ಗಂಗೊಳ್ಳಿ ಬಂದರಿನಲ್ಲಿ ಅಗ್ನಿದುರಂತ : 8 ಕ್ಕೂ ಅಧಿಕ ಬೋಟುಗಳು ಭಸ್ಮ

ಗಂಗೊಳ್ಳಿ ಬಂದರಿನಲ್ಲಿ ಬೋಟುಗಳಗಳನ್ನು ನಿಲ್ಲಿಸಲಾಗಿತ್ತು. ಈ ಬೋಟುಗಳಿಗೆ ಆಕಸ್ಮಿಕವಾಗಿ ಅಗ್ನಿ ಅನಾಹುತ ಸಂಭವಿಸಿದೆ. ಘಟನೆಯಲ್ಲಿ ಸುಮಾರು 8 ಬೋಟುಗಳು ಸುಟ್ಟು ಕರಕಲಾಗಿವೆ. ಇದರಿಂದಾಗಿ ಸುಮಾರು 8 ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ.

ಕುಂದಾಪುರ : ಕರಾವಳಿಯ ಪ್ರಮುಖ ಬಂದರುಗಳಲ್ಲಿ ಒಂದಾಗಿರುವ ಗಂಗೊಳ್ಳಿ ಬಂದರು ಸಮೀಪದ ಮ್ಯಾಗನೀಸ್‌ ರಸ್ತೆಯಲ್ಲಿ ಅಗ್ನಿ ದುರಂತ ಸಂಭವಿಸಿದೆ. ಸುಮಾರು ಹತ್ತಕ್ಕೂ ಅಧಿಕ ಬೋಟುಗಳು ಬೆಂಕಿಗೆ ಆಹುತಿಯಾಗಿದ್ದು, ಸಂಪೂರ್ಣ ಸುಟ್ಟು ಕರಕಲಾಗಿದೆ. ಘಟನೆಯಲ್ಲಿ ಕೋಟ್ಯಾಂತರ ರೂಪಾಯಿ ನಷ್ಟ ಸಂಭವಿಸಿದೆ.

gangolli fire accident many fishing Boats fire in Gangolli port loss worth 5 crore udupi district
Image Credit to Original Source

ಗಂಗೊಳ್ಳಿ ಬಂದರಿನಲ್ಲಿ ಬೋಟುಗಳಗಳನ್ನು ನಿಲ್ಲಿಸಲಾಗಿತ್ತು. ಈ ಬೋಟುಗಳಿಗೆ ಆಕಸ್ಮಿಕವಾಗಿ ಅಗ್ನಿ ಅನಾಹುತ ಸಂಭವಿಸಿದೆ. ಘಟನೆಯಲ್ಲಿ ಸುಮಾರು 8 ಬೋಟುಗಳು ಸುಟ್ಟು ಕರಕಲಾಗಿವೆ. ಇದರಿಂದಾಗಿ ಸುಮಾರು 8 ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ. ಎರಡು ಅಗ್ನಿಶಾಮಕ ದಳದ ವಾಹನಗಳಿಂದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದಾರೆ.

ಇದನ್ನೂ ಓದಿ : ಕೇವಲ 20 ರೂ. ಕಟ್ಟಿದ್ರೆ 2 ಲಕ್ಷ ರೂಪಾಯಿ ಉಚಿತ : ಪ್ರತಿಯೊಬ್ಬರಿಗೆ ನರೇಂದ್ರ ಮೋದಿ ಸರಕಾರದ ಗಿಫ್ಟ್‌

ದೀಪಾವಳಿಯ ಹಿನ್ನೆಲೆಯಲ್ಲಿ ಮೀನುಗಾರಿಕಾ ಬಂದರಿಗೆ ರಜೆ ನೀಡಲಾಗಿತ್ತು. ಬೋಟುಗಳು ಬಂದರಿನಲ್ಲಿಯೇ ಲಂಗರು ಹಾಕಿವೆ. ಆದರೆ ಬಂದರಿನಲ್ಲಿ ನೀರಿನಿಂದ ಮೇಲಕ್ಕೆಳೆದು ದುರಸ್ಥಿ ಕಾರ್ಯವನ್ನು ನಡೆಸಲಾಗುತ್ತಿತ್ತು. ಬೋಟುಗಳಿಗೆ ಬೆಂಕಿ ತಗಲುತ್ತಿದ್ದಂತೆಯೇ ಒಮ್ಮೆಲೆ ಹೊತ್ತಿಕೊಂಡಿದೆ. ಸ್ಥಳೀಯರು ಕೂಡಲೇ ಬೆಂಕಿನಂದಿಸುವ ಕಾರ್ಯವನ್ನು ಮಾಡಿದ್ರೂ ಕೂಡ ಯಾವುದೇ ಪ್ರಯೋಜನವಾಗಿರಲಿಲ್ಲ.

gangolli fire accident many fishing Boats fire in Gangolli port loss worth 5 crore udupi district
Image Credit to Original Source

ಘಟನಾ ಸ್ಥಳಕ್ಕೆ ಬಂದ ಮೀನುಗಾರರು ಕಣ್ಣೀರು ಹಾಕಿದ್ದಾರೆ. ಅನ್ನ ನೀಡುತ್ತಿದ್ದ ಮೀನುಗಾರಿಕಾ ಬೋಟುಗಳು ಕಣ್ಣೆದುರಲ್ಲೇ ಸುಟ್ಟು ಕರಕಲಾಗಿವೆ. ಮರದಿಂದ ನಿರ್ಮಾಣ ಮಾಡಿದ ಬೋಟುಗಳು ಆಗಿರುವ ಕಾರಣಕ್ಕೆ ಬೆಂಕಿ ಒಮ್ಮೆಲೆ ಹೊತ್ತಿಕೊಂಡಿತ್ತು. ಆದರೆ ಘಟನೆಗೆ ಕಾರಣವೇನು ಅನ್ನೋದು ಮಾತ್ರ ತಿಳಿದು ಬಂದಿಲ್ಲ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ : WhatsApp Alert : ತಪ್ಪಿಯೂ ಈ ಲಿಂಕ್‌ ಕ್ಲಿಕ್‌ ಮಾಡಬೇಡಿ ! 82% ಭಾರತೀಯರಿಗೆ ನಿತ್ಯವೂ ಬರ್ತಿದೆ 12 ನಕಲಿ ಸಂದೇಶ

ಬೋಟುಗಳ ಮಾಲೀಕರು ದೀಪಾವಳಿಯ ಹಿನ್ನೆಲೆಯಲ್ಲಿ ಬೋಟುಗಳಿಗೆ ಪೂಜೆಯನ್ನು ಮಾಡುತ್ತಿದ್ದರು. ಕೂಡಲೇ ಬೆಂಕಿ ಬಿದ್ದಿರುವುದನ್ನು ಗಮನಿಸಿದ ಮೀನುಗಾರರು ಬೆಂಕಿ ನಂದಿಸಲು ಮುಂದಾಗಿದ್ದಾರೆ. ಪೂಜೆ ಮಾಡುವ ವೇಳೆಯಲ್ಲಿ ಬೆಂಕಿ ಕಿಡಿ ತಗುಲಿ ಅಗ್ನಿ ಅವಘಡ ಸಂಭವಿಸಿದೆಯಾ ಅನ್ನೋದು ಇನ್ನೂ ಖಚಿತವಾಗಿಲ್ಲ. ಅಲ್ಲದೇ ದೀಪಾವಳಿಯ ಹಿನ್ನೆಲೆಯಲ್ಲಿ ಸಿಡಿಸಿದ ಪಟಾಕಿಯಿಂದ ಈ ದುರಂತ ಸಂಭವಿಸಿದ್ಯಾ ಅನ್ನೋದು ಖಚಿತವಾಗಿಲ್ಲ.

gangolli fire accident many fishing Boats fire in Gangolli port loss worth 5 crore udupi district
Image Credit to Original Source

ಸ್ಥಳದಲ್ಲಿ ಬೆಂಕಿನಂದಿಸುವ ಕಾರ್ಯಾಚರಣೆ ಮುಂದುವರಿದಿದೆ. ಮಳೆಗಾಲದ ಅವಧಿಯಲ್ಲಿ ಇದೇ ಸ್ಥಳದಲ್ಲಿ ನೂರಾರು ಬೋಟುಗಳನ್ನು ನಿಲ್ಲಿಸಲಾಗುತ್ತಿತ್ತು. ಆದ್ರೀಗ ಮೀನುಗಾರಿಕೆ ಆರಂಭವಾದ ಹಿನ್ನೆಲೆಯಲ್ಲಿ ದಡದಲ್ಲಿದ್ದ ಬೋಟುಗಳ ಸಂಖ್ಯೆ ಕಡಿಮೆಯಿತ್ತು. ದುರಂತದಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಇದನ್ನೂ ಓದಿ: ಮಹಿಳೆಯರಿಗೆ ಫ್ರೀ..ಫ್ರೀ…ಫ್ರೀ.. ! ಆದ್ರೆ ಪುರುಷರ ಜೇಬಿಗೆ ಬೀಳಲಿದೆ ಕತ್ತರಿ: ಸದ್ಯದಲ್ಲೇ ಬಸ್ ಪ್ರಯಾಣ ದರ ದುಪ್ಪಟ್ಟು ಏರಿಕೆ

gangolli fire accident many fishing Boats fire in Gangolli port loss worth 5 crore udupi district

Comments are closed.