ನಗರ ಸಭೆ, ಪಟ್ಟಣ ಪಂಚಾಯತ್‌ನಲ್ಲಿ 1214 ಹುದ್ದೆಗಳಿಗೆ ಅರ್ಜಿ ಆಹ್ವಾನ

ಜಿಲ್ಲಾಧಿಕಾರಿಗಳ ಕಾರ್ಯಾಲಯ, ರಾಜ್ಯದ ವಿವಿಧ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್‌ನಲ್ಲಿ ಖಾಲಿ ಇರುವ (Karnataka City Corporation Recruitment 2023) 1214 ಪೌರ ಕಾರ್ಮಿಕರ ಹುದ್ದೆಗಳ (Post of civil workers) ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕಾಗಿದೆ.

ನಗರ ಸಭೆ ಮತ್ತು ಪಟ್ಟಣ ಪಂಚಾಯತ್‌ನಲ್ಲಿ ಖಾಲಿ ಇರುವ ಹುದ್ದೆಗಳ ವಿವರ :

ಹುದ್ದೆಗಳ ಹೆಸರು : ಪೌರಕಾರ್ಮಿಕ ಹುದ್ದೆ
ಒಟ್ಟು ಹುದ್ದೆಗಳು : 1214 ಹುದ್ದೆಗಳು

ನಗರ ಸಭೆ ಮತ್ತು ಪಟ್ಟಣ ಪಂಚಾಯತ್‌ನಲ್ಲಿ ಖಾಲಿ ಇರುವ ಜಿಲ್ಲೆವಾರು ಹುದ್ದೆಗಳ ಸಂಖ್ಯೆಯ ವಿವರ :

  • ಚಿಕ್ಕಬಳ್ಳಾಪುರ ಮಹಾನಗರ ಪಾಲಿಕೆ : 102 ಹುದ್ದೆಗಳು
  • ಹಾಸನ ಮಹಾನಗರ ಪಾಲಿಕೆ : 60 ಹುದ್ದೆಗಳು
  • ಬಾಗಲಕೋಟೆ ಮಹಾನಗರ ಪಾಲಿಕೆ : 438 ಹುದ್ದೆಗಳು
  • ವಿಜಯಪುರ ಮಹಾನಗರ ಪಾಲಿಕೆ : 151 ಹುದ್ದೆಗಳು
  • ದಾವಣಗೆರೆ ಮಹಾನಗರ ಪಾಲಿಕೆ : 114 ಹುದ್ದೆಗಳು
  • ಬಳ್ಳಾರಿ ಮಹಾನಗರ ಪಾಲಿಕೆ : 229 ಹುದ್ದೆಗಳು
  • ಚಿತ್ರದುರ್ಗ ಮಹಾನಗರ ಪಾಲಿಕೆ : 120 ಹುದ್ದೆಗಳು

ವಿದ್ಯಾರ್ಹತೆ ವಿವರ :
ಈ ಪೌರಕಾರ್ಮಿಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕನ್ನಡ ಮಾತನಾಡಲು ಗೊತ್ತಿರಬೇಕು. ದಿನಗೂಲಿ ಅಥವಾ ಗುತ್ತಿಗೆ ಅಥವಾ ಹೊರಗುತ್ತಿಗೆ ಅಥವಾ ಸಮಾನ ಕೆಲಸಕ್ಕೆ ಸಮಾನ ವೇತನದ ಆಧಾರದ ಮೇಲೆ ಕಾರು ನಿರ್ವಹಿಸುತ್ತಿರುವ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ವಯೋಮಿತಿ ವಿವರ :
ಈ ಪೌರ ಕಾರ್ಮಿಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ೧೮ ವರ್ಷ ವಯಸ್ಸು ಹಾಗೂ ಗರಿಷ್ಠ ೫೫ ವರ್ಷ ವಯೋಮಿತಿಯನ್ನು ಹೊಂದಿರಬೇಕಾಗುತ್ತದೆ.

ಸಂಬಳದ ವಿವರ :
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ. 17000 ದಿಂದ ರೂ. 28950 ರವರೆಗೆ ವೇತನವನ್ನು ನಿಗದಿಪಡಿಸಿರಲಾಗುತ್ತದೆ.

ಅರ್ಜಿ ಶುಲ್ಕ :
ಈ ಹುದ್ದೆಗಳಿಗೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಆಯ್ಕೆ ವಿಧಾನ :
ಈ ಹುದ್ದೆಗಳಿಗೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ನೇರ ನೇಮಕಾತಿಯ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ನಮೂನೆ ಪಡೆಯುವ ಮತ್ತು ಅರ್ಜಿ ಸಲ್ಲಿಸುವ ವಿಳಾಸ :

  • ಬಾಗಲಕೋಟೆ ನಗರ ನಿಯಮ : ಅಧ್ಯಕ್ಷರು, ಜಿಲ್ಲಾ ಆಯ್ಕೆ ಮತ್ತು ನಾಗರಿಕ ಸೇವಾ ನೇರ ನೇಮಕಾತಿ (ವಿಶೇಷ) ಪ್ರಾಧಿಕಾರ ಮತ್ತು ಉಪ ಆಯುಕ್ತರು, ಬಾಗಲಕೋಟೆ
  • ಚಿಕ್ಕಬಳ್ಳಾಪುರ ಮಹಾನಗರ ಪಾಲಿಕೆ : ಅಧ್ಯಕ್ಷರು, ಆಯ್ಕೆ ಮತ್ತು ನೇಮಕಾತಿ ಪ್ರಾಧಿಕಾರ, ಚಿಕ್ಕಬಳ್ಳಾಪುರ.
  • ಹಾಸನ ಮಹಾನಗರ ಪಾಲಿಕೆ : ಪೌರ ಆಯುಕ್ತರು, ನಗರ ಸಭೆ, ಹಾಸನ.
  • ವಿಜಯಪುರ ಮಹಾನಗರ ಪಾಲಿಕೆ : ಅಧ್ಯಕ್ಷರು, ನಾಗರಿಕ ಸೇವಾ ನೇರ ನೇಮಕಾತಿ (ವಿಶೇಷ) ಆಯ್ಕೆ ಪ್ರಾಧಿಕಾರ ಮತ್ತು ಆಯುಕ್ತರು, ವಿಜಯನಗರ ನಿಗಮ.
  • ದಾವಣಗೆರೆ ಮಹಾನಗರ ಪಾಲಿಕೆ : ದಾವಣಗೆರೆ ಮಹಾನಗರ ಪಾಲಿಕೆ ಕೇಂದ್ರ ಕಚೇರಿ, ರೈಲ್ವೆ ನಿಲ್ದಾಣದ ಎದುರು, ಪಿ.ಬಿ.ರಸ್ತೆ ದಾವಣಗೆರೆ.
  • ಬಳ್ಳಾರಿ ಮಹಾನಗರ ಪಾಲಿಕೆ : ಅಧ್ಯಕ್ಷರು, ನಾಗರಿಕ ಸೇವಾ ಹುದ್ದೆಗಳ ನೇರ ನೇಮಕಾತಿ (ವಿಶೇಷ) ಆಯ್ಕೆ ಪ್ರಾಧಿಕಾರ ಮತ್ತು ಜಿಲ್ಲಾಧಿಕಾರಿಗಳು, ಬಳ್ಳಾರಿ ಜಿಲ್ಲೆ.
  • ಚಿತ್ರದುರ್ಗ ಮಹಾನಗರ ಪಾಲಿಕೆ : ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿಕೋಶ, ಚಿತ್ರದುರ್ಗ.

ಇದನ್ನೂ ಓದಿ : ಬಾಗಲಕೋಟೆ ವಿಶ್ವವಿದ್ಯಾಲಯದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ : ನಮ್ಮ ಮೆಟ್ರೋದಲ್ಲಿ ಉದ್ಯೋಗ ಅವಕಾಶ : ಮಾಸಿಕ 1.65 ಲಕ್ಷ ರೂ.‌ವೇತನ ಕೂಡಲೇ ಅರ್ಜಿ ಸಲ್ಲಿಸಿ

ಇದನ್ನೂ ಓದಿ : Post Office Recruitment 2023 : ಅಂಚೆ ಇಲಾಖೆ ನೇಮಕಾತಿ : 98083 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ಸೂಚನೆ : ಆಸಕ್ತ ಮತ್ತು ಅರ್ಹ ಅಭ್ಯರ್ಥಗಳು ನಿಗರಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಪೆಬ್ರವರಿ 14, 2023ರಂದು ಅಥವಾ ಮೊದಲು ಈ ಮೇಳಿನ ವಿಳಾಸಗಳಿಗೆ ಕಳುಹಿಸಬೇಕಾಗುತ್ತದೆ.

Karnataka City Corporation Recruitment 2023 : Application invited for 1214 posts in Nagar Sabha, Pattana Panchayat

Comments are closed.