Mysore Yuva Dussehra :ವಿದ್ಯಾರ್ಥಿ ದಿನಗಳಲ್ಲಿ ಮೈಸೂರು ದಸರಾದಲ್ಲಿ ಈ ಕೆಲಸ ಮಾಡ್ತಾ ಇದ್ರಂತೆ ಡಾಲಿ ಧನಂಜಯ

Mysore Yuva Dussehra : ಜಾತಿ ಮತ ಎಲ್ಲವನ್ನ ಮೀರಿ ದೇಶವನ್ನ ಕಟ್ಟಬೇಕು ಎಂದು ನಟ ಡಾಲಿ ಧನಂಜಯ ಹೇಳಿದ್ದಾರೆ. ವಿಶ್ವ ವಿಖ್ಯಾತ ಮೈಸೂರು ದಸರಾದ ಯುವ ದಸರಾದ ಯುವ ಸಂಭ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಡಾಲಿ ಮಾತನಾಡಿದ್ದಾರೆ. ಮೈಸೂರು ದಸರಾ ಅಂದ್ರೆ ಸಾಕಷ್ಟು ನೆನಪುಗಳು ಇದೆ ಎಂದು ಹೇಳಿರುವ ಧನಂಜಯ ನಾನು ಓದಬೇಕಾದ್ರೆ ಯುವ ದಸರಾ ಕಾರ್ಯಕ್ರಮ ಇಲ್ಲಿ ನಡೆಯುತ್ತಿತ್ತು. ನಾನು ಸಹ ಚೆನ್ನಾಗಿ ಕುಣಿದು ಎಂಜಾಯ್ ಮಾಡುತ್ತಿದೆ. ನಾಡ ಹಬ್ಬವನ್ನ ಜೋರಾಗಿ ಮಾಡಬೇಕು ಎಂದು ಹೇಳಿದ್ದಾರೆ.

ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳನ್ನು ತಿಳಿಸಿದ ನಟ ಡಾಲಿ ಗುರಿಯನ್ನಿಟ್ಟು ಕೆಲಸ ಮಾಡಿದ್ದಾರೆ ಯಶಸ್ಸು ಖಂಡಿತ ಎಂಬ ಸಲಹೆಯನ್ನು ಸಹ ವಿದ್ಯಾರ್ಥಿಗಳಿಗೆ ನೀಡಿದ್ದಾರೆ. ನಮ್ಮ ಏಳಿಗೆಗೆ ನಾವೇ ಶಿಲ್ಪಿಗಳು ಎಂದು ಸ್ವಾಮಿ ವಿವೇಕಾನಂದರ ವಚನ ಹೇಳಿದ ಡಾಲಿ, ರಾತ್ರೋ ರಾತ್ರಿ ಯಾರು ಬೆಳೆಯಲು ಸಾಧ್ಯವಿಲ್ಲಾ. 9 ವರ್ಷ ನಾನು ಕಷ್ಟ ಪಟ್ಟಿದ್ದೇನೆ.
ಹೀಗಾಗಿ ನಾನು ಸೆಲೆಬ್ರೇಷನ್ ಮಾಡುತ್ತಿದ್ದೇನೆ ಎಂದು ಹೇಳಿ ಖುಷಿ ಪಟ್ಟರು.

ನಮ್ಮ ಕೈಯಲ್ಲಿ ಏನಾಗುತ್ತೆ ಅಷ್ಟು ಸಹಾಯ ಮಾಡಬೇಕು. ಎಲ್ಲರ ಜೊತೆ ನಗುತ್ತಾ ಇರಿ‌ ಎಂದು ಬಸವಣ್ಣನವರ ವಚನ ಹೇಳುತ್ತಾ ಯುವ ಜನತೆಗೆ ಬುದ್ಧಿ ಮಾತು ಹೇಳಿದರು. ಕಷ್ಟ ಪಟ್ಟು ಬಡವ ರಾಸ್ಕಲ್ ಸಿನಿಮಾ ಮಾಡ್ದೆ. ಅದಕ್ಕೆ ನೀವೇ ಸಾಕ್ಷಿ ಎಂದ ಧನಂಜಯ್ ಅದು ನಾನು ಕನ್ನಡ ಸಿನಿಮಾಕ್ಕೆ ಕೊಟ್ಟ ಕೊಡುಗೆ‌ ಎಂದು ಹೇಳಿದರು. ಕುವೆಂಪು ಅವರನ್ನ ಎಂದಿಂದಿಗೂ ನೆನಪಿಸಿಕೊಳ್ಳಬೇಕು. ಪ್ರತಿಯೊಂದನ್ನ ಯೋಚನೆ ಮಾಡಿ.
ಜಾತಿ ಮತ ಎಲ್ಲವನ್ನ ಮೀರಿ ದೇಶವನ್ನ ಕಟ್ಟಬೇಕು ಎಂದರು.

ಮಾನ್ಸೂನ್ ರಾಗ್ ಸಿನಿಮಾ ಅತ್ಯುತ್ತಮವಾಗಿ ಮೂಡಿ ಬಂದಿದೆ. ಮುಂದಿನ ತಿಂಗಳು ಹೆಡ್ ಬುಷ್ ಸಿನಿಮಾ ಬಿಡುಗಡೆಯಾಗಲಿದೆ. ಎಲ್ಲರೂ ಚಿತ್ರಮಂದಿರದಲ್ಲೇ ಸಿನಿಮಾ ನೋಡಿ ಎಂದು ಡಾಲಿ ವಿನಂತಿಸಿದರು. ಟಗರು, ಬಡವರಾಸ್ಕಲ್, ಮಾನ್ಸೂನ್ ರಾಗ ಸಿನಿಮಾದ ಡೈಲಾಗ್ ಹೇಳಿದಕ್ಕೆ ಯುವಕರು ಫುಲ್ ಫಿದಾ ಆದರು‌.

ಇದೇ ಸಂದರ್ಭ ಕಾರ್ಯಕ್ರಮದಲ್ಲಿ ಮಾತನಾಡಿದ ಮೈಸೂರು ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಅದ್ದೂರಿ ದಸರಾ ನಡೆಸಲು ಸಿಎಂ ನಿರ್ಧರಿಸಿದ್ದಾರೆ. ಕರೊನಾ ಕಾರಣದಿಂದ ಎರಡು ವರ್ಷ ಸರಳವಾಗಿ ದಸರಾ ನಡೆದಿತ್ತು. ಕಾಲೇಜು ವಿದ್ಯಾರ್ಥಿಗಳಿಗೆ ಯುವ ಸಂಭ್ರಮ ಉತ್ತಮ ವೇದಿಕೆ ಎಂದು ಹೇಳಿದರು.

ಇದನ್ನು ಓದಿ : Mukesh Ambani :ತಿರುಮಲ ವೆಂಕಟೇಶ್ವರ ದೇಗುಲಕ್ಕೆ 1.5 ಕೋಟಿ ರೂಪಾಯಿ ಕಾಣಿಕೆ ಸಲ್ಲಿಸಿದ ಮುಕೇಶ್​ ಅಂಬಾನಿ

ಇದನ್ನೂ ಓದಿ : Mark Boucher MI Head Coach : ದಕ್ಷಿಣ ಆಫ್ರಿಕಾದ ದಿಗ್ಗಜ ಮುಂಬೈ ಇಂಡಿಯನ್ಸ್ ಕೋಚ್ ; ಮಾರ್ಕ್ ಬೌಷರ್ ಹೆಗಲೇರಿದ ಮುಂಬೈ ಗುರು ಪಟ್ಟ

Actor Dali Dhananjaya enjoying himself at Mysore Yuva Dussehra.

Comments are closed.