Post Office RD Scheme : ಅಂಚೆ ಕಚೇರಿಯಲ್ಲಿ 5 ಸಾವಿರ ಹೂಡಿಕೆ ಮಾಡಿ 3.5 ಲಕ್ಷ ಪಡೆಯಿರಿ

ನವದೆಹಲಿ : ಇತ್ತೀಚಿನ ಕಾಲದಲ್ಲಿ ಹೆಚ್ಚಿನ ಜನರು ಭವಿಷ್ಯಕ್ಕಾಗಿ ಹಣವನ್ನು ಉಳಿತಾಯ ಮಾಡುವ ಯೋಜನೆ ಕಡೆಗೆ ಹೆಚ್ಚಿನ ಗಮನ ನೀಡುತ್ತಾರೆ.ಅಷ್ಟೇ ಅಲ್ಲದೇ ತಾವು ಮಾಡುವ ಉಳಿತಾಯದ ಮೇಲೆ ನಿಶ್ಚಿತ ಲಾಭದ ಆಧಾರದ ಮೇಲೆ ಹೂಡಿಕೆಯನ್ನು (Post Office RD Scheme) ಮಾಡುತ್ತಾರೆ. ಸದ್ಯ ಪೋಸ್ಟ್ ಆಫೀಸ್‌ನಲ್ಲಿ ಮರುಕಳಿಸುವ ಠೇವಣಿ (ಆರ್‌ಡಿ) ಯಲ್ಲಿ ವಾರ್ಷಿಕ 5.8 ರಷ್ಟು ಬಡ್ಡಿ ದರವನ್ನು ನೀಡಲಾಗುತ್ತಿದೆ. ಜೊತೆಗೆ ಇದು ಸುರಕ್ಷಿತ ಠೇವಣಿ ಆಗಿದ್ದು ನಿಮ್ಮ ಹಣಕ್ಕೂ ಯಾವುದೇ ಅಪಾಯವಿರುವುದಿಲ್ಲ.

ಪೋಸ್ಟ್‌ ಆಫೀಸ್‌ನಲ್ಲಿ 5000 ಹೂಡಿಕೆ ಮಾಡುವುದರಿಂದ ಮಿಲೇನಿಯರ್ ಆಗಬಹುದು. ನೀವು ಅಂಚೆ ಕಚೇರಿಯ ಮರುಕಳಿಸುವ ಠೇವಣಿ (ಆರ್‌ಡಿ) ಯಲ್ಲಿ 5 ವರ್ಷಗಳ ಕಾಲ ತಿಂಗಳಿಗೆ 5000ರೂ.ಗಳನ್ನು ಹೂಡಿಕೆ ಮಾಡುವುದರಿಂದ ಮೆಚ್ಯೂರಿಟಿ ವೇಳೆಗೆ 3,48,480 ರೂಪಾಯಿಗಳನ್ನು ಪಡೆಯಬಹುದು. ನೀವು ಆರ್‌ಡಿಯಲ್ಲಿ ಮೂರು ವರ್ಷಗಳವರೆಗೆ ಪ್ರತಿ ತಿಂಗಳು 5,000ರೂ.ಗಳನ್ನು ಹೂಡಿಕೆ ಮಾಡಿದರೆ ನಿಮ್ಮ ಹೂಡಿಕೆ ಮೊತ್ತ 3 ಲಕ್ಷ ರೂ. ಆಗಿರುತ್ತದೆ. ಇದರಲ್ಲಿ ನೀವು 48,480 ರೂ.ಗಳವರೆಗೆ ಬಡ್ಡಿಯನ್ನು ಪಡೆಯಬಹುದು.

ಪೋಸ್ಟ್‌ ಆಫೀಸ್‌ನಲ್ಲಿ ಸಣ್ಣ ಉಳಿತಾಯ ಹೂಡಿಕೆಯಿಂದ ಆರಂಭಿಸಬಹುದು. ಪೋಸ್ಟ್ ಆಫೀಸ್ ನಲ್ಲಿ ನೀವು ಆರ್‌ಡಿಯಲ್ಲಿ ಕನಿಷ್ಠ 100 ರೂ.ನಿಂದ ಹೂಡಿಕೆ ಆರಂಭಿಸಬಹುದು. ಗರಿಷ್ಠ ಹೂಡಿಕೆಗೆ ಯಾವುದೇ ಮಿತಿ ಇರುವುದಿಲ್ಲ. ಇಂತಹ ಹೆಚ್ಚಿನ ಲಾಭ ಪೋಸ್ಟ್‌ ಆಫೀಸ್‌ನಲ್ಲಿ ಮಾತ್ರ ಪಡೆಯಬಹುದಾಗಿದೆ.

ಇದನ್ನೂ ಓದಿ : Private CEO for LIC: 66 ವರ್ಷಗಳ ಇತಿಹಾಸದಲ್ಲೇ ಪ್ರಥಮ ಬಾರಿಗೆ ಎಲ್ ಐಸಿಗೆ ಖಾಸಗಿ ಸಿಇಒ ನೇಮಿಸಲು ಕೇಂದ್ರ ಚಿಂತನೆ

ಇದನ್ನೂ ಓದಿ : Small saving schemes Interest Rate : ಸುಕನ್ಯಾ ಸಮೃದ್ಧಿಯಲ್ಲಿ ಹಣ ಹೂಡಿಕೆ ಮಾಡುವವರಿಗೆ ಸರಕಾರದಿಂದ ಗುಡ್‌ ನ್ಯೂಸ್

ಇದನ್ನೂ ಓದಿ : RBI Repo Rate Increase: ಆರ್‌ಬಿಐ ರೆಪೊ ದರ ಹೆಚ್ಚಳ : ಗೃಹ ಸಾಲ ಹಾಗೂ ಕಾರು ಸಾಲದ ಇಎಂಐ ಹೆಚ್ಚಳ

ನಿಮ್ಮ ಹೂಡಿಕೆ ಮೇಲೆ ಸಾಲ ಸೌಲಭ್ಯವೂ ಲಭ್ಯ:
ಹೂಡಿಕೆಯಲ್ಲಿ ಹೆಚ್ಚಿನ ಬಡ್ಡಿ ಮೊತ್ತವನ್ನು ಮಾತ್ರವಲ್ಲ, ನೀವು ನಿಮ್ಮ ಆರ್‌ಡಿ ಮೇಲೆ ಸಾಲ ಸೌಲಭ್ಯವನ್ನು ಸಹ ಪಡೆಯಬಹುದು. ಉದಾಹರಣೆಗೆ ನೀವು 12 ಕಂತುಗಳನ್ನು ಠೇವಣಿ ಮಾಡಿದಾಗ, ನೀವು 50 ಪ್ರತಿಶತದವರೆಗೆ ಸಾಲವನ್ನು ಪಡೆಯಬಹುದು. ಆದರೆ, ನಿಮ್ಮ ಸಾಲ ಮರುಪಾವತಿಗೆ ನೀವು ಶೇ.2ರಷ್ಟು ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಪೋಸ್ಟ್ ಆಫೀಸ್ ನೀವು ಜಂಟಿಯಾಗಿಯೂ ಆರ್‌ಡಿಯನ್ನು ತೆರೆಯಬಹುದು. ಹೀಗಾಗಿ ಪೋಸ್ಟ್‌ ಆಫೀಸ್‌ನಲ್ಲಿ ಸಣ್ಣ ಹೂಡಿಕೆಯಿಂದ ಅನೇಕ ಲಾಭಗಳನ್ನು ಪಡೆಯಬಹುದಾಗಿದೆ.

Post Office RD Scheme : Invest 5 thousand in post office and get 3.5 lakh

Comments are closed.