2022 Most Searched Movies : 2022ರಲ್ಲಿ ಗೂಗಲ್‌ನಲ್ಲಿ ಅತಿಹೆಚ್ಚು ಭಾರತದಲ್ಲಿ ಸರ್ಚ್ ಆದ 10 ಸಿನಿಮಾಗಳ ಪಟ್ಟಿ : ಕಾಂತಾರಕ್ಕೆ 5ನೇ ಸ್ಥಾನ, ಕೆಜಿಎಫ್‌ಗೆ ಎಷ್ಟು ?

ಸಿನಿಮಾರಂಗಕ್ಕೆ 2022 ಗೋಲ್ಡನ್ ಇಯರ್ ಎಂದರೆ ಸುಳ್ಳಲ್ಲ. ಯಾಕೆಂದರೆ ಕಳೆದೆರಡು ವರ್ಷಗಳಿಂದ ಕೋವಿಡ್ ಹೊಡೆತಕ್ಕೆ ಸಿಲುಕಿ ಸರಿಯಾದ ವ್ಯವಹಾರ ಕಾಣದೇ ಮಂಕಾಗಿದ್ದ ಎಲ್ಲಾ ಭಾಷೆಯ ಸಿನಿರಂಗಗಳೂ ಸುಧಾರಿಸಿಕೊಂಡದ್ದು ಈ ವರ್ಷದಲ್ಲಿ ಎಂದರೆ (2022 Most Searched Movies) ತಪ್ಪಾಗಲಾರದು. ಅದರಲ್ಲಿಯೂ ದಕ್ಷಿಣ ಭಾರತ ಸಿನಿಮಾಕ್ಷೇತ್ರಗಳು ಈ ವರ್ಷ ಸಿನಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಹಾಗೂ ಬಾಕ್ಸ್ ಆಫೀಸ್ ಕಲೆಕ್ಷನ್‌ ವಿಚಾರದಲ್ಲಿಯೂ ಬಾಲಿವುಡ್‌ ಸಿನಿರಂಗವನ್ನೇ ಮೀರಿಸಿದ್ದು ವಿಶೇಷ ಎನ್ನಬಹುದು.

ಕೇವಲ ಬಾಲಿವುಡ್ ಸಿನಿರಂಗಕ್ಕಿಂತ ಹೆಚ್ಚಿನ ಸದ್ದು ಮಾಡಿದ್ದು ಮಾತ್ರವಲ್ಲದೇ ಬಾಲಿವುಡ್ ಮಾರ್ಕೆಟ್‌ನಲ್ಲಿಯೂ ಕೋಟಿ ಕೋಟಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಕಂಡಿದ್ದು ಸೌತ್ ಸಿನಿಮಾಗಳು. ಹೀಗೆ ಈ ವರ್ಷ ಸಂಪೂರ್ಣವಾಗಿ ಸೌತ್ ಸಿನಿಮಾಗಳ ಪಾರುಪತ್ಯದಿಂದ ಕೂಡಿತ್ತು ಎಂದೇ ಹೇಳಬಹುದು. ಇನ್ನು ದಕ್ಷಿಣ ಭಾರತ ಸಿನಿಮಾಗಳ ಅಬ್ಬರದ ನಡುವೆ ಬಾಲಿವುಡ್‌ನ ಕೆಲ ಸಿನಿಮಾಗಳು ಸಹ ಒಳ್ಳೆಯ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗಿವೆ.

ಹೀಗೆ ಈ ವರ್ಷ ಹಲವಾರು ಸಿನಿಮಾಗಳು ಅಬ್ಬರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿಯೂ ಈ ಸಿನಿಮಾಗಳ ಕುರಿತಾಗಿ ಸಾಕಷ್ಟು ಚರ್ಚೆಗಳು ನಡೆದಿವೆ ಹಾಗೂ ಗೂಗಲ್‌ನಲ್ಲೂ ಸಹ ಈ ಸಿನಿಮಾಗಳ ಹೆಸರನ್ನು ಅಭಿಮಾನಿಗಳು ಹುಡುಕಾಡಿದ್ದಾರೆ. ಇನ್ನು ವರ್ಷದ ಅಂತಿಮ ತಿಂಗಳಿನಲ್ಲಿ ಯಾವ ಹತ್ತು ಸಿನಿಮಾಗಳನ್ನು ಭಾರತೀಯರು ಹೆಚ್ಚಾಗಿ ಗೂಗಲನ್‌ಲ್ಲಿ ಹುಡುಕಾಡಿದ್ದಾರೆ ಎಂಬ ಪಟ್ಟಿಯನ್ನು ಸ್ವತಃ ಗೂಗಲ್ ಬಿಡುಗಡೆಗೊಳಿಸಿದ್ದು, ಆ ಪಟ್ಟಿ ಈ ಕೆಳಕಂಡಂತಿದೆ.

ಗೂಗಲ್‌ನಲ್ಲಿ ಅತಿಹೆಚ್ಚು ಸರ್ಚ್ ಆದ ಹತ್ತು ಚಿತ್ರಗಳ ವಿವರ :

  1. ಬ್ರಹ್ಮಾಸ್ತ್ರ – ಪಾರ್ಟ್ 1 ಶಿವ
  2. ಕೆಜಿಎಫ್ ಚಾಪ್ಟರ್ 2
  3. ದಿ ಕಾಶ್ಮೀರ್ ಫೈಲ್ಸ್
  4. ಆರ್ ಆರ್ ಆರ್
  5. ಕಾಂತಾರ
  6. ಪುಷ್ಪ – ದಿ ರೈಸ್
  7. ವಿಕ್ರಮ್
  8. ಲಾಲ್ ಸಿಂಗ್ ಛಡ್ಡಾ
  9. ದೃಶ್ಯಂ 2
  10. ಥೋರ್: ಲವ್ ಅಂಡ್ ಥಂಡರ್

ಕನ್ನಡದ ಎರಡು ಸಿನಿಮಾಗಳು ಇನ್ನು ಕನ್ನಡದ ಕಾಂತಾರ ಹಾಗೂ ಕೆಜಿಎಫ್ ಚಾಪ್ಟರ್ 2 ಸಿನಿಮಾಗಳು ಈ ವರ್ಷ ಗೂಗಲ್‌ನಲ್ಲಿ ಭಾರತೀಯರಿಂದ ಅತಿಹೆಚ್ಚು ಬಾರಿ ಹುಡುಕಲ್ಪಟ್ಟ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ. ಕೆಜಿಎಫ್ ಸೃಷ್ಟಿಸಿದ್ದ ಹೈಪ್ ಹಾಗೂ ಬಿಡುಗಡೆಯಾದ ನಂತರ ಮಾಡಿದ ಮೋಡಿ ಮತ್ತು ಕಲೆಕ್ಷನ್‌ನಿಂದಾಗಿ ಹೆಚ್ಚು ಹುಡುಕಲ್ಪಟ್ಟರೆ, ಕಾಂತಾರ ಸಿನಿಮಾವನ್ನು ಸಹ ಸಿನಿಪ್ರೇಕ್ಷಕರು ಹೆಚ್ಚಿನ ಮಟ್ಟದಲ್ಲಿ ಹುಡುಕಾಡಿದ್ದಾರೆ.

ಇದನ್ನೂ ಓದಿ : Kantara Movie in English : ಇಂಗ್ಲೀಷ್‌ ಭಾಷೆಗೆ ಡಬ್‌ ಆಗಲಿದೆ ರಿಷಬ್‌ ಶೆಟ್ಟಿ ನಟನೆಯ “ಕಾಂತಾರ”

ಇದನ್ನೂ ಓದಿ : Krishna G Rao: ಕೆಜಿಎಫ್ ತಾತ ಕೃಷ್ಣ ಜಿ ರಾವ್ ಇನ್ನಿಲ್ಲ; ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರು

ಇದನ್ನೂ ಓದಿ : Tanuja Movie Trailer Release : ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಬಿ.ಎಸ್ ಯಡಿಯೂರಪ್ಪ : ಸಚಿವ ಸುಧಾಕರ್‌ ಪಾತ್ರ ಏನು ಗೊತ್ತಾ ?

ಎರಡೇ ತಿಂಗಳಲ್ಲಿ ಅತಿಹೆಚ್ಚಾಗಿ ಹುಡುಕಲ್ಪಟ್ಟ ಕಾಂತಾರ ಇನ್ನು ಈ ಪಟ್ಟಿಯಲ್ಲಿ ಕಾಂತಾರ ಐದನೇ ಸ್ಥಾನ ಗಿಟ್ಟಿಸಿಕೊಂಡಿರುವುದು ಬಲು ವಿಶೇಷ ಎಂದೇ ಹೇಳಬಹುದು. ಏಕೆಂದರೆ ಉಳಿದೆಲ್ಲಾ ಸಿನಿಮಾಗಳು ಬಿಡುಗಡೆಗೂ ಮುಂಚಿನಿಂದಲೂ ಸಾಕಷ್ಟು ಹೈಪ್ ಇತ್ತು. ಹೀಗಾಗಿ ಆ ಸಿನಿಮಾಗಳ ಬಗ್ಗೆ ನೆಟ್ಟಿಗರು ಹುಡುಕಾಟ ನಡೆಸಿದ್ದರು. ಆದರೆ ಕಾಂತಾರ ಸಿನಿಮಾ ಬಿಡುಗಡೆಗೂ ಮುನ್ನ ಹೆಚ್ಚೇನೂ ಹುಡುಕಲ್ಪಟ್ಟಿರಲಿಲ್ಲ. ಇನ್ನು ಕಾಂತಾರ ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ತೆರೆ ಕಂಡಿದೆ. ಹೀಗಾಗಿ ಕೇವಲ ಎರಡು ತಿಂಗಳುಗಳ ಅಂತರದಲ್ಲಿ ಕಾಂತಾರ ಸಿನಿಮಾದ ಬಗ್ಗೆ ಗೂಗಲ್‌ನಲ್ಲಿ ಇಷ್ಟರ ಮಟ್ಟಕ್ಕೆ ನೆಟ್ಟಿಗರು ಹುಡುಕಿರುವುದು ವಿಶೇಷವೇ ಸರಿ.

2022 Most Searched Movies: The list of 10 most searched movies on Google in 2022: 5th place for Kantara, how much for KGF?

Comments are closed.