Kashi Corridor Varanasi : ಏನಿದು ಕಾಶಿ ವಿಶ್ವನಾಥ ಕಾರಿಡಾರ್? ಮೋದಿ ಕನಸಿನ ಯೋಜನೆಯ ವಿವರಗಳು ಇಲ್ಲಿವೆ

ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ “ಕಾಶಿ ವಿಶ್ವನಾಥ ಕಾರಿಡಾರ್” (Kashi Corridor Varanasi) ಉದ್ಘಾಟನಾ ಕಾರ್ಯಕ್ರಮ ಇಂದು (ಡಿಸೆಂಬರ್13) ನೆರವೇರಲಿದೆ. ಒಟ್ಟು 900 ಕೋಟಿ ವೆಚ್ಚದಲ್ಲಿ ನಿರ್ಮಿತವಾದ ಇದು ಹಳೆ ಕಾಶಿಯನ್ನು “ಹೊಸ ಕಾಶಿ”ಯನ್ನಾಗಿ ಮಾಡುವ ಯೋಜನೆ ಇದಾಗಿದೆ. ವಾರಾಣಸಿಯಲ್ಲಿ ಉದ್ಘಾಟನೆಗೊಳ್ಳಲಿರುವ ಈ ಅದ್ದೂರಿ ಗತ ವೈಭವವನ್ನು ಮಕರ ಸಂಕ್ರಾಂತಿಯ ತನಕ ಆಚರಿಸಲು ಪ್ಲಾನ್ ಮಾಡಲಾಗಿದೆ. 2019ರ ಮಾರ್ಚ್ 8ರಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಈಗ ಇದು ಲೋಕಾರ್ಪಣೆಗೊಳ್ಳುತ್ತಿದೆ.


ವಾಸ್ತುಶಿಲ್ಪಿ ಯಾರು?
ದೇಶದ ಪ್ರಮುಖ ವಾಸ್ತು ಶಿಲ್ಪಿಗಳಲ್ಲಿ ಒಬ್ಬರಾದ ಭೀಮಲ್ ಪಟೇಲ್ ಈ ಪ್ರಾಜೆಕ್ಟ್ ಅನ್ನು ವಿನ್ಯಾಸ ಮಾಡಿದ್ದಾರೆ. ಇವರು ಸೆಂಟ್ರಲ್ ವಿಸ್ತಾ ಯೋಜನೆಯ ಶಿಲ್ಪಿಯೂ ಹೌದು. ಈ ಪ್ರಾಜೆಕ್ಟ್ ವೇಳೆ ಶತಮಾನಗಳ ಹಿಂದಿನ ಸಾಕಷ್ಟು ವಿಗ್ರಹಗಳು ದೊರೆತಿದ್ದು, ಅವುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.


ವೆಚ್ಚ ಎಷ್ಟು?
ಪ್ರಧಾನಿ ಮೋದಿ ಇಂದು ಉದ್ಘಾಟಿಸಲಿರುವ ಯೋಜನೆಯ ಮೊದಲ ಹಂತದ ವೆಚ್ಚ 339 ಕೋಟಿ ಆಗಿದೆ. ಆದರೆ ಯೋಜನೆಯ ಒಟ್ಟು ಮೊತ್ತ 900ಕೋಟಿಯಾಗಲಿದೆ.


ಏನೆಲ್ಲಾ ವಿಶೇಷ ಸೌಲಭ್ಯಗಳಿವೆ?
50 ಫೀಟ್ ವಿಸ್ತಾರ: ಕಾರಿಡಾರ್ ಕಾಶಿ ವಿಶ್ವನಾಥ ದೇವಸ್ಥಾನದ ಬಳಿ ಇದ್ದು, ಗಂಗಾ ನದಿಯ ಎರಡು ಘಾಟ್‌ಗಳೊಂದಿಗೆ ಸಂಪರ್ಕ ಸಾಧಿಸಲಿದೆ. ಯಾತ್ರಾರ್ಥಿಗಳು ಇನ್ನು ಮುಂದೆ ಇಕ್ಕಟ್ಟಾದ ಲೇನ್‌ಗಳ ಮೂಲಕ ನಡೆಯಬೇಕಾಗಿಲ್ಲ. ಇದರಿಂದಾಗಿ ಉಂಟಾಗುವ ಜನಸಂದಣಿಯನೂ ತಪ್ಪಿಸುತ್ತದೆ.

5000 ಹೆಕ್ಟೇರ್ : ಮೋದಿ ಕನಸಿನ ಯೋಜನೆ 5000 ಹೆಕ್ಟೇರ್ ಜಾಗದಲ್ಲಿ ನಿರ್ಮಾಣವಾಗಿದೆ. ಈ ಹಿಂದೆ 2000 ಹೆಕ್ಟೇರ್ ಗಳಷ್ಟು ಇದ್ದ ಈ ಪ್ರಾಜೆಕ್ಟ್ ಈಗ ಜನರ ಅನುಕೂಲಕ್ಕಾಗಿ ಇನ್ನಷ್ಟು ವಿಸ್ತರಣೆ ಮಾಡಲಾಗಿದೆ.

23 ಕಟ್ಟಡಗಳು: ಮೋದಿ ಡ್ರಿಮ್ ಪ್ರಾಜೆಕ್ಟ್ ನಲ್ಲಿ ಒಟ್ಟು 23 ಕಟ್ಟಡಗಳಿದ್ದು, ಇವುಗಳನ್ನು ಯಾತ್ರಿಕರಿಗೆ ಸಹಾಯ ಆಗುವಂತೆ ಹಲವು ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಯಾತ್ರಿ ಸುವಿಧ ಕೇಂದ್ರ, ಮ್ಯೂಸಿಯಂ, ಫುಡ್ ಕೋರ್ಟ್, ವೇದಿಕ್ ಕೇಂದ್ರ ಮುಂತಾದ ಸೇವೆಗಳು ದೊರೆಯಲಿವೆ.


3000 ಅತಿಥಿಗಳು: ಇಂದಿನ ಈ ಕಾರ್ಯಕ್ರಮಕ್ಕೆ ರಾಜಕೀಯ, ಅಧ್ಯಾತ್ಮ, ಕಲೆಗೆ ಸಂಬಂಧಿಸಿದಂತೆ 3000 ಜನರ ಆಗಮನದ ನಿರೀಕ್ಷೆ ಇದೆ. ಈ ಪ್ರಾಜೆಕ್ಟ್ ಸಂದರ್ಭ ಸುಮಾರು ಮುನ್ನೂರು ಆಸ್ತಿಯನ್ನು ಖರೀದಿ ಮಾಡಲಾಗಿದೆ. ಹಾಗೆ ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ. ಸುಮಾರು 40ಕ್ಕೂ ಹೆಚ್ಚು ಪುರಾತನ ದೇವಾಲಯಗಳನ್ನು ಉತ್ಖನನದ ವೇಳೆ ಪತ್ತೆ ಮಾಡಲಾಗಿದೆ. ಕಾಶಿ ವಿಶ್ವನಾಥ ವೆಬ್ಸೈಟ್ ನಲ್ಲಿ ಈ ಸ್ಥಳವನ್ನು”ಗೋಲ್ಡನ್ ಟೆಂಪಲ್” ಎಂದು ಹೆಸರಿಸಲಾಗಿದೆ .

ಈಮುನ್ನ 3000 ಚದರ ಅಡಿಗಳಷ್ಟು ಮಾತ್ರ ಈ ಪ್ರದೇಶ ವ್ಯಾಪ್ತಿ ಹೊಂದಿತ್ತು. ಅದನ್ನು ಬೃಹತ್ ಪ್ರಮಾಣದಲ್ಲಿ ವಿಸ್ತರಿಸಿ 5 ಲಕ್ಷ ಚದರ ಅಡಿಯಷ್ಟು ಜಾಗವನ್ನು ಅಭಿವೃದ್ಧಿ ಪಡಿಸಲಾಗಿದೆ. ಕಾಶಿ ಕಾರಿಡಾರ್ ರುದ್ರಾಕ್ಷ, ಪಾರಿಜಾತ, ನೆಲ್ಲಿ, ಅಶೋಕ ಸೇರಿದಂತೆ ಹಲವು ಮರಗಳನ್ನು ಬೆಳೆಸಲಾಗಿದೆ. ದೇವಸ್ಥಾನದ ಆವರಣದ ಸುತ್ತ ಹಾಗೂ ಮಂದಿರ ಚೌಕಗಳುದ್ದಕ್ಕೂ ಮರಗಳನ್ನು ಬೆಳೆಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: Kashi Vishwanath corridor : ಕಾಶಿ ವಿಶ್ವನಾಥನ ಸನ್ನಿಧಿಗೆ ಹೈಟೆಲ್‌ ಸ್ಪರ್ಶ : ಕಾಶಿ ವಿಶ್ವನಾಥ ಕಾರಿಡಾರ್‌ ಇಂದು ಮೋದಿ ಲೋಕಾರ್ಪಣೆ

( Kashi Corridor Varanasi dream project of PM Narendra Modi here is the details in Kannada)

Comments are closed.