Chandan Jindal : ಉಕ್ರೇನ್‌ನಲ್ಲಿ ಪಂಜಾಬ್‌ ಮೂಲದ ವಿದ್ಯಾರ್ಥಿ ಚಂದನ್‌ ಜಿಂದಾಲ್‌ ಸಾವು

ನವದೆಹಲಿ : ರಷ್ಯಾ ಸೇನೆ ಹಾಗೂ ಉಕ್ರೇನ್‌ (Russia Ukraine War) ನಡುವೆ ನಡೆಯುತ್ತಿರುವ ಯುದ್ದದಲ್ಲಿ ಮತ್ತೋರ್ವ ಭಾರತೀಯ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಪಂಜಾಬ್‌ನ ಬರ್ನಾಲಾದ ನಿವಾಸಿಯಾಗಿರುವ ಚಂದನ್‌ ಜಿಂದಾಲ್‌ (Chandan Jindal) ಎಂಬಾತನೇ ಮೃತ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ನಿನ್ನೆಯಷ್ಟೇ ಕರ್ನಾಟಕದ ಹಾವೇರಿ ಮೂಲದ ನವೀನ್‌ ಸಾವನ್ನಪ್ಪಿದ ಬೆನ್ನಲ್ಲೇ ಇದೀಗ ಮತ್ತೋರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.

22 ವರ್ಷದ ಚಂದನ್ ಜಿಂದಾಲ್ ವಿನ್ನಿಟ್ಸಿಯಾ ಉಕ್ರೇನ್‌ನ ವಿನ್ನಿಟ್ಸಿಯಾ ನ್ಯಾಷನಲ್ ಪೈರೋಗೋವ್ ಸ್ಮಾರಕ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ. ಅಂತರಾಷ್ಟ್ರೀಯ ಮಾಧ್ಯಮಗಳ ವರದಿಯ ಪ್ರಕಾರ ಜಿಂದಾಲ್ ಅವರು ಇಸ್ಕೆಮಿಕ್ ಸ್ಟ್ರೋಕ್‌ನಿಂದ ಬಳಲುತ್ತಿದ್ದು, ಅವರನ್ನು ವಿನ್ನಿಟ್ಸಿಯಾ (ಕೈವ್ಸ್ಕಾ ಸ್ಟ್ರೀಟ್ 68) ಆಸ್ಪತ್ರೆಗೆ ದಾಖಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಚಂದನ್‌ ಜಿಂದಾಲ್‌ (Chandan Jindal) ಅವರ ಮೃತದೇಹವನ್ನು ಭಾರತಕ್ಕೆ ಮರಳಿ ತರಲು ವ್ಯವಸ್ಥೆ ಮಾಡುವಂತೆ ಅವರ ತಂದೆ ಭಾರತ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ನಿನ್ನೆಯಷ್ಟೇ ಖಾರ್ಕಿವ್‌ನಲ್ಲಿ ನಡೆದ ಶೆಲ್ ದಾಳಿಯಲ್ಲಿ ಕರ್ನಾಟಕದ ಹಾವೇರಿ ಮೂಲದ ವಿದ್ಯಾರ್ಥಿ ನವೀನ್‌ ಮೃತಪಟ್ಟಿದ್ದ. ಇದೀಗ ಮತ್ತೋರ್ವ ಭಾರತೀಯ ವಿದ್ಯಾರ್ಥಿ ಸಾವನ್ನಪ್ಪಿರುವುದು ಉಳಿದ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಆತಂಕವನ್ನು ಮೂಡಿಸಿದೆ. ಕೇಂದ್ರ ಸರಕಾರ ಇದೀಗ ಎರಡು ವಿದ್ಯಾರ್ಥಿಗಳ ಪಾರ್ಥಿವ ಶರೀರವನ್ನು ಭಾರತಕ್ಕೆ ತರುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿದೆ.

ರಷ್ಯಾ ಹಾಗೂ ಉಕ್ರೇನ್‌ ನಡುವಿನ ಯುದ್ದ ತಾರಕಕ್ಕೇರಿದ್ದು, ಉಕ್ರೇನ್‌ನಲ್ಲಿ ವಾಯು ಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಹೀಗಾಗಿ ಭಾರತೀಯರು ಹಾಗೂ ವಿದ್ಯಾರ್ಥಿ ಗಳು ಉಕ್ರೇನ್‌ ಅಕ್ಕಪಕ್ಕದ ದೇಶಗಳ ಮೂಲಕ ಏರ್‌ ಲಿಫ್ಟ್‌ ಮಾಡುವ ಕಾರ್ಯವನ್ನು ಮಾಡುತ್ತಿದೆ. ಇಂದು ಬೆಳಗ್ಗೆಯಿಂದಲೇ ಏರ್‌ ಲಿಫ್ಟ್‌ ಕಾರ್ಯಾಚರಣೆಯು ನಡೆಯುತ್ತಿದ್ದು, ಈಗಾಗಲೇ ನೂರಾರು ವಿದ್ಯಾರ್ಥಿಗಳು ಭಾರತಕ್ಕೆ ಮರಳಿದ್ದಾರೆ. ಈ ನಡುವಲ್ಲೇ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿರುವುದು ಭಾರತೀಯರಿಗೆ ಬೇಸರವನ್ನು ತರಿಸಿದೆ.

ಇದನ್ನೂ ಓದಿ : ಉಕ್ರೇನ್ ನಲ್ಲಿ ಮೃತಪಟ್ಟ ನವೀನ್ ದೇಹ ಭಾರತಕ್ಕೆ ಬರೋದೇ ಅನುಮಾನ

ಇದನ್ನೂ ಓದಿ : ಉಕ್ರೇನ್ – ರಷ್ಯಾ ಯುದ್ಧದ ಎಫೆಕ್ಟ್ : 150 -175 ರೂ.ಗೆ ಏರಿಕೆಯಾಗುತ್ತಾ ಪೆಟ್ರೋಲ್‌

(Russia Ukraine War Chandan Jindal from Punjab dies in Ukraine)

Comments are closed.