Actor Kollam sudhi Died : ಖ್ಯಾತ ಮಲಯಾಲಂ ಹಾಸ್ಯನಟ ಕೊಲ್ಲಂ ಸುಧಿ ಕಾರು ಅಪಘಾತದಲ್ಲಿ ಸಾವು

ತಿರುವನಂತರಪುರ : ಕಾರು ಅಪಘಾತದಲ್ಲಿ (Actor Kollam sudhi Died) ಖ್ಯಾತ ಮಲಯಾಲಂ ಹಾಸ್ಯನಟ ಮತ್ತು ಫ್ಲವರ್ಸ್ ಟಿವಿ ತಾರೆ ಕೊಲ್ಲಂ ಸುಧಿ ಕಾರು ಅಪಘಾತದಲ್ಲಿ ನಿಧನರಾದರು. ತ್ರಿಶೂರ್ ಕಯ್ಪಮಂಗಲಂ ಪಣಂಬಿಕುನ್ ಎಂಬಲ್ಲಿ ಈ ದುರ್ಘಟನೆ ನಡೆದಿದೆ. ನಟ ಪ್ರಯಾಣಿಸುತ್ತಿದ್ದ ವಾಹನವು ಪಿಕಪ್ ವ್ಯಾನ್‌ಗೆ ಡಿಕ್ಕಿ ಹೊಡೆದಿದೆ. ತೊಡುಪುಳಕ್ಕೆ ಸೇರಿದ ಪಿಕಪ್ ವ್ಯಾನ್ ನಟ ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಕೂಡ ಚಿಕಿತ್ಸೆ ಫಲಕಾರಿ ಆಗದೆ ಸಾವನ್ನಪ್ಪಿದ್ದಾರೆ.

ವಡಕರದಲ್ಲಿ ನಡೆದ ಟ್ವೆಂಟಿಫೋರ್ ಕನೆಕ್ಟ್‌ನ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ವಾಪಾಸಾಗುತ್ತಿದ್ದ ವೇಳೆಯಲ್ಲಿ ಈ ದುರಂತ ಸಂಭವಿಸಿದೆ. ಅಪಘಾತದಲ್ಲಿ ಬಿನು ಅಡಿಮಲಿ, ಉಲ್ಲಾಸ್, ಮಹೇಶ್ ಎಂಬುವರಿಗೂ ಗಾಯಗಳಾಗಿದೆ. ಆದರೆ ಯಾವುದೇ ಗಂಭೀರ ಸ್ವರೂಪದ ಗಾಯಗಳಿಲ್ಲ ಎಂದು ತಿಳಿದು ಬಂದಿದೆ. ಅಪಘಾತ ನಡೆದ ಕೆಲವೇ ಕ್ಷಣಗಳಲ್ಲಿ ಸುಧಿ ಅವರನ್ನು ಕೊಡಂಗಲ್ಲೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಯಿತು. ಆದರೆ ತೀವ್ರ ರಕ್ತಶ್ರಾವದಿಂದಾಗಿ ಅವರು ಕೊನೆಯುಸಿರೆಳೆದಿದ್ದಾರೆ. ಅಪಘಾತದ ತೀವ್ರತೆಗೆ ಕೊಲ್ಲಂ ಸುಧಿ ಅವರ ಕಾರು ನುಜ್ಜುಗುಜ್ಜಾಗಿದೆ.

ಇದನ್ನೂ ಓದಿ : Pavitra Lokesh and Naresh : ಪವಿತ್ರಾ‌ ಲೋಕೇಶ್ ಹಾಗೂ ನರೇಶ್ ‘ಮತ್ತೆ ಮದುವೆ’ : ಜೂನ್.9ಕ್ಕೆ ಸಿನಿಮಾ ರಿಲೀಸ್

ಸುಧಿ ಕೊಲ್ಲಂ ಹಲವು ವರ್ಷಗಳಿಂದ ಹಾಸ್ಯನಟರಾಗಿ ಗುರುತಿಸಿಕೊಂಡಿದ್ದಾರೆ. 2015ರಲ್ಲಿ ಕಾಂತಾರಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದರು. ಕಟ್ಟಪ್ಪನ ಚಿತ್ರದಲ್ಲಿ ರಿತಿಕ್ ರೋಷನ್, ಕುಟ್ಟನಾಡನ್ ಪಾಪಪಾಪ, ತೀಟ ರಪ್ಪೈ ಮತ್ತು ಕೇಶು ಈ ದಿಮಿನ ನಾಥನ್ ಗಮನಾರ್ಹ ಪಾತ್ರಗಳ ಮೂಲಕ ಜನರಿಗೆ ಇಷ್ಟವಾಗಿದ್ದರು. ಫ್ಲವರ್ಸ್ ಟಿವಿಯಲ್ಲಿ ಸ್ಟಾರ್ ಮ್ಯಾಜಿಕ್ ಕಾರ್ಯಕ್ರ ಸುಧಿ ಅವರಿಗೆ ಹೆಚ್ಚು ಪ್ರಖ್ಯಾತಿಯನ್ನು ತಂದುಕೊಟ್ಟಿತ್ತು.

Actor Kollam sudhi Died in Road accident Kerala

Comments are closed.