10 ಲಕ್ಷದಿಂದ 1 ಕೋಟಿಯವರೆಗೆ ಈ ಯೋಜನೆಯಡಿ ಸಿಗುತ್ತೆ ಸಾಲ!
Narendra Modi Youths Loan Bank : ಮೋದಿ ಸರ್ಕಾರವು ದೇಶದ ಪ್ರಗತಿಯನ್ನು ಇನ್ನಷ್ಟು ಹೆಚ್ಚಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಜನರಿಗೆ ಆದಷ್ಟು ನೆರವಾಗುವ ಮೂಲಕ ಜನರ ಜೀವನ ಮಟ್ಟವನ್ನು ಸುಧಾರಿಸುವ ದೃಷ್ಟಿಕೋನವನ್ನು ಹೊಂದಿದೆ.
ಇದರಲ್ಲಿ ಸ್ಟ್ಯಾಂಡ್‌ಅಪ್ ಇಂಡಿಯಾ ಯೋಜನೆಯೂ ಒಂದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಜೀವನವನ್ನು ಸುಧಾರಿಸುವ ಉದ್ದೇಶ ಮತ್ತು ಮಹಿಳಾ ಉದ್ದಿಮೆದಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಈ ಯೋಜನೆಯಡಿ ಸಾಲದ ನೆರವು ನೀಡುತ್ತಿದೆ. ಅವರು ಸ್ವಾವಲಂಬಿಗಳಾಗಿ ಬದುಕಲು ಒಂದು ಉತ್ತಮ ಅವಕಾಶ ಕಲ್ಪಿಸಿಕೊಡುವ ಉದ್ದೇಶವನ್ನು ಹೊಂದಿದೆ.
ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆ:
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರವು ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡದವರನ್ನು ಹಾಗೂ ಮಹಿಳಾ ಉದ್ದಿಮೆದಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸ್ಟ್ಯಾಂಡ್‌ಅಪ್ ಇಂಡಿಯಾ ಯೋಜನೆಯಡಿ ಸಾಲದ ಮೂಲಕ ಸಹಾಯ ಮಾಡುವ ಅವಕಾಶ ಕಲ್ಪಿಸಿಕೊಟ್ಟಿದೆ. ಹಿಂದುಳಿದ ವರ್ಗದವರ ಜೀವನ ಮಟ್ಟವನ್ನು ಸುಧಾರಿಸುವ ದೃಷ್ಟಿಕೋನವನ್ನು ಹೊಂದಿದೆ.
ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯಡಿ ಬ್ಯಾಂಕ್‌ಗಳಿಂದ ಹೆಚ್ಚಿನ ಸಾಲದ ವ್ಯವಸ್ಥೆಯನ್ನು ಸರ್ಕಾರ ನೀಡಿದೆ. ಸ್ವಂತ ಉದ್ದಿಮೆ ಶುರು ಮಾಡುವುದಕ್ಕೆ 10 ಲಕ್ಷ ರೂ. ನಿಂದ 1 ಕೋಟಿ ರೂ. ವರೆಗೂ ಬ್ಯಾಂಕುಗಳಿಂದ ಸಾಲವನ್ನು ನೀಡುತ್ತದೆ.
ಮಾನದಂಡಗಳು;
ಈ ಯೋಜನೆಯಡಿ ಎಸ್‌ಸಿ ಎಸ್‌ಟಿ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದು. 18 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಅರ್ಜಿ ಸಲ್ಲಿಸಲು ಅವಕಾಶ. ಉತ್ಪಾದನೆ ಮತ್ತು ಸೇವಾ ವಲಯದ ಅಡಿಯಲ್ಲಿ ಇರುವ ಮೊದಲ ಯೋಜನೆಗೆ ಸಾಲದ ಮೊತ್ತವನ್ನು ನೀಡಲಾಗುವುದು. ( ಗ್ರೀನ್‌ಫೀಲ್ಡ್ ಯೋಜನೆಗಳಿಗೆ ಮಾತ್ರ). ಅರ್ಜಿದಾರರು ವ್ಯಾಂಕ್ ಅಥವಾ ಸಂಸ್ಥೆಯಲ್ಲಿ ಡೀಫಾಲ್ಟರ್ ಆಗಿರಬೇಕು.
ಇದನ್ನೂ ಓದಿ: ನಟಿ ರಜಿನಿ ಮತ್ತು ಅರುಣ್ ಮದುವೆ
ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ (PMKVY):
ಯುವಕರ ಭವಿಷ್ಯವನ್ನು ಸುಧಾರಿಸುವ, ಜೊತೆಗೆ ಯುವಕರಿಗೆ ಉದ್ಯೋಗಾವಕಾಶವನ್ನು ಹೆಚ್ಚಿಸುವ ಸಲುವಾಗಿ ಕೌಶಲ್ಯ ತರಬೇತಿಯನ್ನು ನೀಡುವ ಉದ್ದೇಶವನ್ನು ಸರ್ಕಾರ ಹೊಂದಿದ್ದು, ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿ ಈ ಉದ್ದೇಶವನ್ನು ರೂಪಿಸಿದೆ.
ದೇಶದಲ್ಲಿ ಯುವಕರು ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದಾರೆ. ತಮ್ಮ ಬದುಕನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿಕೊಳ್ಳಲು ಹೆಣೆದಾಡುವ ಪರಿಸ್ಥಿತಿ ಇಂದಿಗೂ ಇದೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು, ಯುವಕರನ್ನೇ ಕೇಂದ್ರವಾಗಿರಿಸಿಕೊಂಡು ಕೌಶಲ್ಯ ತರಬೇತಿಯನ್ನು ನೀಡುವ ಮೂಲಕ ಯುವಕರ ಉದ್ಯೋಗಾರ್ಹತೆಯನ್ನು ಹೆಚ್ಚಿಸುವ ಉದ್ದೇಶವನ್ನು ಈ ಯೋಜನೆಯಡಿಯಲ್ಲಿ ಕಾರ್ಯರೂಪಕ್ಕೆ ತರಲಾಗಿದೆ.
ಯುವಕರು ಉದ್ಯೋಗಕ್ಕೆ ಸಿದ್ಧರಾಗುವಂತೆ ಮಾಡಲು ಬೇಕಾಗುವ ಕೌಶಲ್ಯವನ್ನು ನೀಡುವಂಥದ್ದು, ಇರದ ಮೂಲಕ ಯುವಕರ ಸ್ವಾವಲಂಬಿಗಳಾಗಬೇಕು ಅನ್ನುವ ಉದ್ದೇಶವನ್ನು ಹೊಂದಿದೆ.
Narendra Modi Youths Loan Bank



