ದಿನಭವಿಷ್ಯ 06 ಡಿಸೆಂಬರ್‌ 2024 : ಈ ರಾಶಿಗಳಿಗೆ ಇಂದು ಚಂದ್ರನ ಅನುಗ್ರಹ ಇರಲಿದೆ

Horoscope Today: ದಿನಭವಿಷ್ಯ 07 ಡಿಸೆಂಬರ್‌ 2024 ಬುಧವಾರ. ಮಿಥುನ, ಸಿಂಹ, ತುಲಾ, ಕುಂಭ, ಮೀನ ಹಾಗೂ ವೃಶ್ಚಿಕ ರಾಶಿಯವರಿಗೆ ಇಂದು ಚಂದ್ರಬಲ ಇರುತ್ತದೆ. ಮೇಷರಾಶಿಯಿಂದ ಹಿಡಿದು ಮೀನರಾಶಿಯ ವರೆಗೆ 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

Horoscope Today : ದಿನಭವಿಷ್ಯ 06 ಡಿಸೆಂಬರ್‌ 2024 ಬುಧವಾರ. ಇಂದು ದ್ವಾದಶರಾಶಿಗಳ ಮೇಲೆ ಉತ್ತರ ಪಾಲ್ಗುಣಿ ನಕ್ಷತ್ರದ ಪ್ರಭಾವ ಇರುತ್ತದೆ. ಮಿಥುನ, ಸಿಂಹ, ತುಲಾ, ಕುಂಭ, ಮೀನ ಹಾಗೂ ವೃಶ್ಚಿಕ ರಾಶಿಯವರಿಗೆ ಇಂದು ಚಂದ್ರಬಲ ಇರುತ್ತದೆ. ಮೇಷರಾಶಿಯಿಂದ ಹಿಡಿದು ಮೀನರಾಶಿಯ ವರೆಗೆ 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ
ವೈವಾಹಿಕ ಜೀವನವನ್ನು ಕಂಡುಕೊಳ್ಳಲು ಉತ್ತಮವಾದ ಸಮಯ. ನಿಮ್ಮ ಅಸೂಯೆ ವರ್ತನೆಯನ್ನು ದೂರ ಮಾಡಿ. ಇಲ್ಲವಾದ್ರೆ ನಿಮ್ಮನ್ನು ಖಿನ್ನರನ್ನಾಗಿ ಮಾಡುವ ಸಾಧ್ಯತೆಯಿದೆ. ಕುಟುಂಬದ ಹಿರಿಯರ ಮಾರ್ಗದರ್ಶನದಂತೆ ನಡೆಯುವುದರಿಂದ ಶ್ರೇಯಸ್ಸು. ನಿಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುವಿರಿ.

ವೃಷಭರಾಶಿ ದಿನಭವಿಷ್ಯ
ಜೀವನದ ಅನೇಕ ಸಮಸ್ಯೆಗಳು ದೂರವಾಗಲಿದೆ. ಆರ್ಥಿಕ ಬಿಕ್ಕಟ್ಟಿನಿಂದ ಬಳಲಿದವರಿಗೆ ಇಂದು ಹಣಕಾಸಿನ ನೆರವು ದೊರೆಯಲಿದೆ. ಬಿಡುವಿನ ವೇಳೆಯಲ್ಲಿ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಸಂಗಾತಿಯ ಜೊತೆಗೆ ಸುಂದರ ಕ್ಷಣಗಳನ್ನು ಕಳೆಯುತ್ತೀರಿ.

ಮಿಥುನರಾಶಿ ದಿನಭವಿಷ್ಯ
ಸುತ್ತಮುತ್ತಿನ ಜನರನ್ನು ನೀವು ಆಕರ್ಷಿಸಲಿದ್ದೀರಿ. ಅಮೂಲ್ಯ ವಾದ ವಸ್ತುವಿನ ಖರೀದಿ ಮಾಡುವಿರಿ. ಇದರಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಹದಗೆಡುವ ಸಾಧ್ಯತೆಯಿದೆ. ನಿಮ್ಮ ಬಹುದಿನದ ಕನಸೊಂದು ನನಸಾಗಲಿದೆ. ಸ್ನೇಹಿತರ ಸಹಕಾರದಿಂದ ಸಂತೋಷಗೊಳ್ಳುವಿರಿ. ಹೊಂದಾಣಿಕೆಯಿಂದ ಕಾರ್ಯಾನುಕೂಲ.

ಕರ್ಕಾಟಕರಾಶಿ ದಿನಭವಿಷ್ಯ
ವಿದೇಶಿ ವ್ಯಾಪಾರ ಮಾಡುವವರಿಗೆ ಹೆಚ್ಚು ಲಾಭದಾಯಕ. ಬಾಕಿ ಉಳಿದಿರುವ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ. ಸ್ನೇಹಿತರು ಹಾಗೂ ಕುಟುಂಬ ಸದಸ್ಯರು ಇಂದು ಸಂತೋಷವಾಗಿ ಇರುತ್ತಾರೆ. ಸಂಗಾತಿಯಿಂದ ಸಹಕಾರ ದೊರೆಯಲಿದೆ.

ಸಿಂಹರಾಶಿ ದಿನಭವಿಷ್ಯ
ಹೊಸ ಆರ್ಥಿಕ ಒಪ್ಪಂದವು ಲಾಭವನ್ನು ತರಲಿದೆ. ಸ್ನೇಹಿತರು ಹಾಗೂ ಕುಟುಂಬ ಸದಸ್ಯರಿಗಾಗಿ ನೀವು ಸಮಯವನ್ನು ನೀಡುವಿರಿ. ಯಾರೊಂದಿಗೂ ಇಂದು ಜಗಳವಾಡಬೇಡಿ. ಸಂಜೆಯ ವೇಳೆಗೆ ಸ್ನೇಹಿತರ ಜೊತೆಗೆ ಸುಂದರ ಸಮಯವನ್ನು ಕಳೆಯುವಿರಿ. ದೂರದ ಬಂಧುಗಳ ಆಗಮನದಿಂದ ವ್ಯವಹಾರಿಕವಾಗಿ ಅನುಕೂಲ.

Horoscope Today 06 December 2024 Zodiac Sign
Image Credit to Original SourceImage Credit to Original Source

ಕನ್ಯಾರಾಶಿ ದಿನಭವಿಷ್ಯ
ಆರ್ಥಿಕವಾಗಿ ಅನುಕೂಲಕರವಾದ ದಿನ. ಮನೆಯಲ್ಲಿ ಹಬ್ಬದ ವಾತಾವರಣ ಕಂಡು ಬರಲಿದೆ. ಸೋಲುಗಳಿಂದ ನೀವು ಪಾಠ ಕಳಿಯಬೇಕು. ಸಹೋದ್ಯೋಗಿಗಳಿಂದ ನಿಮ್ಮ ಕೆಲಸ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ. ಮೇಲಾಧಿಕಾರಿಗಳಿಂದ ಉತ್ತಮ ಮಾತು ಕೇಳುವಿರಿ. ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ಮನಸಿಗೆ ಸಂತಸ.

ಇದನ್ನೂ ಓದಿ : ಭಾರತದಲ್ಲಿ ಟಾಪ್ 10 ಕಲುಷಿತ ನಗರಗಳ ಪಟ್ಟಿ : ದೆಹಲಿಗೆ ಅಗ್ರಸ್ಥಾನ, ಕರ್ನಾಟಕಕ್ಕೆ ಎಷ್ಟನೇ ಸ್ಥಾನ ?

ತುಲಾರಾಶಿ ದಿನಭವಿಷ್ಯ
ಧಾರ್ಮಿಕ ಕಾರ್ಯಕ್ಕಾಗಿ ಇಂದು ಹಣವನ್ನು ವಿನಿಯೋಗ ಮಾಡುವಿರಿ. ಮಾನಸಿಕವಾಗಿ ಶಾಂತಿ, ನೆಮ್ಮದಿ ದೊರೆಯಲಿದೆ. ನಿಮ್ಮ ಮನೆಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ. ವೈಯಕ್ತಿಕ ವ್ಯವಹಾರಗಳು ನಿಯಂತ್ರಣದಲ್ಲಿ ಇರಲಿದೆ. ಧರ್ಮಪತ್ನಿಯಿಂದ ಸಹಕಾರ ದೊರೆಯಲಿದೆ. ಪ್ರೀತಿಯ ಜೀವನ ಆನಂದಪರವಶವಾಗಿ ಇರುತ್ತದೆ.

ವೃಶ್ಚಿಕರಾಶಿ ದಿನಭವಿಷ್ಯ
ಹೊಸ ಸ್ನೇಹಿತರು ನಿಮಗೆ ಆರ್ಥಿಕವಾಗಿ ಸಹಕಾರವನ್ನು ನೀಡಲಿದ್ದಾರೆ. ಅಚ್ಚರಿಯ ಸಂದೇಶವೊಂದು ನಿಮಗೆ ಸಿಹಿ ಕನಸುಗಳನ್ನು ನೀಡುತ್ತದೆ. ಹೊಸ ವ್ಯವಹಾರದಲ್ಲಿ ನೀವು ಅಧಿಕ ಲಾಭವನ್ನು ಕಾಣುವಿರಿ. ವೈವಾಹಿಕ ಜೀವನವು ಅತ್ಯುತ್ತಮವಾಗಿ ಇರಲಿದೆ. ಹಣಕಾಸಿನ ವಿಚಾರದಲ್ಲಿ ಲಾಭದಾಯಕವಾದ ದಿನ. ಇತರರ ಕಡೆಗೆ ಇಂದು ಆಕರ್ಷಿತರಾಗುವ ಸಾಧ್ಯತೆಯಿದೆ.

ಧನಸ್ಸುರಾಶಿ ದಿನಭವಿಷ್ಯ
ಮನೆಯಲ್ಲಿ ಧಾರ್ಮಿಕ ಕಾರ್ಯಗಳು ನೆರವೇರಲಿದೆ. ಹಣಕಾಸಿನ ವಿಚಾರದಲ್ಲಿ ಇಂದು ಸ್ವಲ್ಪ ಎಚ್ಚರವಾಗಿ ಇರುವುದು ಒಳಿತು. ದೀರ್ಘಕಾಲದ ಯೋಜನೆಯೊಂದು ನಿಮಗೆ ಕೈಗೂಡುವ ಸಾಧ್ಯತೆಯಿದೆ. ದೂರದ ಬಂಧುಗಳ ಭೇಟಿಯಿಂದ ಮನಸಿಗೆ ಸಂತಸ ದೊರೆಯಲಿದೆ.

ಇದನ್ನೂ ಓದಿ : ಪ್ರಧಾನ ಮಂತ್ರಿ ಜನಧನ್‌ ಯೋಜನೆ : ಯಾರೆಲ್ಲಾ ಖಾತೆ ತೆರೆಯಲು ಅರ್ಹರು ? ಏನಿದರ ಪ್ರಯೋಜನ

ಮಕರರಾಶಿ ದಿನಭವಿಷ್ಯ
ಪಡೆದ ಸಾಲದ ವಿಚಾರವಾಗಿ ಇಂದು ಸಮಸ್ಯೆಯನ್ನು ಅನುಭವಿಸುವ ಸಾಧ್ಯತೆಯಿದೆ. ಸಮಯವನ್ನು ನೀವು ಸರಿಯಾಗಿ ಬಳಸಿಕೊಳ್ಳಬೇಕು. ಸಂಗಾತಿಯಿಂದಾಗಿ ಮನಸಿಗೆ ಕಿರಿಕಿರಿ ಉಂಟಾಗಲಿದೆ. ದೀರ್ಘಕಾಲದಿಂದ ಬಾಕಿ ಉಳಿದಿದ್ದ ಕೆಲಸವೊಂದು ಪೂರ್ಣಗೊಳ್ಳಲಿದೆ. ಇದರಿಂದಾಗಿ ಮಾನಸಿಕವಾದ ನೆಮ್ಮದಿ ದೊರೆಯಲಿದೆ.

ಕುಂಭರಾಶಿ ದಿನಭವಿಷ್ಯ
ನಿರುದ್ಯೋಗಿಗಳು ಇಂದು ಉದ್ಯೋಗವನ್ನು ಪಡೆಯಲಿದ್ದಾರೆ. ಆರ್ಥಿಕವಾಗಿ ಸುಧಾರಣೆಯನ್ನು ಕಂಡರೂ ಕೂಡ ಹಣಕಾಸಿನ ವಿಚಾರದಲ್ಲಿ ತಪ್ಪಿದಲ್ಲ. ಯಾವುದೇ ಪರಿಸ್ಥಿತಿಯಲ್ಲಿಯೂ ನೀವು ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿ. ಕಠಿಣ ಪರಿಶ್ರಮದಿಂದ ಇಂದು ಉತ್ತಮ ಫಲಿತಾಂಶ ನಿಮ್ಮದಾಗಲಿದೆ.

ಮೀನರಾಶಿ ದಿನಭವಿಷ್ಯ
ಯಾರಾದರೂ ನಿಮ್ಮ ಹೆಸರನ್ನು ಕೆಡಿಸಲು ಯೋಚಿಸುವ ಸಾಧ್ಯತೆಯಿದೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಲಾಭದಾಯಕವಾದ ದಿನ. ನಿಮ್ಮ ಮೇಲೆ ಆತ್ಮವಿಶ್ವಾಸ ವೃದ್ದಿಸಲಿದೆ. ಭಾವನಾತ್ಮಕವಾಗಿ ನೀವು ಇಂದು ಸಾಕಷ್ಟು ಸ್ಥಿರವಾಗಿ ಇರುತ್ತೀರಿ. ಜೀವನ ಸಂಗಾತಿಯ ಜೊತೆಗೆ ನೀವು ಸಮಯವನ್ನು ಕಳೆಯುತ್ತೀರಿ.

ಇದನ್ನೂ ಓದಿ : Post Office Fixed Deposits: ಅಂಚೆ ಇಲಾಖೆ ಸ್ಥಿರ ಠೇವಣಿ ಹಿಂಪಡೆಯಲು ಸರಕಾರದಿಂದ ಹೊಸ ರೂಲ್ಸ್‌

Horoscope Today 06 December 2024 Zodiac Sign

Comments are closed.