Suicide Case: ಲಾಡ್ಜ್‌ ನಲ್ಲಿ ನೇಣಿಗೆ ಶರಣಾದ ಯುವಕ-ಯುವತಿ: ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ

ಧಾರವಾಡ: (Suicide Case) ಲಾಡ್ಜ್‌ನಲ್ಲಿ ಯುವ ಜೋಡಿಯೊಂದು ಒಂದೆ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ಜಿಲ್ಲೆ ನವಲಗುಂದದ ಪಟ್ಟಣದ ಲಾಡ್ಜ್‌ನಲ್ಲಿ ನಿನ್ನೆ ರಾತ್ರಿ ನಡೆದಿದೆ. ನವಲಗುಂದ ಪಟ್ಟಣದ ಅಶೋಕ ಲಾಡ್ಜ್‌ವೊಂದರ ಫ್ಯಾನಿಗೆ ಜೋಡಿಯಾಗಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ಇವರನ್ನು ಕುಮಾರ ತಳವಾರ ಹಾಗೂ ದೀಪಾ ಎಂದು ಹೇಳಲಾಗುತ್ತಿದೆ.

ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ಬಸ್ ನಿಲ್ದಾಣದ ಎದುರಿನ ಅಶೋಕ ಲಾಡ್ಜ್‌ನಲ್ಲಿ ಹೀಗೆ ನೇಣು ಕುಣಿಕೆಗೆ ಕೊರಳೊಡ್ಡಿದ (Suicide Case) ಇವರನ್ನು ಆರಂಭದಲ್ಲಿ ಎಲ್ಲರೂ ಪ್ರೇಮಿಗಳೇ ಇರಬಹುದೆಂದು ಭಾವಿಸಿದ್ದರು. ಆದರೆ ಆ ಬಳಿಕ ಬಯಲಾದ ಅಚ್ಚರಿಯ ಸಂಗತಿ ಅಂದ್ರೆ ಸಂಬಂಧದಲ್ಲಿ ಇವರಿಬ್ಬರು ಅಣ್ಣ-ತಂಗಿ ಎಂದು ಸಂಬಂಧಿಕರೆ ಹೇಳಿಕೊಂಡಿದ್ದಾರೆ.

ಜೋಡಿಯಾಗಿಯೇ ನೇಣಿಗೆ ಶರಣಾಗಿರೋ ಇವರು ರಕ್ತ ಸಂಬಂಧದಲ್ಲಿ ಅಕ್ಕ ತಂಗಿಯರ ಮಕ್ಕಳು.ಹೀಗಾಗಿ ಇವರಿಬ್ಬರ ಆತ್ಮಹತ್ಯೆ ಅನೇಕ ಸಂಶಯಗಳಿಗೆ ಕಾರಣವಾಗಿದೆ. ಇಬ್ಬರ ಮಧ್ಯೆ ಅಣ್ಣ ತಂಗಿ ಸಂಬಂಧವನ್ನು ಮೀರುವ ಪ್ರೀತಿ ಉಂಟಾಗಿದ್ದು, ಅದೇ ಕಾರಣಕ್ಕೆ ಈ ರೀತಿಯಾಗಿ ಮಾಡಿಕೊಂಡಿರುವುದು ಸರಿಯಲ್ಲ ಅನ್ನೋ ಭಾವನೆ ಸಂಬಂಧಿಕರದ್ದು.

22 ವಯಸ್ಸಿನ ಕುಮಾರ ನವಲಗುಂದ ತಾಲೂಕಿನ ಬೆಳವಟಗಿ ಗ್ರಾಮದವನು. ದೀಪಾ ಧಾರವಾಡ ತಾಲೂಕಿನ ನೀರಲಕಟ್ಟಿ ಗ್ರಾಮದ ಯುವತಿ. ಇಬ್ಬರ ತಾಯಿಯಂದಿರೂ ಅಕ್ಕತಂಗಿಯರು‌. ಹೀಗಾಗಿ ಕುಮಾರ ಮತ್ತು ದೀಪಾ‌ ಜೋಡಿಯಾಗಿ ಓಡಾಡುವಾಗ ಇವರ ಸಂಬಂಧದ ಬಗ್ಗೆ ಯಾರಿಗೂ ಸಂಶಯ ಬರುತ್ತಿರಲಿಲ್ಲ. ಇನ್ನು ಧಾರವಾಡಲ್ಲಿ ಕೆಲಸ ಹಿಡಿತೇನಿ. ಕಂಪನಿಯೊಂದರಲ್ಲಿ ಕೆಲಸ ಸಿಗೋದು ಇದೇ ಇದೆ ಅಂತಾ ಹೇಳಿಕೊಂಡು ಆಗಾಗ ನೀರಲಕಟ್ಟಿಯ ಚಿಕ್ಕಮ್ಮನ ಮನೆಗೆ ಬರುತ್ತಿದ್ದ ಕುಮಾರ ತಿಂಗಳಾನುಗಟ್ಟಲೇ ಚಿಕ್ಕಮ್ಮನ ಮನೆಯಲ್ಲಿಯೇ ಉಳಿದು ಬಿಡುತ್ತಿದ್ದಂತೆ.

ಡಿಸೆಂಬರ್ 5ರಂದು ಕುಮಾರ, ಬೆಂಗಳೂರಿನಲ್ಲಿ ಕೆಲಸ ಸಿಕ್ಕಿದೆ ಹೋಗುತ್ತೇನೆ ಅಂತಾ ತನ್ನ ಮನೆಯಲ್ಲಿ ಹೇಳಿ ಹೋಗಿದ್ದಾನೆ. ಅತ್ತ ಪಿಯುಸಿ ಓದುತ್ತಿರೋ ದೀಪಾ, ಡಿ. 5ರಂದು ಕಾಲೇಜ್‌ಗೆ ಹೋದವಳು ಮನೆಗೆ ವಾಪಸ್ ಬಂದಿರಲೇ‌ ಇಲ್ಲ. ಅಣ್ಣ ತಂಗಿ ಇಬ್ಬರು ಸೇರಿ ಊರಿಗೆ ಹೋಗಿರಬಹುದು ಎಂದುಕೊಂಡು ಮನೆಯವರೆಲ್ಲ ಸುಮ್ಮನಾಗಿ ಬಿಟ್ಟಿದ್ದಾರೆ. ಆದ್ರೆ ಇವರು ಅದೇ ಡಿ. 5ರಂದು ಅಶೋಕ ಲಾಡ್ಜ್ ನ ರೂಮಿನೊಳಗೆ ಸೇರಿಕೊಂಡವರು ಹೊರಗೆ ಬಂದೇ ಇಲ್ಲ. ಇಡೀ ದಿನ ರೂಮ್‌ ಬಾಗಿಲು ತೆಗೆಯಲಿಲ್ಲ ಎಂದು ಸಂಶಯ ಪಟ್ಟ ಲಾಡ್ಜ್‌ ನ ಸಿಬ್ಬಂದಿಗಳು, ಬಾಗಿಲು ತೆರದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರೋದು ಬಹಿರಂಗಗೊಂಡಿದೆ.

ಇದನ್ನೂ ಓದಿ : assault on a youth: ವಿಚಾರಣೆಗೆ ಹಾಜರಾಗದ ಎಸ್‌ ಎ ಶಕ್ತಿವೇಲು ಮತ್ತು ಪೊಲೀಸ್‌ ನಿರಕ್ಷಕ ಶರಣಗೌಡ ವಿರುದ್ದ ವಾರಂಟ್‌

ಇನ್ನು ಸ್ಥಳಕ್ಕೆ‌ ನವಲಗುಂದ ಪಿಎಸ್‌ಐ ನವೀನ್ ಜಕ್ಲಿ ಭೇಟಿ ನಿಡಿ ಪ್ರಕರಣವನ್ನ‌ ದಾಖಲಿಸಿಕೊಂಡಿದ್ದಾರೆ. ಇದು ನಿಜವಾಗಿಯೂ ಆತ್ಮಹತ್ಯೆಯಾ ಅಥವಾ ಯಾರಾದ್ರೂ ಕೊಲೆ ಮಾಡಿದ್ದಾರಾ ಅನ್ನೋ ಅನುಮಾನವನ್ನ ಸಂಬಂಧಿಕರು ಹೊರ ಹಾಕಿದ್ದಾರೆ. ಆದಷ್ಟು ಪೋಲಿಸರ ತನಿಖೆ ನಂತರವೇ ಇದು ಕೊಲೆನಾ, ಅಥವಾ ಇವರೇ ಆತ್ಮಹತ್ಯೆ ಮಾಡಿಕೊಂಡಿರುವುದಾ ಎಂಬುದು ಹೊರಬರಬೇಕಿದೆ. ಅಲ್ಲದೆ ರೂಂ ಬಾಡಿಗೆ ಕೊಡಿಸಿದವರ ವಿಚಾರಣೆಯನ್ನು ಕೂಡ ಪೋಲಿಸರು ಮುಂದುವರೆಸಿದ್ದಾರೆ.

(Suicide Case) The incident in which a young couple committed suicide by hanging themselves from a fan in a lodge took place last night at a lodge in Navlagunda town of Dharwad district. They are said to be Kumar Talwar and Deepa who committed suicide by hanging themselves from the fanny of an Ashoka Lodge in Navalagunda town.

Comments are closed.