Post Office schemes : ನಿಮ್ಮ ಹಣವನ್ನು ಡಬಲ್​ ಮಾಡಲಿವೆ ಅಂಚೆ ಕಚೇರಿಯ ಈ ಯೋಜನೆಗಳು

ಅಂಚೆ ಕಚೇರಿಯ ಉಳಿತಾಯ ಯೋಜನೆಗಳು(Post Office schemes) ನಿಮಗೆ ಯಾವುದೇ ಅಪಾಯವಿಲ್ಲದೇ ದೊಡ್ಡ ಮೊತ್ತದ ಲಾಭವನ್ನು ತಂದುಕೊಡುತ್ತದೆ. ಅಲ್ಲದೇ ಇದರಲ್ಲಿ ಸರ್ಕಾರದ ಯೋಜನೆಗಳೇ ಇರೋದ್ರಿಂದ ಹೂಡಿಕೆದಾರರು ಯಾವುದೇ ಹಿಂಜರಿಕೆಯಿಲ್ಲದೇ ಹೂಡಿಕೆ ಮಾಡಬಹುದಾಗಿದೆ. ಹಾಗಾದರೆ ಅಂಚೆ ಕಚೇರಿಯ ಯಾವೆಲ್ಲ ಯೋಜನೆಗಳು ( Post Office scheme )ನಿಮ್ಮ ಹಣವನ್ನು ದುಪ್ಪಟ್ಟ ಮಾಡಬಲ್ಲವು ಎಂಬುದನ್ನು ನೋಡೋಣ :

ಪೋಸ್ಟ್​ ಆಫೀಸ್​ ಟೈಮ್​ ಡೆಪಾಸಿಟ್​ :

1 ರಿಂದ ಮೂರು ವರ್ಷಗಳವರೆಗೆ ನೀವು ಈ ಯೋಜನೆಯ ಮೂಲಕ ಹಣವನ್ನು ಠೇವಣಿ ಇಡಬಹುದಾಗಿದೆ. ಇಲ್ಲಿ ನಿಮಗೆ ವಾರ್ಷಿಕವಾಗಿ 5.5 ಪ್ರತಿಶತ ಬಡ್ಡಿ ಸಿಗಲಿದೆ. 13 ವರ್ಷಗಳಲ್ಲಿ ನೀವು ಹೂಡಿಕೆ ಮಾಡಿದ ಹಣವು ಡಬಲ್​ ಆಗಲಿದೆ. ಅದೇ ರೀತಿ ಐದು ವರ್ಷಗಳ ಕಾಲ ನೀವು ಹಣ ಹೂಡಿಕೆ ಮಾಡಿದರೆ ನಿಮಗೆ 6.7 ಪ್ರತಿಶತ ಬಡ್ಡಿದರ ಸಿಗಲಿದೆ.ಅಂಚೆ ಕಚೇರಿ ಉಳಿತಾಯ ಬ್ಯಾಂಕ್​ ಖಾತೆ :
ಈ ಯೋಜನೆಯಲ್ಲಿ ನೀವು ಹಣ ಠೇವಣಿ ಇಟ್ಟಲ್ಲಿ ಹಣ ದ್ವಿಗುಗೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಬಡ್ಡಿ ದರ ಕೂಡ ಕಡಿಮೆ ಅಂದರೆ 4 ಪ್ರತಿಶತ ಮಾತ್ರ ಸಿಗಲಿದೆ. ನೀವು ಇಲ್ಲಿ 18 ವರ್ಷಗಳವರೆಗೆ ಕಾದು ಹಣವನ್ನು ಡಬಲ್​ ಮಾಡಿಕೊಳ್ಳಬಹುದಾಗಿದೆ.

ಅಂಚೆ ಕಚೇರಿಯ ಮರುಳಿಸುವ ಠೇವಣಿ ( Post Office scheme ):

ಅಂಚೆ ಕಚೇರಿಯ ಮರುಕಳಿಸುವ ಠೇವಣಿಯು ನಿಮಗೆ 5.8 ಪ್ರತಿಶತ ವಾರ್ಷಿಕ ಬಡ್ಡಿದರದಲ್ಲಿ ಲಭ್ಯವಿದೆ. ಇಲ್ಲಿ ನೀವು 12 ವರ್ಷಗಳವರೆಗೆ ಕಾದು ಹಣವನ್ನು ಡಬಲ್ ಮಾಡಿಕೊಳ್ಳಬಹುದು.

ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ ( Post Office scheme):

ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆಯು ಪ್ರಸ್ತುತ 6.6 ಪ್ರತಿಶತ ಬಡ್ಡಿದರದಲ್ಲಿ ಲಭ್ಯವಿದೆ. ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಿಮಗೆ 10 ವರ್ಷಗಳಲ್ಲಿ ಹಣ ದ್ವಿಗುಣಗೊಳ್ಳಲಿದೆ.

ಅಂಚೆ ಕಚೇರಿ ಹಿರಿಯ ನಾಗರಿಕರ ಉಳಿತಾಯ ಯೋಜನೆ:

ಅಂಚೆ ಕಚೇರಿಯ ಹಿರಿಯ ನಾಗರಿಕರ ಉಳಿತಾಯ ಯೋಜನೆಗೆ 7.4 ಪ್ರತಿಶತ ಬಡ್ಡಿದರ ನಿಗದಿ ಮಾಡಲಾಗಿದೆ. 7 ರಿಂದ 9 ವರ್ಷಗಳಲ್ಲಿ ನಿಮ್ಮ ಹಣವು ದ್ವಿಗುಣಗೊಳ್ಳಲಿದೆ.

ಅಂಚೆ ಕಚೇರಿ ಪಿಪಿಎಫ್​:

ಅಂಚೆ ಕಚೇರಿಯ 15 ವರ್ಷಗಳ ಸಾರ್ವಜನಿಕ ಭವಿಷ್ಯ ನಿಧಿಯು 7.1 ಪ್ರತಿಶತ ಬಡ್ಡಿದರದಲ್ಲಿ ಲಭ್ಯವಿದೆ. ಈ ದರದಲ್ಲಿ ನೀವು 10 ವರ್ಷಗಳಲ್ಲಿ ನಿಮ್ಮ ಹಣವನ್ನು ಡಬಲ್​ ಮಾಡಿಕೊಳ್ಳಬಹುದು.

ಅಂಚೆ ಕಚೇರಿಯ ಸುಕನ್ಯಾ ಸಮೃದ್ಧಿ ಯೋಜನೆ:

ಸುಕನ್ಯಾ ಸಮೃದ್ಧಿ ಯೋಜನೆಯು ಅಂಚೆ ಕಚೇರಿಯ ಎಲ್ಲಾ ಯೋಜನೆಗಳಿಗಿಂತ ಹೆಚ್ಚಿನ ಬಡ್ಡಿದರವನ್ನು ಹೊಂದಿದೆ. ಅಂದರೆ ಇಲ್ಲಿ ನಿಮಗೆ 7.6 ಪ್ರತಿಶತ ಬಡ್ಡಿದರ ಸಿಗಲಿದೆ. ಇದು ಹೆಣ್ಣು ಮಗುವಿಗೆ ಸೀಮಿತವಾದ ಯೋಜನೆಯಾಗಿದ್ದು 9 ವರ್ಷಗಳಲ್ಲಿ ಹಣ ದುಪ್ಪಟ್ಟಾಗುವುದು.

ಅಂಚೆ ಕಚೇರಿಯ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ:

ಅಂಚೆ ಕಚೇರಿಯ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರವು 6.8 ಪ್ರತಿಶತ ಬಡ್ಡಿದರದಲ್ಲಿ ಲಭ್ಯವಿದೆ. 5 ವರ್ಷದ ಅವಧಿಯ ಈ ಯೋಜನೆಯನ್ನು ನೀವು ಬಳಕೆ ಮಾಡುವ ಮೂಲಕ ಆದಾಯ ತೆರಿಗೆಯನ್ನು ಉಳಿಸಬಹುದಾಗಿದೆ. ಈ ಯೋಜನೆಯಲ್ಲಿ ನೀವು ಹಣ ಹೂಡಿಕೆ ಮಾಡಿದರೆ 10 ವರ್ಷಗಳಲ್ಲಿ ಹಣ ಡಬಲ್​ ಆಗಲಿದೆ.

ಇದನ್ನು ಓದಿ : Beer Drinking: ನೀವೂ ಬಿಯರ್ ಕುಡೀತೀರಾ? ಬಿಯರ್‌ನಿಂದ ದೇಹಕ್ಕೆ ಉಪಯೋಗವೂ ಇದೆ, ಹಾನಿಯೂ ಇದೆ

ಇದನ್ನೂ ಓದಿ: SBI customers alert: ಎಸ್​ಬಿಐ ಗ್ರಾಹಕರ ಗಮನಕ್ಕೆ: ಈ ಎರಡು ದಿನಗಳು ಬ್ಯಾಂಕ್​ ಸೇವೆಯಲ್ಲಿ ಇರಲಿದೆ ವ್ಯತ್ಯಯ

THESE Post Office schemes will make you rich, here’s how

Comments are closed.