The Kashmir Files : 20 ಕೋಟಿ ಬಂಡವಾಳಕ್ಕೆ 231 ಕೋಟಿ ಆದಾಯ: ಇದು ದಿ‌ ಕಾಶ್ಮೀರಿ ಫೈಲ್ಸ್ ಸಾಧನೆ

ಕರ್ಮಷಿಯಲ್ ಸಿನಿಮಾಗಳು ಹಾಗೂ ಸ್ಟಾರ್ ನಟರ ಸಿನಿಮಾಗಳು ಕೋಟ್ಯಾಂತರ ರೂಪಾಯಿ ಆದಾಯ ಗಳಿಸೋದು ಬಾಕ್ಸಾಫೀಸ್ ನಲ್ಲಿ ಮೋಡಿ ಮಾಡಿ ಧೂಳೆಬ್ಬಿಸೋದು ಕಾಮನ್. ಆದರೆ ಇದೇ‌ ಮೊದಲ ಬಾರಿಗೆ ದೇಶದ ಆಂತರಿಕ ದುರಂತವೊಂದನ್ನು ಬಿಚ್ಚಿಡುವ ದಿ‌ ಕಾಶ್ಮೀರಿ ಫೈಲ್ಸ್ (The Kashmir Files )ಕತೆ ಕೋಟಿ ಕೋಟಿ ಸಂಪಾದಿಸಿದ್ದು, ಬಂಡವಾಳದ ದುಪ್ಪಟ್ಟು ಲಾಭ ಗಳಿಸಿ ಸದ್ದು ಮಾಡಿದೆ.

ಸದ್ಯ ದೇಶದಲ್ಲಿ ಸ್ಟಾರ್ ನಟರ ಸಿನಿಮಾಗಿಂತ ಹೆಚ್ಚು ಸದ್ದು ‌ಮಾಡ್ತಿರೋದು ದಿ ಕಾಶ್ಮೀರಿ ಫೈಲ್ಸ್ (The Kashmir Files) ಸಿನಿಮಾ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಸಿನಿಮಾ ಯಾವ ಕಮರ್ಷಿಯಲ್ ಸಿನಿಮಾಗೂ ಕಡಿಮೆಯಿಲ್ಲದಷ್ಟು ಲಾಭ ಪಡೆದಿದ್ದು, ಜನಪ್ರಿಯತೆಯ ಉತ್ತುಂಗದಲ್ಲಿದೆ. ಈ ಹಿಂದೆ ವಿಕ್ಕಿ ಕೌಶಲ್ ನಟನೆಯ ಉರಿ ಸಿನಿಮಾ ಗಳಿಸಿದ್ದ ಜನಪ್ರಿಯತೆ ಹಾಗೂ ಗಳಿಕೆಯನ್ನು ದಿ ಕಾಶ್ಮೀರಿ ಫೈಲ್ಸ್ ಮುರಿದಿದ್ದು, ಅಂದಾಜು ೨೦೦ ಕೋಟಿಗೂ ಅಧಿಕ ಲಾಭ ಪಡೆದಿದೆ ಎಂದು ಅಂದಾಜಿಸಲಾಗುತ್ತಿದೆ.

ಮೂಲದ ಮಾಹಿತಿಯ ಪ್ರಕಾರ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ತಯಾರಾಗಿರುವುದು 20 ಕೋಟಿ ರೂಪಾಯಿ ಬಜೆಟ್​ನಲ್ಲಿ. ಆದರೆ ಈ ಸಿನಿಮಾ ಈವರೆಗೂ ಅಂದ್ರೇ ತೆರೆಕಂಡ 18 ದಿನದಲ್ಲಿ ಗಳಿಸಿರುವುದು ಬರೋಬ್ಬರಿ 231 ಕೋಟಿ ರೂಪಾಯಿ. ಆ ಮೂಲಕ ಬಾಲಿವುಡ್​ನಲ್ಲಿ ಅತಿ ಹೆಚ್ಚು ಲಾಭ ಮಾಡಿದ ಸಿನಿಮಾ ಎಂಬ ಖ್ಯಾತಿಗೆ ಈ ಚಿತ್ರ ಪಾತ್ರವಾಗಿದೆ.

ಇದರ ಜೊತೆ ಜೊತೆಗೆ ಇನ್ನೂ ದೇಶದ ಹಲವು ರಾಜ್ಯದಲ್ಲಿ ಕಾಶ್ಮೀರಿ ಫೈಲ್ಸ್ ತನ್ನ ಯಶಸ್ವಿ ಪ್ರದರ್ಶನ ಮುಂದುವರೆಸಿದೆ. ಮಾತ್ರವಲ್ಲ ಸಿನಿಮಾದ ಕತೆ ಹಾಗೂ ನಿರೂಪಣೆಗೆ ಮೆಚ್ಚಿಕೊಂಡಿರುವ ಹಲವು ರಾಜ್ಯ ಸರ್ಕಾರಗಳು ಸಿನಿಮಾಕ್ಕೆ ತೆರಿಗೆ ವಿನಾಯ್ತಿ ಘೋಷಿಸಿವೆ. ಇನ್ನು ಈ ಸಿನಿಮಾದ ಯಶಸ್ಸಿಗೆ ಕಾರಣರಾದ ನಟ-ನಟಿಯರಿಗೆ ಚಿತ್ರತಂಡ ಎಷ್ಟು ಸಂಭಾವನೆ ನೀಡಿದೆ ಅನ್ನೋದನ್ನು ನೋಡೋದಾದರೇ, ನಟ ಮಿಥುನ್​ ಚಕ್ರವರ್ತಿ ಅವರಿಗೆ 1.5 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ. ಅನುಪಮ್​ ಖೇರ್​ ಅವರು 1 ಕೋಟಿ ರೂಪಾಯಿ ಪಡೆದಿದ್ದಾರೆ. ನಟಿ ಪಲ್ಲವಿ ಜೋಶಿ ಅವರಿಗೆ 50ರಿಂದ 70 ಲಕ್ಷ ರೂಪಾಯಿ ಸಂಭಾವನೆ ನೀಡಲಾಗಿದೆಯಂತೆ.

ಇನ್ನೂ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಅವರು ತಮ್ಮ ಕೆಲಸಕ್ಕೆ 1 ಕೋಟಿ ರೂಪಾಯಿ ಸಂಬಳ ಪಡೆದಿದ್ದಾರೆ ಎಂದು ವರದಿ ಆಗಿದೆ.ಯುವ ನಟ ದರ್ಶನ್​ ಕುಮಾರ್​ ಅವರಿಗೆ 45 ಲಕ್ಷ ರೂಪಾಯಿ ನೀಡಲಾಗಿದೆ. ಪುನೀತ್​ ಇಸ್ಸಾರ್​ ಮತ್ತು ಮೃಣಾಲ್​ ಕುಲಕರ್ಣಿ ಅವರು ತಲಾ 50 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಈ ಚಿತ್ರಕ್ಕೆ ಅಭಿಷೇಕ್​ ಅಗರ್​ವಾಲ್​ ಬಂಡವಾಳ ಹೂಡಿದ್ದಾರೆ. 1990ರ ಸಮಯದಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಆಧರಿಸಿ ಈ ಸಿನಿಮಾ ತಯಾರಾಗಿದೆ. ಈಗಲೂ ಅನೇಕ ಕಡೆಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ಕಾಂಗ್ರೆಸ್ ಸೇರಿದಂತೆ ಎಡಪಕ್ಷಗಳ ಟೀಕೆಗೂ ಸಿನಿಮಾ ಗುರಿಯಾಗಿದೆ.

ಇದನ್ನೂ ಓದಿ :  ಕೆಜಿಎಫ್-2 ಟ್ರೇಲರ್ ಲಾಂಚ್ ನಲ್ಲಿ ರಾಧಿಕಾ‌ ಮಾತು : ಸಿನಿಮಾ ಬಗ್ಗೆ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ಹೇಳಿದ್ದೇನು ಗೊತ್ತಾ ?

ಇದನ್ನೂ ಓದಿ : ಸೋಷಿಯಲ್ ಮೀಡಿಯಾದಲ್ಲಿ ಸನ್ನಿ ಮೇನಿಯಾ : ಮಾಲ್ಡೀವ್ಸ್ ಹಾಟ್ ವಿಡಿಯೋ ವೈರಲ್

20 crore investment 231 crore profit The Kashmir Files Cinema Success Secret

Comments are closed.