SBI customers alert : ಎಸ್​ಬಿಐ ಗ್ರಾಹಕರ ಗಮನಕ್ಕೆ: ಈ ಎರಡು ದಿನಗಳು ಬ್ಯಾಂಕ್​ ಸೇವೆಯಲ್ಲಿ ಇರಲಿದೆ ವ್ಯತ್ಯಯ

ಡಿಸೆಂಬರ್​ 16 ಹಾಗೂ 17ರಂದು ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದ (SBI customers alert) ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಬ್ಯಾಂಕ್​ ಉದ್ಯೋಗಿ ಗಳು ಎರಡು ದಿನಗಳ ಕಾಲ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬ್ಯಾಂಕ್​ ಗ್ರಾಹಕರಿಗೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ.

ಸಾರ್ವಜನಿಕ ವಲಯದ ಬ್ಯಾಂಕ್​ಗಳನ್ನು ಖಾಸಗೀಕರಣಗೊಳಿಸುತ್ತಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಬ್ಯಾಂಕ್​ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಬ್ಯಾಂಕ್​ ಒಕ್ಕೂಟಗಳ ಸಂಘಟನೆಯಾದ ಯುನೈಟೆಡ್​​ ಫೋರಂ ಆಫ್​ ಬ್ಯಾಂಕ್​ ಯೂನಿಯನ್ಸ್​ ಈ ಮುಷ್ಕರಕ್ಕೆ ಕರೆ ನೀಡಿದೆ.

ಡಿಸೆಂಬರ್​ 10ರಂದು ಎಸ್​ಬಿಐನ ಎಕ್ಸ್​ಚೇಂಜ್​ ಫೈಲಿಂಗ್​ ಪ್ರಕಾರ, ಯುನೈಟೆಡ್​​ ಫೋರಂ ಆಫ್​ ಬ್ಯಾಂಕ್​ ಯೂನಿಯನ್​​ ಮುಷ್ಕರದ ಸೂಚನೆಯನ್ನು ನೀಡಿದೆ. ಬ್ಯಾಂಕುಗಳ ಖಾಸಗೀಕರಣ ನೀತಿಯನ್ನು ವಿರೋಧಿಸಿ ಡಿಸೆಂಬರ್​ 16 ಹಾಗೂ 17ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದೇವೆ. ಮುಷ್ಕರದ ದಿನಗಳಲ್ಲಿ ಬ್ಯಾಂಕ್​​ನಲ್ಲಿ ಮೂಲ ಕಾರ್ಯನಿರ್ವಹಣೆಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಿದ್ದರೂ ಸಹ ಬ್ಯಾಂಕ್​ನ ಮುಷ್ಕರವು ಗ್ರಾಹಕರ ಮೇಲೆ ಪರಿಣಾಮ ಬೀರಬಲ್ಲದು ಎಂದು ಹೇಳಲಾಗಿದೆ.

ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ಕೇಂದ್ರದ ಕ್ರಮವು ಭಾರತೀಯ ಆರ್ಥಿಕತೆಯ ಆದ್ಯತಾ ವಲಯಗಳಿಗೆ ಹಾಗೂ ಸ್ವ ಸಹಾಯ ಗುಂಪುಗಳಿಗೆ ಮತ್ತು ಗ್ರಾಮೀಣ ಪ್ರದೇಶದ ಆರ್ಥಿಕತೆಗೆ ಸಾಲದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ಬ್ಯಾಂಕ್​ ಒಕ್ಕೂಟಗಳ ಅಭಿಪ್ರಾಯವಾಗಿದೆ.

ಮುಂದಿನ ವರ್ಷದ ಆರಂಭದಿಂದಲೇ ಹೆಚ್ಚಲಿದೆ ಎಟಿಎಂ ಸೇವಾ ಶುಲ್ಕ

ಎಟಿಎಂ ಸೇವೆಯ ಪ್ರಯೋಜನವನ್ನು ಪಡೆಯಲು ಶುಲ್ಕ ಪಾವತಿ ಮಾಡುತ್ತಿದ್ದ ಬ್ಯಾಂಕ್​ ಗ್ರಾಹಕರು ಮುಂದಿನ ವರ್ಷದ ಆರಂಭದಲ್ಲೇ ಅಂದರೆ ಜನವರಿ ಬಳಿಕ ಉಚಿತ ಎಟಿಎಂ ವ್ಯವಹಾರ ಮಿತಿಯನ್ನು ಮೀರಿದಲ್ಲಿ ಹೆಚ್ಚಿನ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಜೂನ್​ ತಿಂಗಳಲ್ಲಿ ರಿಸರ್ವ್​ ಬ್ಯಾಂಕ್​​ (RBI) ನಗದು ರಹಿತ ಎಟಿಎಂ ವ್ಯವಹಾರಗಳ ಶುಲ್ಕವನ್ನು (ATM Charges) ಹೆಚ್ಚಿಸಲು ಬ್ಯಾಂಕುಗಳಿಗೆ ಅನುಮತಿ ನೀಡಿತ್ತು. ಅದೇ ರೀತಿ ಈ ಪರಿಷ್ಕೃತ ಎಟಿಎಂ ಸೇವೆಯ ಶುಲ್ಕವು 2022ರ ಜನವರಿ 1 ರಿಂದಲೇ ಜಾರಿಗೆ ಬರಲಿದೆ.

ರಿಸರ್ವ್ ಬ್ಯಾಂಕ್​ ಮಾರ್ಗಸೂಚಿಯಂತೆ, ಉಚಿತ ಎಟಿಎಂ ಸೇವೆಯನ್ನು ನೀಡುವ ಮಿತಿಯನ್ನು ಮೀರಿ ನಡೆಸಲಾಗುವ ಎಟಿಎಂ ವ್ಯವಹಾರಗಳಿಗೆ ಆಕ್ಸಿಕ್​ ಬ್ಯಾಂಕ್​ ಸೇರಿದಂತೆ ವಿವಿಧ ಬ್ಯಾಂಕುಗಳು 21 ರೂಪಾಯಿಗೂ ಅಧಿಕ ಜಿಎಸ್​ಟಿ ವಿಧಿಸಲಿದೆ. ಇದು 2022ರ ಜನವರಿ 1 ರಿಂದಲೇ ಜಾರಿಗೆ ಬರಲಿದೆ ಎಂದು ಆ್ಯಕ್ಸಿಕ್​ ಬ್ಯಾಂಕ್ ಪ್ರಕಟಣೆ ಹೊರಡಿಸಿದೆ. ಜನವರಿ 1 ರಿಂದ ಅನ್ವಯವಾಗುವಂತೆ ಬ್ಯಾಂಕ್​ ಗ್ರಾಹಕರು ಉಚಿತ ಮಾಸಿಕ ಮಿತಿಯನ್ನು ಮೀರಿದ ಪ್ರತಿ ವ್ಯವಹಾರಗಳಿಗೆ ಈ ಹಿಂದೆ ನೀಡುತ್ತಿದ್ದ 20 ರೂಪಾಯಿಗಳ ಬದಲಾಗಿ 21 ರೂಪಾಯಿಗಳನ್ನು ಶುಲ್ಕದ ರೂಪದಲ್ಲಿ ಪಾವತಿಸಬೇಕು. ಈ ಹೆಚ್ಚುವರಿ ಮೊತ್ತವು ಜನವರಿಗೆ 1ರಿಂದ ಜಾರಿಗೆ ಬರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಂದಹಾಗೆ ಮುಂದಿನ ವರ್ಷ ಕೂಡ ಗ್ರಾಹಕರಿಗೆ ತಮ್ಮದೇ ಬ್ಯಾಂಕ್​ನ ಎಟಿಎಂಗಳಲ್ಲಿ ಐದು ಉಚಿತ ಟ್ರಾನ್ಸಾಕ್ಷನ್​ ಮಿತಿಯನ್ನು ಮುಂದುವರಿಸಲಾಗಿದೆ. ಇದರ ಜೊತೆಯಲ್ಲಿ ಬೇರೆ ಬ್ಯಾಂಕುಗಳ ಎಟಿಎಂಗಳಲ್ಲೂ ಸೀಮಿತ ಅವಧಿಗೆ ಉಚಿತ ವ್ಯವಹಾರ ನಡೆಸಬಹುದಾಗಿದೆ. ಇದು ಮೆಟ್ರೋ ನಗರಗಳಲ್ಲಿ ಮೂರು ಹಾಗೂ ನಾನ್​ ಮೆಟ್ರೋ ನಗರಗಳಲ್ಲಿ ಐದು ವ್ಯವಹಾರ ಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಇದರ ಜೊತೆಯಲ್ಲಿ ಆರ್​ಬಿಐ ಪ್ರತಿ ವ್ಯವಹಾರಕ್ಕೆ ಇಂಟರ್​ಚೇಂಜ್​ ಶುಲ್ಕವನ್ನು ಹಣಕಾಸು ವಹಿವಾಟುಗಳಿಗೆ 15 ರೂಪಾಯಿ ಯಿಂದ 17 ರೂಪಾಯಿಗಳವರೆಗೆ ಹಾಗೂ ಹಣಕಾಸೇತರ ವಹಿವಾಟುಗಳಿಗೆ 5 ರೂಪಾಯಿಗಳಿಂದ 6 ರೂಪಾಯಿಗಳವರೆಗೆ ಹೆಚ್ಚಿಸಲು ಬ್ಯಾಂಕುಗಳಿಗೆ ಅವಕಾಶ ನೀಡಿದೆ. ಇದು ಆಗಸ್ಟ್​ 1ರಿಂದಲೇ ಜಾರಿಗೆ ಬಂದಿದೆ.

ಇದನ್ನು ಓದಿ : GOLD PRICE TODAY : 5 ತಿಂಗಳ ಬಳಿಕ ಭಾರೀ ಇಳಿಕೆ ಕಂಡ ಚಿನ್ನದ ದರ

ಇದನ್ನೂ ಓದಿ : Beer Drinking: ನೀವೂ ಬಿಯರ್ ಕುಡೀತೀರಾ? ಬಿಯರ್‌ನಿಂದ ದೇಹಕ್ಕೆ ಉಪಯೋಗವೂ ಇದೆ, ಹಾನಿಯೂ ಇದೆ

SBI customers alert: Banking, ATM services may be hit on THESE two days next week

Comments are closed.