ಪಿಎಂ ಕಿಸಾನ್ ಹಣ ನಿಮ್ಮ ಖಾತೆಗೆ ಜಮೆ ಅಗಿಲ್ವಾ ? ಚಿಂತೆ ಬಿಡಿ, ಈ ಕೆಲಸ ಮಾಡಿ

PM-Kisan Installment : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan) ಯೋಜನೆಯಡಿ ರೈತರ ಖಾತೆಗೆ ಪ್ರತಿ ವರ್ಷ 6,000 ರೂಪಾಯಿಗಳನ್ನು ಮೂರು ಕಂತುಗಳಲ್ಲಿ ಜಮೆ ಮಾಡಲಾಗುತ್ತಿದೆ. ಈಗಾಗಲೇ ಕೋಟ್ಯಂತರ ರೈತರ ಖಾತೆಗೆ ಫೆಬ್ರವರಿ ಕಂತಿನ ಹಣ ಜಮೆಯಾಗಿದೆ. ಆದರೆ, ಅನೇಕ ರೈತರಿಗೆ ಇನ್ನೂ ಹಣ ತಲುಪಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ನಿಮ್ಮ ಖಾತೆಗೆ ಹಣ ಬಂದಿಲ್ಲವೆಂದರೆ ಏನು ಮಾಡಬೇಕು? ಇಲ್ಲಿದೆ ಮಾಹಿತಿ.
ಪಿಎಂ ಕಿಸಾನ್ ನಿಧಿ ಹಣ ಜಮೆಯಾಗದಿರಲು ಕಾರಣವೇನು ?
- ಇ-ಕೆವೈಸಿ (e-KYC) ಪೂರ್ಣಗೊಳ್ಳದಿರುವುದು: ರೈತರು ತಮ್ಮ ಆಧಾರ್ ಸಂಖ್ಯೆಯನ್ನು ಪಿಎಂ ಕಿಸಾನ್ ಪೋರ್ಟಲ್ನಲ್ಲಿ ಇ-ಕೆವೈಸಿ ಮಾಡಿಸುವುದು ಕಡ್ಡಾಯ. ಇದು ಬಾಕಿ ಇದ್ದರೆ ಹಣ ಬರುವುದಿಲ್ಲ.
- ಆಧಾರ್ ಬ್ಯಾಂಕ್ ಖಾತೆಗೆ ಲಿಂಕ್ ಇಲ್ಲದಿರುವುದು: ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಮತ್ತು ಅದು ‘ಡಿಬಿಟಿ’ (DBT) ಗೆ ಸಕ್ರಿಯವಾಗಿರಬೇಕು.
- ಭೂ ದಾಖಲೆಗಳ ಪರಿಶೀಲನೆ: ನಿಮ್ಮ ಹೆಸರಿನಲ್ಲಿರುವ ಜಮೀನಿನ ದಾಖಲೆಗಳು (Land Seeding) ಪೋರ್ಟಲ್ನಲ್ಲಿ ಅಪ್ಡೇಟ್ ಆಗಿರದಿದ್ದರೆ ಹಣ ಸ್ಥಗಿತಗೊಳ್ಳುತ್ತದೆ.
ತಪ್ಪು ಮಾಹಿತಿ: ಅರ್ಜಿಯಲ್ಲಿ ಹೆಸರು, ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಐಎಫ್ಎಸ್ಸಿ (IFSC) ಕೋಡ್ ತಪ್ಪಾಗಿದ್ದರೂ ಹಣ ಜಮೆಯಾಗುವುದಿಲ್ಲ.
Also Read : ಮತ್ತೆ ಇಳಿಕೆ ಹಾದಿಯಲ್ಲಿ ಚಿನ್ನ : ಬೆಳ್ಳಿ ದರದಲ್ಲಿ ಕೊಂಚ ಏರಿಕೆ
ಪಿಎಂ ಕಿಸಾನ್ ಹಣ ಜಮೆ ಆಗದಿದ್ರೆ ರೈತರು ಏನು ಮಾಡಬೇಕು ?
- ಮೊದಲು ಅಧಿಕೃತ ವೆಬ್ಸೈಟ್ pmkisan.gov.in ಗೆ ಭೇಟಿ ನೀಡಿ ‘Know Your Status’ ಮೇಲೆ ಕ್ಲಿಕ್ ಮಾಡಿ ನಿಮ್ಮ ರಿಜಿಸ್ಟ್ರೇಷನ್ ನಂಬರ್ ಹಾಕಿ ಹಣ ಬಾರದಿರುವ ಕಾರಣ ತಿಳಿಯಿರಿ.
- ಹೆಲ್ಪ್ಲೈನ್ ಸಂಖ್ಯೆ: ಹಣದ ಬಗ್ಗೆ ಗೊಂದಲವಿದ್ದರೆ ಪಿಎಂ ಕಿಸಾನ್ ಟೋಲ್ ಫ್ರೀ ಸಂಖ್ಯೆ 155261 ಅಥವಾ 1800115526 ಗೆ ಕರೆ ಮಾಡಿ ದೂರು ನೀಡಬಹುದು.
- ಕೃಷಿ ಇಲಾಖೆ ಭೇಟಿ: ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕು ಕೃಷಿ ಇಲಾಖೆಗೆ ಭೇಟಿ ನೀಡಿ ಭೂ ದಾಖಲೆಗಳ ಅಪ್ಡೇಟ್ ಬಗ್ಗೆ ವಿಚಾರಿಸಿ.
- ಸಿಎಸ್ಸಿ ಕೇಂದ್ರ: ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ (CSC) ಹೋಗಿ ನಿಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ಕೂಡಲೇ ಪೂರ್ಣಗೊಳಿಸಿ.
Alos Read : ಚಿನ್ನಾಭರಣ ಪ್ರಿಯರಿಗೆ ಮತ್ತೆ ಗುಡ್ನ್ಯೂಸ್ : ಬಂಗಾರದ ಬೆಲೆಯಲ್ಲಿ ಇಳಿಕೆ, ಬೆಳ್ಳಿ ಬೆಲೆ ತಟಸ್ಥ
ಅರ್ಹ ರೈತರು ಇಂದೇ ತಮ್ಮ ದಾಖಲೆಗಳನ್ನು ಸರಿಪಡಿಸಿಕೊಂಡರೆ, ಮುಂದಿನ ಕಂತಿನ ಜೊತೆಗೆ ಬಾಕಿ ಇರುವ ಹಣವೂ ಖಾತೆಗೆ ಜಮೆಯಾಗುವ ಅವಕಾಶವಿರುತ್ತದೆ.
PM-Kisan Installment Not Credited Yet? Don’t Panic, Just Follow These Simple Steps



