PM Kisan Samman Nidhi : ಪಿಎಂ ಕಿಸಾನ್​ ಸಮ್ಮಾನ್​ ನಿಧಿಯ 21ನೇ ಕಂತು ಪಾವತಿಯಾಗಿಲ್ಲವೇ..? ಇಲ್ಲಿ ಪರಿಶೀಲಿಸಿ

PM Kisan Samman Nidhi : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಪೈಕಿ ಒಂದಾದ ಪ್ರಧಾನಮಂತ್ರಿ ಕಿಸಾನ್​ ಸಮ್ಮಾನ್​ ನಿಧಿ ಯೋಜನೆಯ 21ನೇ ಕಂತು ಬಿಡುಗಡೆಯಾಗಿದೆ. ಈಗಾಗಲೇ ಅನೇಕ ರೈತ ಫಲಾನುಭವಿಗಳ ಖಾತೆಗೆ 2000 ರೂಪಾಯಿ ಜಮೆಯಾಗಿದೆ.

ಆದರೆ ಇನ್ನೂ ಅತ್ಯಧಿಕ ಸಂಖ್ಯೆಯ ಫಲಾನುಭವಿಗಳು ತಮ್ಮ ಖಾತೆಗೆ ಯಾವಾಗ ಹಣ ಜಮೆಯಾಗುತ್ತದೆ ಎಂದು ಕಾಯುತ್ತಿದ್ದಾರೆ. ಪಿಎಂ ಕಿಸಾನ್​ ಸಮ್ಮಾನ್​ ನಿಧಿಯ 21ನೇ ಕಂತು ಪಡೆಯಲು ಅರ್ಹರಾಗಿದ್ದರೂ ಕೆಲವರಿಗೆ ಹಣ ಜಮೆಯಾಗಿಲ್ಲ.ಯಾಕೆ ಹೀಗಾಯ್ತು ಎಂಬ ಗೊಂದಲದಲ್ಲಿ ಅನೇಕರಿದ್ದಾರೆ.

2019ರಲ್ಲಿ ಪ್ರಾರಂಭಿಸಲಾದ ಪಿಎಂ ಕಿಸಾನ್​ ಸಮ್ಮಾನ್​ ಯೋಜನೆಯು ರೈತರಿಗೆ ವರ್ಷಕ್ಕೆ 6000 ರೂಪಾಯಿಗಳ ಆರ್ಥಿಕ ನೆರವು ನೀಡುತ್ತದೆ. ಈ ಮೊತ್ತವನ್ನು ಮೂರು ಕಂತಗಳಲ್ಲಿ ತಲಾ 2 ಸಾವಿರ ರೂಪಾಯಿಗಳನ್ನು ಜಮೆ ಮಾಡಲಾಗುತ್ತದೆ. ಈ ಹಣವು ನೇರವಾಗಿ ಫಲಾನುಭವಿಗಳಿಗೆ ಖಾತೆಗೆ ವರ್ಗಾವಣೆಗೊಳ್ಳುತ್ತದೆ.

ಏಪ್ರಿಲ್​ – ಜುಲೈ, ಆಗಸ್ಟ್​ – ನವೆಂಬರ್​ ಹಾಗೂ ಡಿಸೆಂಬರ್​ – ಮಾರ್ಚ್​ ತಿಂಗಳ ಅವಧಿಯಲ್ಲಿ ಹಣ ಪಾವತಿಯಾಗುತ್ತದೆ. ಈ ಯೋಜನೆಗೆ ಲಕ್ಷಾಂತರ ಜನ ಫಲಾನುಭವಿಗಳು ಇರುವ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ವಿಶ್ವದ ಅತೀ ದೊಡ್ಡ ಡಿಬಿಟಿ ಯೋಜನೆ ಎಂದು ಪರಿಗಣಿಸಲಾಗಿದೆ.

20ನೇ ಕಂತಿಗೆ ಹೋಲಿಕೆ ಮಾಡಿದರೆ ಸುಮಾರು 70 ಲಕ್ಷಕ್ಕೂ ಕಡಿಮೆ ರೈತರು 21ನೇ ಕಂತನ್ನು ಪಡೆದಿದ್ದಾರೆ. 20ನೇ ಕಂತಿನಲ್ಲಿ 9.7 ಕೋಟಿ ರೈತರಿಗೆ ಸರ್ಕಾರವು 20,500 ಕೋಟಿ ರೂಪಾಯಿಗಳನ್ನು ವರ್ಗಾವಣೆ ಮಾಡಿತ್ತು. ಆದರೆ ಈ ಬಾರಿ ಒಟ್ಟಾರೆ ಫಲಾನುಭವಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ.

ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಹಣ ಪಡೆಯಲು ಹೊಸ ರೂಲ್ಸ್‌

ಈ ರೀತಿ ಪಿಎಂ ಕಿಸಾನ್​ ಸಮ್ಮಾನ್​ ನಿಧಿಯ ಫಲಾನುಭವಿಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬರಲು ಮುಖ್ಯವಾಗಿ ಸರ್ಕಾರ ನಿಯಮಾವಳಿಗಳಲ್ಲಿ ಕಠಿಣತೆ ತಂದಿರುವುದೇ ಕಾರಣವಾಗಿದೆ. ಅರ್ಹ ರೈತರು ಮಾತ್ರ ಕಿಸಾನ್​ ಸಮ್ಮಾನ್​ ನಿಧಿಯ ಲಾಭ ಪಡೆಯಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ.

ಇದನ್ನೂ ಓದಿ : ಖಜಾನೆಯ ಬಂಗಾರವನ್ನೇ ಮಾರಾಟ ಮಾಡುತ್ತಿದೆ ಈ ಬೃಹತ್‌ ದೇಶ

ನಕಲಿ ನಮೂದುಗಳು, ಅನರ್ಹ ಭೂಮಾಲೀಕರು ಹಾಗೂ ಅಪೂರ್ಣ ವಿವರಗಳನ್ನು ಸಲ್ಲಿಸಿದವರನ್ನು ಪಿಎಂ ಕಿಸಾನ್​ ಸಮ್ಮಾನ್​ ಯೋಜನೆಯಿಂದ ತೆಗೆದು ಹಾಕಲಾಗಿದೆ. ಈ ಮೂಲಕ ಫಲಾನುಭವಿಗಳ ಸಂಖ್ಯೆಯಲ್ಲಿ 7 ಮಿಲಿಯನ್​ನಷ್ಟು ಇಳಿಕೆ ಕಂಡುಬಂದಿದೆ. ಇದರಿಂದ ಸರ್ಕಾರಕ್ಕೆ 2.5 ಸಾವಿರ ಕೋಟಿ ಉಳಿತಾಯವಾಗಿದೆ.

21ನೇ ಕಂತನ್ನು ಪಡೆಯಲು ಮೊದಲನೇಯದಾಗಿ ರೈತನು ಭಾರತೀಯ ಪ್ರಜೆಯಾಗಿರಬೇಕು. ಅವರ ಹೆಸರಿನಲ್ಲಿಯೇ ಕೃಷಿಭೂಮಿ ಇರಬೇಕು. ಸಣ್ಣ ಮತ್ತು ಅತೀ ಸಣ್ಣ ರೈತರು ಮಾತ್ರ ಈ ಯೋಜನೆಗೆ ಅರ್ಹರು.

ತಿಂಗಳಿಗೆ 10 ಸಾವಿರಕ್ಕೂ ಅಧಿಕ ರೂಪಾಯಿ ಪಿಂಚಣಿ ಪಡೆಯುತ್ತಿರುವವರು, ಆದಾಯ ತೆರಿಗೆ ಪಾವತಿದಾರರು , ಸಾಂಸ್ಥಿಕ ಭೂ ಮಾಲೀಕರು ಈ ಯೋಜನೆಗೆ ಅರ್ಹರಲ್ಲ. ಈ ಮಾನದಂಡಗಳನ್ನು ಪೂರೈಸಲು ಸಾಧ್ಯವಾಗದೇ ಇದ್ದರೆ ಪಿಎಂ ಕಿಸಾನ್​ ಸಮ್ಮಾನ್​ ನಿಧಿಯ ಹಣ ನಿಮ್ಮ ಖಾತೆಗೆ ಬರಲು ಸಾಧ್ಯವಿಲ್ಲ.

ರೈತರು ತಮ್ಮ ಕಂತನ್ನು ಪಡೆಯಲು ತಾವು ಅರ್ಹರಿದ್ದೇವೋ ಅಥವಾ ಇಲ್ಲವೋ ಎಂಬುದನ್ನು ಸುಲಭವಾಗಿ ಪಿಎಂ ಕಿಸಾನ್​ ಪೋರ್ಟಲ್​ ಮೂಲಕ ಪರಿಶೀಲಿಸಬಹುದಾಗಿದೆ. pmkisan.gov.inಗೆ ಭೇಟಿ ನೀಡಿ Know Your Status ಆಯ್ಕೆ ಕ್ಲಿಕ್​ ಮಾಡಿ.

ಇದನ್ನೂ ಓದಿ : ಮನೆ ಬಾಡಿಗೆದಾರರು ಮತ್ತು ಮಾಲೀಕರೊಬ್ಬರಿಗೂ ಖುಷಿ ಸುದ್ದಿ ನೀಡಿದ ಕೇಂದ್ರ ಸರಕಾರ

ಪಿಎಂ ಕಿಸಾನ್‌ ಹಣ ಪಡೆಯಲು ಇಕೆವೈಸಿ ಕಡ್ಡಾಯ

ಇಲ್ಲಿ ಫಲಾನುಭವಿಗಳು ತಮ್ಮ ವಿವರಗಳನ್ನು ನಮೂದಿಸುವ ಮೂಲಕ ತಮ್ಮ ಕಿಸಾನ್​ ಸಮ್ಮಾನ್​ ನಿಧಿಯ ಪ್ರಸ್ತುತ ಸ್ಥಿತಿಯನ್ನು ತಿಳಿದುಕೊಳ್ಳಬಹುದಾಗಿದೆ. ಇ-ಕೆವೈಸಿ ಪ್ರಸ್ತುತ ಎಲ್ಲಾ ಪಿಎಂ ಕಿಸಾನ್​ ಫಲಾನುಭವಿಗಳಿಗೆ ಕಡ್ಡಾಯವಾಗಿದೆ. ಇದನ್ನು ಮೂರು ವಿಧಗಳಲ್ಲಿ ಪೂರ್ಣಗೊಳಿಸಬಹುದಾಗಿದೆ.

ವೆಬ್‌ಸೈಟ್‌ನಲ್ಲಿ ಒಟಿಪಿ ಆಧಾರಿತ ಇ-ಕೆವೈಸಿ, ಸಾಮಾನ್ಯ ಸೇವಾ ಕೇಂದ್ರಗಳು (ಸಿಎಸ್‌ಸಿ) ಅಥವಾ ರಾಜ್ಯ ಸೇವಾ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ದೃಢೀಕರಣ ಅಥವಾ ಪಿಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್ ಬಳಸಿ ಮುಖ ದೃಢೀಕರಣದ ಮೂಲಕ. ಇ-ಕೆವೈಸಿ ಪೂರ್ಣಗೊಳಿಸುವುದರಿಂದ ನಿಮ್ಮ ಪಾವತಿಗಳು ಎಂದಿಗೂ ವಿಳಂಬವಾಗುವುದಿಲ್ಲ.

PM Kisan Samman Nidhi 21st installment not paid? Check here

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories