ಸಖತ್ ಹಾಟ್ ಆಗಿದೆ ‘ಮಲಾಂಗ್’ : ಯೂಟ್ಯೂಬ್ ನಲ್ಲಿ ನಶೆಯೇರಿಸಿದ ದಿಶಾ !

0

ಆದಿತ್ಯ ರಾಯ್ ಕಪೂರ್ ಮತ್ತು ದಿಶಾ ಪಠಾಣಿ ಅಭಿನಯದ ಮಲಾಂಗ್ ಚಿತ್ರದ ಸಖತ್ ಹಾಟ್ ಆಗಿ ಮೂಡಿಬಂದಿದೆ. ಮೋಹಿತ್ ಸೂರಿ ನಿರ್ದೇಶಿಸಿರೋ ಸಿನಿಮಾದಲ್ಲಿ ದಿಶಾ ಪಠಾಣಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

ವಿಭಿನ್ನ ರೀತಿಯ ಕಿಸ್ ಪೋಸ್ಟರ್​ನಿಂದಲೇ ಸಿನಿರಸಿಕರಲ್ಲಿ ಕಿಚ್ಚು ಹಚ್ಚಿದ್ದ ಬಾಲಿವುಡ್​ ಮಲಾಂಗ್​ ಚಿತ್ರ ಇದೀಗ ಟ್ರೈಲರ್​ನಿಂದಲೂ ಬಾರೀ ಸದ್ದು ಮಾಡುತ್ತಿದೆ.

ಚಿತ್ರದಲ್ಲಿ ಬಾಲಿವುಡ್​ ಬೋಲ್ಡ್​ ಬ್ಯೂಟಿ ದಿಶಾ ಪಾಟನಿ ಹಾಗೂ ನಟ ಆದಿತ್ಯ ರಾಯ್​ ಕಪೂರ್​ ಚುಂಬನದ ಪೋಸ್ಟರ್​ ವೈರಲ್​ ಆಗಿತ್ತು. ಇದೀಗ ಟ್ರೈಲರ್​ನಲ್ಲೂ ಬಿಕಿನಿ ಉಡುಗೆಯ ಮೂಲಕ ಪಡ್ಡೆ ಹುಡುಗರ ನಿದ್ದೆಗೆ ದಿಶಾ ಭಂಗ ತಂದಿದ್ದಾರೆ.

ಇನ್ನೂ ಆದಿತ್ಯಾ ಮತ್ತು ದಿಶಾ ಅವರ ಸಾಕಷ್ಟು ರೋಮ್ಯಾಂಟಿಕ್​​ ದೃಶ್ಯಗಳು ಟ್ರೈಲರ್​ನಲ್ಲಿದೆ. ಯೂಟ್ಯೂಬ್ ನಲ್ಲಿ ಮಲಾಂಗ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು,​ ಯೂಟ್ಯೂಬ್​ನಲ್ಲಿ ದಾಖಲೆ ಬರೆಯುತ್ತಿದೆ. ಬಿಕಿನಿ ಲುಕ್​ನಲ್ಲಿ ಮಿಂಚಿರೋ ದಿಶಾ ಪಠಾಣಿ ನಶೆಯೇರಿಸುತ್ತಿದ್ದಾರೆ.


ಸಿನಿಮಾಕ್ಕೆ ಚಿತ್ರವನ್ನು ಟಿ-ಸೀರೀಸ್​, ಎಲ್​ಯುವಿ ರಂಜನ್​, ಅಂಕುರ್​ ಗಾರ್ಗ್​ ಮತ್ತು ಜಯ್​ ಶೇವಕ್ರಮಣಿ ಬಂಡವಾಳ ಹೂಡಿದ್ದಾರೆ.

ಮಲಾಂಗ್ ಸಿನಿಮಾ ಟ್ರೈಲರ್​ ಸಂಪೂರ್ಣ ಆ್ಯಕ್ಷನ್​ ಮತ್ತು ರೋಮ್ಯಾಂಟಿಕ್​ ದೃಶ್ಯಗಳಿಂದ ಕೂಡಿದ್ದು, ಬಾಲಿವುಡ್​ ಸಿನಿ ದಿಗ್ಗಜ ಅನಿಲ್​ ಕಪೂರ್​ ಪೊಲೀಸ್​ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಯೂಟ್ಯೂಬ್ ನಲ್ಲಿ ಈಗಾಗಲೇ ದಾಖಲೆಯನ್ನು ಬರೆದಿರುವ ಸಿನಿಮಾದ ಟ್ರೈಲರ್ ನ್ನು ಈಗಾಗಲೇ 3 ಕೋಟಿ ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

Leave A Reply

Your email address will not be published.