ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಹಣ ರೈತರ ಖಾತೆಗೆ ಜಮೆ ಆಗಿದ್ಯಾ ? ಚೆಕ್‌ ಮಾಡುವುದು ಹೇಗೆ

pm kisan samman nidhi : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 20ನೇ ಕಂತಿನ ಹಣ ಬಿಡುಗಡೆಗಾಗಿ ರೈತರು ಕಾಯುತ್ತಿದ್ದಾರೆ. ಕಂತಿನ ಹಣವನ್ನು ಬಿಡುಗಡೆ ಆಗಿದ್ಯಾ. ಚೆಕ್‌ ಮಾಡುವುದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ.

ಭಾರತೀಯ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ ವರದಾನವಾಗಿ ಪರಿಣಮಿಸಿದೆ. ಪಿಎಂ ಕಿಸಾನ್‌ ಯೋಜನೆ ಅಡಿಯಲಿ ಭಾರತದಲ್ಲಿ ನೆಲೆಸಿರುವ ರೈತರ ಕುಟುಂಬಗಳಿಗೆ ವರ್ಷಂಪ್ರತಿ ತಲಾ ₹6,000 ಆರ್ಥಿಕ ನೆರವು ನೀಡಲಾಗುತ್ತದೆ.

ವರ್ಷದಲ್ಲಿ ಪ್ರತೀ 3 ತಿಂಗಳಿಗೆ ಒಮ್ಮೆ ತಲಾ ₹2,000ದಂತೆ 3 ಸಮಾನವಾದ ಕಂತುಗಳಲ್ಲಿ ರೈತರ ಬ್ಯಾಂಕ್‌ ಖಾತೆಗೆ ನೇರ ವರ್ಗಾವಣೆ ಮಾಡಲಾಗುತ್ತದೆ.

ಪ್ರತಿ ನಾಲ್ಕು ತಿಂಗಳಿಗೊಮ್ಮೆ (ಏಪ್ರಿಲ್-ಜುಲೈ, ಆಗಸ್ಟ್-ನವೆಂಬರ್, ಮತ್ತು ಡಿಸೆಂಬರ್-ಮಾರ್ಚ್ ಅವಧಿಗಳಲ್ಲಿ) ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ

ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಜಾರಿಗೆ ತಂದಿರುವ ಈ ಯೋಜನೆಯ ಅಡಿಯಲ್ಲಿ ಇದುವರೆಗೆ ಒಟ್ಟು 19 ಕಂತುಗಳ ಹಣ ಜಮೆ ಮಾಡಲಾಗಿದ್ದು, ಇದೀಗ 20 ಕಂತಿನ ಹಣ ಜುಲೈ ಅಂತ್ಯ ಒಳಗೆ ಬಿಡುಗಡೆ ಆಗುವ ನಿರೀಕ್ಷೆಯಿದೆ.

ಇದನ್ನೂ ಓದಿ : ಸಾಲಗಾರರೇ ಗಮನಿಸಿ..! ಸಾಲ ಪಡೆಯಲು ಪ್ಲೋಟಿಂಗ್‌ vs ಸ್ಥಿರ ಬಡ್ಡಿ ಯಾವುದು ಬೆಸ್ಟ್‌ ?

PM kisan Samman Nidhi : ರೈತರ ಖಾತೆಗೆ 3.68 ಲಕ್ಷ ಕೋಟಿ ರೂ. ಜಮೆ

ಭಾರತ ಸರಕಾರ ನೀಡಿರುವ ಮಾಹಿತಿ ಪ್ರಕಾರ, 2019ರ ಫೆಬ್ರವರಿತ ತಿಂಗಳಲ್ಲಿ ಈ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದರು. ಇದುವರೆಗೆ ಒಟ್ಟು 19 ಕಂತುಗಳನ್ನು ಪಾವತಿ ಮಾಡಲಾಗಿದೆ.

ಒಟ್ಟು ₹3.68 ಲಕ್ಷ ಕೋಟಿಗೂ ಅಧಿಕ ಹಣ ದೇಶದಾದ್ಯಂತ ರೈತರ ಖಾತೆಗಳಿಗೆ ಜಮೆ ಆಗಿದೆ.19ನೇ ಕಂತಿನಲ್ಲಿ ಸುಮಾರು 9.8 ಕೋಟಿಗೂ ಹೆಚ್ಚು ರೈತರಿಗೆ ₹22,000 ಕೋಟಿಗೂ ಹೆಚ್ಚು ಹಣವನ್ನು ವರ್ಗಾಯಿಸಲಾಗಿದೆ.

PM kisan Samman Nidhi : ಪ್ರತೀ ರೈತರ ಖಾತೆಗೆ ₹ 38,000 ಜಮೆ

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ ಅಡಿಯಲ್ಲಿ ಫಲಾನುಭವಿಗಳು ಪ್ರತಿ ವರ್ಷ ಒಟ್ಟು ₹6,000 ಹಣವನ್ನು ಪಡೆಯುತ್ತಿದ್ದಾರೆ.

ಇದುವರೆಗಿನ 19 ಕಂತುಗಳ ಪ್ರಕಾರ, ಒಬ್ಬ ಅರ್ಹ ರೈತರಿಗೆ ₹38,000 (₹2,000 x 19 ಕಂತುಗಳು) ಜಮೆ ಆಗಿದೆ. ಮುಂದಿನ 20ನೇ ಕಂತು ಜಮೆ ಆದ ನಂತರ, ಈ ಮೊತ್ತ ₹40,000 ಕ್ಕೆ ಏರುತ್ತದೆ.

ಇದನ್ನೂ ಓದಿ : ಯುಪಿಐ (UPI) ಹಣ ವರ್ಗಾವಣೆ : ಅಗಸ್ಟ್‌ 1ರಿಂದ ಹೊಸ ರೂಲ್ಸ್‌

ಪ್ರಧಾನ ಮಂತ್ರಿ ಕಿಸಾನ್‌ ಯೋಜನೆಯ ಕಂತು ನಿಮ್ಮ ಬ್ಯಾಂಕ್‌ ಖಾತೆಗೆ ಜಮೆ ಆಗಿದೆಯಾ ? ಈ ಕುರಿತು ಅಧಿಕೃತ ಮಾಹಿತಿಯನ್ನು PM ಕಿಸಾನ್ (pmkisan.gov.in) ವೆಬ್‌ಸೈಟ್‌ ಮೂಲಕ ಪಡೆಯಬಹುದು.

ವೆಬ್‌ಸೈಟ್‌ನಲ್ಲಿ ಇರುವ “Beneficiary Status” ಆಯ್ಕೆ ಬಳಸಿ ಪರಿಶೀಲಿಸಬಹುದು.

PM ಕಿಸಾನ್ ಯೋಜನೆ 20ನೇ ಕಂತು ಜಮೆ ಆಗಿದ್ಯಾ ?

ಈ ಯೋಜನೆಯ ಅಡಿಯಲ್ಲಿ 20ನೇ ಕಂತಿನ ಹಣವನ್ನು ಜುಲೈ 2025ರಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ ಆರಂಭದಲ್ಲಿ ಜೂನ್ 2025 ರಲ್ಲಿ ಬಿಡುಗಡೆಯಾಗಬೇಕಿದ್ದ ಈ ಕಂತು ವಿಳಂಬವಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜುಲೈ 18 ರಂದು ಬಿಹಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಔಪಚಾರಿಕವಾಗಿ ಕಂತು ಬಿಡುಗಡೆ ಮಾಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು.

PM kisan Samman Nidhi : ಪಿಎಂ ಕಿಸಾನ್‌ ಕಂತು ಚೆಕ್‌ ಮಾಡುವುದು ಹೇಗೆ ?

  • PM ಕಿಸಾನ್ ಅಧಿಕೃತ ವೆಬ್‌ಸೈಟ್‌ಗೆ (pmkisan.gov.in) ಭೇಟಿ ನೀಡಿ.
  • ಮುಖಪುಟದಲ್ಲಿ ‘Beneficiary Status’ ಆಯ್ಕೆಯನ್ನು ಕ್ಲಿಕ್ ಮಾಡಿ.
  • ನಿಮ್ಮ ಆಧಾರ್ ಸಂಖ್ಯೆ ಅಥವಾ ಖಾತೆ ಸಂಖ್ಯೆಯನ್ನು ನಮೂದಿಸಿ.
  • ‘Get Data’ ಮೇಲೆ ಕ್ಲಿಕ್ ಮಾಡಿ.

ನಿಮ್ಮ 20ನೇ ಕಂತು ಸೇರಿದಂತೆ ಎಲ್ಲಾ ಕಂತುಗಳ ಮಾಹಿತಿಯನ್ನು ನೀವು ಇಲ್ಲಿ ನೋಡಬಹುದು. ಇ-ಕೆವೈಸಿ (e-KYC) ಪ್ರಕ್ರಿಯೆ ಮತ್ತು ಆಧಾರ್ ಸಂಖ್ಯೆಗೆ ಬ್ಯಾಂಕ್ ಖಾತೆ ಲಿಂಕ್ ಆಗಿದೆಯೇ ಎಂದು ಖಚಿತ ಪಡಿಸಿಕೊಳ್ಳಿ.

pm kisan samman nidhi 20th installment money been deposited farmers Accounts? How to check in Kannada News

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories