ಜನನ-ಮರಣ ಪ್ರಮಾಣ ಪತ್ರ ಪಡೆಯುವುದು ಮತ್ತಷ್ಟು ಸುಲಭ; ಆನ್​ಲೈನ್​ನಲ್ಲೇ ಸಿಗಲಿದೆ ಮಾಹಿತಿ

sevasindhu karnataka gov in | Birth and Death Certificates Online: ಜನನ – ಮರಣ ಪ್ರಮಾಣ ಪತ್ರ ಪಡೆಯುವುದು ಒಂದು ಪ್ರಯಾಸದ ಕೆಲಸವೇ ಆಗಿತ್ತು. ಕಚೇರಿಯಿಂದ ಕಚೇರಿಗೆ ಅಲೆದಾಟವಂತೂ ಎಂತವರನ್ನು ಹೈರಾಣಾಗಿಸುತ್ತಿತ್ತು. ಆಸ್ಪತ್ರೆಯಿಂದ ಸ್ಥಳೀಯ ಸಂಸ್ಥೆಗಳಿಗೆ ಅಲೆದಾಟ ಮಾಡುವವರು ಸುಸ್ತಾಗಿ ಹೋಗುತ್ತಿದ್ದರು. ಆದರೆ ಇನ್ಮುಂದೆ ಈ ತೊಂದರೆಯಿಲ್ಲ. ಏಕೆಂದರೆ ಆನ್​ಲೈನ್​ನಲ್ಲಿಯೇ ಇನ್ಮುಂದೆ ಜನನ ಹಾಗೂ ಮರಣ ಪ್ರಮಾಣಪತ್ರವನ್ನು ಪಡೆಯಬಹುದಾಗಿದೆ. ಡಿಜಿಟಲ್ ಕರ್ನಾಟಕದ ‘ಸೇವಾ ಸಿಂಧು’ವಿನ ಕಾರ್ಯಗಳನ್ನು ಮನೆಯಲ್ಲಿಯೇ ಕುಳಿತು ಆನ್​ಲೈನ್​ ಮೂಲಕ ಮಾಡಬಹುದಾಗಿದೆ.

ಜನನ ಹಾಗೂ ಮರಣ ಪ್ರಮಾಣಪತ್ರಗಳಿಗೆ 21 ದಿನಗಳ ಒಳಗಾಗಿ ಅರ್ಜಿ ಸಲ್ಲಿಸಿದರೆ ಕೇವಲ 15ರಿಂದ 30 ರೂಪಾಯಿಗಳ ಶುಲ್ಕ ಇರಲಿದೆ. 21 ದಿನಗಳ ಬಳಿಕ ಅರ್ಜಿ ಸಲ್ಲಿಕೆ ಮಾಡಿದರೆ ಅಫಿಡವಿಟ್​ ಹಾಗೂ ದಂಡ ಸಲ್ಲಿಸುವುದು ಕಡ್ಡಾಯವಾಗಿರಲಿದೆ.

ಅರ್ಜಿ ಸಲ್ಲಿಸುವ ಬಗೆ :
ಜನನ ಹಾಗೂ ಮರಣ ಪತ್ರಗಳಿಗೆ ಅರ್ಜಿ ಸಲ್ಲಿಕೆ ಮಾಡುವವರು sevasindhu.karnataka.gov.in ಸೇವಾ ಪೋರ್ಟಲ್​ಗೆ ಲಾಗಿನ್​ ಆಗಬೇಕು. ಇದರಲ್ಲಿ “Apply for Services” ಮತ್ತು ‘Birth’& ‘Death’ Certificate ಆಯ್ಕೆ ಮಾಡಬೇಕು.ನಿಮ್ಮ ಮೊಬೈಲ್​ ಸಂಖ್ಯೆ, ಹೆಸರು ಹಾಗೂ ಅಲ್ಲಿ ಕೇಳಲಾಗುವ ಅಗತ್ಯ ದಾಖಲೆಗಳನ್ನು ಸ್ಕ್ಯಾನ್​ ಮಾಡಿ ಅಪ್​ಲೋಡ್​ ಮಾಡಬೇಕು. ಒಮ್ಮೆ ಅರ್ಜಿ ವಿಲೇವಾರಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನೀವು ಡಿಜಿಟಲ್​ ಸಹಿ ಹೊಂದಿರುವ ಪ್ರಮಾಣಪತ್ರವನ್ನು ಡೌನ್​ಲೋಡ್​ ಮಾಡಿಕೊಳ್ಳಬಹುದಾಗಿದೆ.

ನಿಮ್ಮ ಅಧಿಕಾರ ದೇವೇಗೌಡರ ದೇಣಿಗೆ-ಸಿಎಂ ಸಿದ್ದರಾಮಯ್ಯ ವಿರುದ್ಧ ಎಚ್‌ಡಿ ಕುಮಾರಸ್ವಾಮಿ ಕಿಡಿ

ಈಗಲೂ ಆಫ್​ಲೈನ್​ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಮೊದಲಿನಂತೆಯೇ ನಾಡ ಕಚೇರಿ, ಗ್ರಾಮ ಪಂಚಾಯ್ತಿ, ಪುರಸಭೆ ಹಾಗೂ ನಗರಸಭೆಗಳಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶವಿದೆ. ಆನ್​ಲೈನ್​ ಅರ್ಜಿ ಸಲ್ಲಿಕೆ ಕಷ್ಟ ಎನಿಸುವವರು ಮೊದಲಿನ ಪದ್ಧತಿಯ ಮೂಲಕವೇ ಜನನ ಹಾಗೂ ಮರಣ ಪ್ರಮಾಣಪತ್ರವನ್ನು ಪಡೆಯಬಹುದಾಗಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories