಂಡರ್‌ ಬುಕಿಂಗ್‌ ಮಾಡಿ ಕ್ಯಾಶ್‌ಬ್ಯಾಕ್‌ ಗಳಿಸಿ

ನವದೆಹಲಿ : ದೇಶದಲ್ಲಿ ಡಿಜಿಟಲ್ ವಿಸ್ತರಣೆಯಾಗುತ್ತಿದ್ದಂತೆ, ಜನರಿಗೆ ಅನೇಕ ಸರಕಾರಿ ಹಾಗೂ ಖಾಸಗಿ ಕೆಲಸಗಳು ಸುಲಭವಾಗಿದೆ. ಇದೀಗ ಗ್ಯಾಸ್ ಸಿಲಿಂಡರ್ ಬುಕಿಂಗ್‌ನ್ನು ಕೂಡ ತುಂಬಾ ಸುಲಭವಾಗಿ (Online Gas Booking) ಮಾಡಬಹುದು. ಈ ಹಿಂದೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನ್ನು ರಿಜಿಸ್ಟರ್‌ ನಂಬ್ರನಿಂದ ಬುಕ್ ಮಾಡುವುದು ದೀರ್ಘ ಹಾಗೂ ಬೇಸರದ ಪ್ರಕ್ರಿಯೆಯಾಗಿದ್ದು, ಅಷ್ಟೇ ಅಲ್ಲದೇ ಎಲ್‌ಪಿಜಿ ಡೀಲರ್‌ನ್ನು ವೈಯಕ್ತಿಕವಾಗಿ ಭೇಟಿ ಮಾಡುವುದು ಇನ್ನೊಂದು ಮಾರ್ಗವಾಗಿದೆ. ಆದರೂ ಹೆಚ್ಚಿನ ಗ್ಯಾಸ್ ಪೂರೈಕೆದಾರರು ಈಗ ಗ್ರಾಹಕರಿಗೆ ಗ್ಯಾಸ್ ಸಿಲಿಂಡರ್‌ಗಳನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಲು ಅವಕಾಶ ಮಾಡಿಕೊಡುತ್ತಿದ್ದಾರೆ. ಇದರಿಂದಾಗಿ ಅವರ ಸೇವೆಗಳನ್ನು ಹೆಚ್ಚು ಗ್ರಾಹಕ ಸ್ನೇಹಿ ಮತ್ತು ಪಾರದರ್ಶಕವಾಗಿಸಿದೆ.

ಆನ್‌ಲೈನ್‌ನಲ್ಲಿ ಸಿಲಿಂಡರ್‌ ಬುಕ್‌ ಮಾಡಿ ಕ್ಯಾಶ್‌ಬ್ಯಾಕ್‌ ಗಳಿಸಿ :
ಆನ್‌ಲೈನ್ ಗ್ಯಾಸ್ ಸಿಲಿಂಡರ್‌ ಬುಕ್ಕಿಂಗ್‌ ಮಾಡುವುದರಿಂದ ಹಲವು ಪ್ರಯೋಜನಗಳಿವೆ. ದೊಡ್ಡ ಅನುಕೂಲವೆಂದರೆ ಆನ್‌ಲೈನ್ ಗ್ಯಾಸ್ ಬುಕ್ಕಿಂಗ್ ಅನ್ನು ಮನೆಯಲ್ಲೇ ಕುಳಿತು ಮಾಡಬಹುದು. ಇದಕ್ಕಾಗಿ ಎಲ್ಲಿಯೂ ಹೋಗಬೇಕಾಗಿಲ್ಲ, ಹಾಗೇ ಆನ್‌ಲೈನ್ ಗ್ಯಾಸ್ ಬುಕ್ಕಿಂಗ್ ಅನ್ನು ಸುಲಭವಾಗಿ ಮಾಡಬಹುದು. ಆನ್‌ಲೈನ್ ಬುಕಿಂಗ್‌ಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲ. ಎಲ್‌ಪಿಜಿ ಮರುಪೂರಣಗಳನ್ನು ಬುಕ್ ಮಾಡಲು ಸುರಕ್ಷಿತ ಮತ್ತು ಅನುಕೂಲಕರ ಮಾರ್ಗ ಇದಾಗಿದೆ. ಇದರೊಂದಿಗೆ ಜನರು ಆನ್‌ಲೈನ್‌ನಲ್ಲಿ ಗ್ಯಾಸ್ ಬುಕ್ ಮಾಡುವ ಮೂಲಕ ಕ್ಯಾಶ್‌ಬ್ಯಾಕ್ ಅನ್ನು ಸಹ ಪಡೆಯುತ್ತಾರೆ. ಇದರಿಂದಾಗಿ ಜನರಿಗೆ ಉತ್ತಮ ಪ್ರಯೋಜನವನ್ನು ನೀಡುತ್ತದೆ.

ಆನ್‌ಲೈನ್ ಸಿಲಿಂಡರ್ ಬುಕಿಂಗ್ ವಿಧಾನ :
ಗ್ಯಾಸ್ ಏಜೆನ್ಸಿಗೆ ಭೇಟಿ ನೀಡುವ ಅಥವಾ ವಿತರಕರೊಂದಿಗೆ ನಿರಂತರ ಅನುಕ್ರರಣೆಯ ಯಾವುದೇ ತೊಂದರೆ ಇಲ್ಲ. ಅಲ್ಲದೆ ಇದು ಸುಲಭ ಪಾವತಿ ವಿಧಾನವನ್ನು ಹೊಂದಿದ್ದು, ಇದರಲ್ಲಿ ಡೆಲಿವರಿ ಟ್ರ್ಯಾಕಿಂಗ್ ಸೇವೆ ಸಹ ಲಭ್ಯವಿದೆ. ನೀವು ಆನ್‌ಲೈನ್‌ನಲ್ಲಿ ಗ್ಯಾಸ್ ಸಿಲಿಂಡರ್‌ನ್ನು ಬುಕ್ ಮಾಡಲು ಬಯಸಿದರೆ, ನೀವು ಮೊದಲು ಸಿಲಿಂಡರ್ ತೆಗೆದುಕೊಳ್ಳುತ್ತಿರುವ ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಇದಲ್ಲದೇ Paytm, PhonePe, Amazon, Freecharge ಮುಂತಾದ ಥರ್ಡ್ ಪಾರ್ಟಿ ಆಪ್‌ಗಳ ಮೂಲಕವೂ ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು.

ಇದನ್ನೂ ಓದಿ : Twitter CEO Post : ಟ್ವಿಟರ್ ಸಿಇಒ ಹುದ್ದೆಗೆ ಅರ್ಜಿ ಸಲ್ಲಿಸಿದ ‘ಇಮೇಲ್‌ನ ಸಂಶೋಧಕ’ ಶಿವ ಅಯ್ಯದುರೈ

ಇದನ್ನೂ ಓದಿ : Mask Demand Price Hike : ಭಾರತದಲ್ಲಿ ಮತ್ತೆ ಕೊರೊನಾ ಆತಂಕ : ಹೆಚ್ಚಾಯ್ತು ಮಾಸ್ಕ್‌ಗಳಿಗೆ ಬೇಡಿಕೆ, ಬೆಲೆ ಏರಿಕೆ

ಇದನ್ನೂ ಓದಿ : Chanda Kochhar : ಸಾಲ ವಂಚನೆ ಪ್ರಕರಣ : ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚರ್ ಹಾಗೂ ಪತಿ ದೀಪಕ್ ಸಿಬಿಐನಿಂದ ಬಂಧನ

ಉದಾಹರಣೆಗೆ ಭಾರತ್ ಗ್ಯಾಸ್ ಸಿಲಿಂಡರ್ ನಿಮ್ಮ ಮನೆಗೆ ಬಂದರೆ, ಗ್ಯಾಸ್ ಸಿಲಿಂಡರ್ ಬುಕಿಂಗ್‌ಗಾಗಿ ನೀವು ಭಾರತ್ ಗ್ಯಾಸ್‌ನ ಅಧಿಕೃತ ವೆಬ್‌ಸೈಟ್‌ ಆದ https://my.ebharatgas.com/bharatgas/Home/Index ಗೆ ಭೇಟಿ ನೀಡಬೇಕು. ಅದರ ನಂತರ Quick Book & Pay ಆಯ್ಕೆ ಮಾಡಬೇಕು. ನಂತರ ಖಾತೆಯಲ್ಲಿ ನೋಂದಾಯಿಸಲಾದ ಎಲ್‌ಪಿಜಿ ಐಡಿ ಅಥವಾ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಕ್ಯಾಪ್ಚಾ ನಮೂದಿಸಿ, ನಂತರ ‘Continue’ ಬಟನ್‌ನ್ನು ಕ್ಲಿಕ್ ಮಾಡಬೇಕು. ಇದರ ನಂತರ, ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಲು ಮುಂದಿನ ಪುಟದಲ್ಲಿ ನೀಡಲಾದ ಹಂತಗಳನ್ನು ಅನುಸರಿಸಬೇಕಾಗಿದೆ.

Online Gas Booking : Book cylinder online and earn cashback

Comments are closed.