Gold and Silver Prices : ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಮತ್ತೆ ಏರಿಕೆ : ಕಂಗಾಲಾದ ಗ್ರಾಹಕರು

Gold and Silver Prices : ಕಳೆದ ಕೆಲವು ದಿನಗಳಲ್ಲಿ ಕೊಂಚ ಇಳಿಕೆ ಕಾಣುವ ಮೂಲಕ ಗ್ರಾಹಕರಲ್ಲಿ ಭರವಸೆ ಮೂಡಿಸಿದ ಚಿನ್ನ ಹಾಗೂ ಬೆಳ್ಳಿ ದರವು ಇದೀಗ […]

Why Gold and Silver Prices are Climbing Again What it Means for Your Next Purchase

Gold and Silver Prices : ಕಳೆದ ಕೆಲವು ದಿನಗಳಲ್ಲಿ ಕೊಂಚ ಇಳಿಕೆ ಕಾಣುವ ಮೂಲಕ ಗ್ರಾಹಕರಲ್ಲಿ ಭರವಸೆ ಮೂಡಿಸಿದ ಚಿನ್ನ ಹಾಗೂ ಬೆಳ್ಳಿ ದರವು ಇದೀಗ ಯೂಟರ್ನ್ ಹೊಡೆದಿದೆ. ಚಿನ್ನಾಭರಣ ಪ್ರಿಯರಿಗೆ ಆಘಾತಕಾರಿ ಮಾಹಿತಿ ಎಂಬಂತೆ ಎರಡೂ ಲೋಹಗಳ ದರದಲ್ಲಿ ದಿಢೀರ್​ ಏರಿಕೆ ಕಂಡುಬಂದಿದ್ದು ಗ್ರಾಹಕರು ಕಂಗಾಲಾಗಿದ್ದಾರೆ.

ಮದುವೆ ಸೀಸನ್​ ಸಮೀಪಿಸುತ್ತಿರುವಾಗಲೇ ಚಿನ್ನ ಹಾಗೂ ಬೆಳ್ಳಿಯ ದರ ಮತ್ತೆ ಏರಿಕೆಯ ಹಾದಿ ತುಳಿದಿರುವುದು ಶ್ರೀ ಸಾಮಾನ್ಯರ ನಿದ್ದೆಗೆಡಿಸಿದೆ. 1 ಗ್ರಾಂ ಚಿನ್ನದ ದರದಲ್ಲಿ 285 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ 24 ಕ್ಯಾರಟ್​ ಅಪರಂಜಿ ಚಿನ್ನದ 1 ಗ್ರಾಂನ ಮೌಲ್ಯವು ಪ್ರಸ್ತುತ 15,928 ರೂಪಾಯಿ ಆಗಿದೆ.

Also Read : ರೈತರಿಗೆ ಎಚ್ಚರಿಕೆ: ಫೆಬ್ರವರಿ 25ರೊಳಗೆ ಹೀಗೆ ಕೆವೈಸಿ ಪೂರ್ಣಗೊಳಿಸುವುದು ಕಡ್ಡಾಯ

ಇತ್ತ 22ಕ್ಯಾರಟ್​ 1 ಗ್ರಾಂ ಚಿನ್ನದ ಮೌಲ್ಯವು 14, 600 ರೂಪಾಯಿ ಆಗಿದೆ. ಹಾಗೆಯೇ 18 ಕ್ಯಾರೆಟ್​ 1 ಗ್ರಾಂ ಚಿನ್ನದ ದರವು 11,946 ರೂಪಾಯಿ ಆಗಿದೆ. 10 ಗ್ರಾಂ ತೂಕದ 24 ಕ್ಯಾರೆಟ್​ ಚಿನ್ನದ ದರವು 1,46,000 ರೂಪಾಯಿ ಆಗಿದ್ದರೆ, ಚಿನ್ನಾಭರಣ ತಯಾರಿಕೆಗೆ ಬಳಸುವ 22 ಕ್ಯಾರೆಟ್​ ಬಂಗಾರದ ಬೆಲೆಯು 1,59,280 ರೂಪಾಯಿ ಆಗಿದೆ.

ಇನ್ನು ಬೆಳ್ಳಿಯ ದರದಲ್ಲಿಯೂ ಏರಿಕೆ ಕಂಡುಬಂದಿದ್ದು 1 ಗ್ರಾಂ ಬೆಳ್ಳಿಯ ದರದಲ್ಲಿ 20 ರೂಪಾಯಿ ಹೆಚ್ಚಾಗಿದೆ. ಪ್ರಸ್ತುತ 1 ಗ್ರಾಂ ಬೆಳ್ಳಿಯ ದರವು 275 ರೂಪಾಯಿ ಆಗಿದ್ದರೆ 100 ಗ್ರಾಂ ಬೆಳ್ಳಿ ದರವು 27,500 ರೂಪಾಯಿ ಆಗಿದೆ. ಅಂತೆಯೇ 1 ಕೆ.ಜಿ ಬೆಳ್ಳಿಯ ದರವು 2,75,000 ರೂಪಾಯಿ ತಲುಪಿದೆ.

Also Read : ಜನನ-ಮರಣ ಪ್ರಮಾಣ ಪತ್ರ ಪಡೆಯುವುದು ಮತ್ತಷ್ಟು ಸುಲಭ; ಆನ್​ಲೈನ್​ನಲ್ಲೇ ಸಿಗಲಿದೆ ಮಾಹಿತಿ

Why Gold and Silver Prices are Climbing Again—What it Means for Your Next Purchase

About The Author

Scroll to Top